ಇಹಲೋಕ ತ್ಯಜಿಸಿದ ಕ್ಯಾಪ್ಟನ್​ ಎಂ.ವಿ ಪ್ರಾಂಜಲ್​ ಪಾರ್ಥಿವ ಶರೀರದ ಅಂತಿಮ ದರ್ಶನ: ಕಣ್ಣೀರಿನಲ್ಲಿ ಕುಟುಂಬಸ್ಥರು

Bengaluru: ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕದ (funeral of martyred soldier) ಯೋಧ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರು ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದು,

ಹುತಾತ್ಮ ಯೋಧ ಪ್ರಾಂಜಲ್​ರ (Pranjal) ಪಾರ್ಥಿವ ಶರೀರ ಹುಟ್ಟೂರಿಗೆ ಬಂದಿದೆ. ಪ್ರಾಣಾರ್ಪಣೆ ಮಾಡಿದ ಯೋಧ ಪ್ರಾಂಜಲ್​​​ ಶರೀರವನ್ನ ರಾಜ್ಯ ಸರ್ಕಾರ ಸ್ವೀಕರಿಸಿದ್ದು, ಸ್ನೇಹಿತರು, ಕುಟುಂಬಸ್ಥರು

ಹಾಗೂ ಗಣ್ಯರು ಗೌರವ (funeral of martyred soldier) ನಮನ ಸಲ್ಲಿಸಿದ್ರು.

ಪ್ರಾಂಜಲ ಹೆಸರಿನ ಅರ್ಥವೇ ಸುಂದರ, ಸರಳ, ಪ್ರಾಮಾಣಿಕ. ನಾಡಿಗಾಗಿ ಮಡಿದ ವೀರ. ಚಿಕ್ಕಂದಿನಲ್ಲೇ ಛಲ, ನರನಾಡಿಯಲ್ಲೂ ದೇಶ ಸೇವೆಯ ಹೆಮ್ಮರದಷ್ಟು ಹೆಮ್ಮೆ. ತಂದೆ-ತಾಯಿಗೆ ಪ್ರೀತಿಯ ಕಂದ.

ಮಡದಿಗೆ ಆತನೇ ಪ್ರಪಂಚ. ಗೆಳೆಯರ ಪಾಲಿನ ಆತ್ಮ ಮಿತ್ರ. ತನ್ನ ಸಿಬ್ಬಂದಿ ಪಾಲಿಗೆ ಅವರು ಕ್ಯಾಪ್ಟನ್ (Captain)​​. ಕ್ಯಾಪ್ಟನ್​​ ಪ್ರಾಂಜಲ್​​​ ಶಿಕಾರಿಗೆ ಇಳಿದ್ರೆ, ಬೇಟೆ ಮುಗಿಸಿಯೇ ವಿರಾಮ. ಮೊನ್ನೆ ಆಗಿದ್ದು

ಅಷ್ಟೇ. ಶತ್ರು ಸಂಹಾರದ ಬಳಿಕವೇ ಚಿರನಿದ್ರೆಯ ವಿರಾಮಕ್ಕೆ ಜಾರಿದ್ದರು.

ಸೇನಾ ಗೌರವ ಸಲ್ಲಿಕೆ
ಕ್ಯಾಪ್ಟನ್​​​ ಪ್ರಾಂಜಲ್​​​ ಅವರು ಜಮ್ಮು ಕಾಶ್ಮೀರದ (Jammu Kashmir) ಹಿಮದ ಮಳೆಯ ನಡುವೆ ಗುಂಡಿಗೆ ಪ್ರಾಣತೆತ್ತಿದ್ದು, ಭಾರತ ಮಾತೆಗಾಗಿ ಪ್ರಾಣಾರ್ಪಣೆಗೈದ ಅಮರ ನಕ್ಷತ್ರವಾಗಿದ್ದರೆ. ಹುತಾತ್ಮ

ಕ್ಯಾಪ್ಟನ್ ಪ್ರಾಂಜಲ್​ರ ಪಾರ್ಥಿವ ಶರೀರ ರಾತ್ರಿ 9:38ಕ್ಕೆ ಆಗಮಿಸಿದ್ದು, ಹೆಚ್​ಎಎಲ್​​ನ (HAL) ಡಿಆರ್​ಡಿಒ ಕ್ಯಾಬ್ಸ್​ ಕ್ಯಾಂಪಸ್​​ ಬಳಿ ಬಂದ ಪಾರ್ಥಿವ ಶರೀರವನ್ನ ರಾಜ್ಯ ಸರ್ಕಾರ ಸ್ವೀಕರಿಸಿ ಸೇನಾ ಗೌರವ ಸಲ್ಲಿಸಿತು.

ಮೊದಲಿಗೆ ಪಾರ್ಥಿವ ಶರೀರಕ್ಕೆ ಅಪ್ಪ, ಅಮ್ಮ, ಹೆಂಡತಿ ಪುಷ್ಪ ನಮನ ಸಲ್ಲಿಸಿ ಗೌರವರ್ಪಣೆ ಸಲ್ಲಿಸಿದರು. ರಾಜ್ಯದ ಮುಖ್ಯಸ್ಥರಾದ ರಾಜ್ಯಪಾಲ ಗೆಹಲೋಟ್ ​​​, ಸಿಎಂ ಸಿದ್ದರಾಮಯ್ಯ (C M Siddaramaiah)

ಗೌರವಪೂರ್ವ ನಮನ ಸಲ್ಲಿಸಿ ರಾಜ್ಯ ಸರ್ಕಾರದಿಂದ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು, ರಾಷ್ಟ್ರರಕ್ಷಣೆಯಲ್ಲಿ ಜೀವ ಸಮರ್ಪಣೆ ಮಾಡಿದ ಪ್ರಾಂಜಲ್​​​ರನ್ನ ನಾಡು ಸದಾ ಸ್ಮರಿಸಲಿದೆ ಎಂದು

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಗಳಿದರು.

ಪ್ರಾಂಜಲ್​ ಅವರ ಸಾವಿನ ಸುದ್ದಿ ತಿಳಿದು ಇಡೀ ರಾಜ್ಯವೇ ಶೋಕಾಚರಣೆಯಲ್ಲಿ ಮುಳುಗಿದ್ದು, ಅದರಲ್ಲೂ ತನ್ನ ಹುಟ್ಟೂರಲ್ಲೂ ದುಃಖ ಮಡುಗಟ್ಟಿದೆ. ಸ್ನೇಹಿತರು, ಕುಟುಂಬಸ್ಥರು ಸೇರಿ ಹಿತೈಶಿಗಳು ಕಂಬನಿ

ಮಿಡಿದಿದ್ದಾರೆ. ಇನ್ನು ಸೇನಾ ಆ್ಯಂಬುಲೆನ್ಸ್ (Ambulance) ಮೂಲಕ ಆನೇಕಲ್​​ನ ಜಿಗಣಿ ಸಮೀಪದ ನಿಸರ್ಗ ಬಡಾವಣೆ ನಂದನವನದ ಸ್ವಗೃಹಕ್ಕೆ ಪಾರ್ಥಿವ ಶರೀರ ತರಲಾಗಿದ್ದು, ಬೆಳಗ್ಗೆಯಿಂದ ಕೆಲ

ವಿಧಿ ವಿಧಾನಗಳು ನಡೆಯುತ್ತಿದೆ.

ಇದನ್ನು ಓದಿ: ನನ್ನ ಪುತ್ರನಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ : ಸಚಿವ ಮಹದೇವಪ್ಪ

Exit mobile version