ಚರಂಡಿಯಂತಾಗಿದೆ ಗಜಪುರದ ರಸ್ತೆ! ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಗಜಪುರದ ಮಂದಿ

ಚರಂಡಿಯಂತಾಗಿದೆ ಗಜಪುರದ ರಸ್ತೆ! ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಗಜಪುರದ ಮಂದಿ.

ಇದು ವಿಜಯನಗರ ಜಿಲ್ಲೆಯ ಕಂದಗಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಜಾಪುರ ಗ್ರಾಮದ ದುಸ್ಥಿತಿ. ಈ ಗ್ರಾಮದ ಪರಿಸರವನ್ನೊಮ್ಮೆ ನೋಡಿ, ಎಲ್ಲಿ ನೋಡಿದರೂ ಗಲೀಜು ನೀರಿನ ಗುಂಡಿಗಳು, ಹೂಳಿನಿಂದ ಕೊಳೆಯುತ್ತಿರುವ ಚರಂಡಿಗಳು, ತುಂಬಿದ ಕಸದ ರಾಶಿಗಳ ಒಟ್ಟಾರೆಯಾಗಿ ಇಲ್ಲಿನ ಜನರು ಈ ಗಲೀಜಿನಲ್ಲಿ ಬದುಕುವುದೇ ಕಷ್ಟಸಾಧ್ಯವಾಗಿದೆ.

ಈ ದೃಶ್ಯವನ್ನು ನೋಡಿದರೆ ಇಲ್ಲಿ ಕೊರೋನಾ ಅಲ್ಲ ಇದ್ದ ಎಲ್ಲಾ ಸಾಂಕ್ರಾಮಿಕ ರೋಗಗಳು ಇಲ್ಲಿನ ಜನರಿಗೆ ಬರುವುದರಲ್ಲಿ ಸಂದೇಹವೆ ಇಲ್ಲ. ಆದರೆ ಈ ಗ್ರಾಮದ ಜನರ ಸಂಕಷ್ಟವನ್ನು ಕೇಳುವವರೇ ಇಲ್ಲ.

ಚರಂಡಿ ನೀರು ಈ ಗ್ರಾಮದ ರಸ್ತೆಯಲ್ಲೇ ಹರಿದಾಡುತ್ತಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸಲು ಕಷ್ಟಪಡುತ್ತಿದ್ದಾರೆ. ರೈತರು, ಕಾರ್ಮಿಕರೇ ಹೆಚ್ಚಾಗಿ ಇರುವ ಈ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತಿವೆ. ರೋಗಗಳಿಂದಾಗಿ ಇಲ್ಲಿನ ಜನ ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. 

ಗ್ರಾಮ ಪಂಚಾಯಿತಿಯವರೋ ವರ್ಷಕ್ಕೊಮ್ಮೆ ಬಂದು ಇಲ್ಲಿನ ಚರಂಡಿಗಳನ್ನು, ಕಸದ ರಾಶಿಗಳನ್ನು ಕ್ಲೀನ್ ಮಾಡಿ ಹೊಗ್ತಾರೆ ಅಷ್ಟೇ, ವರ್ಷವಿಡೀ ಕಸದ ರಾಶಿಗಳು, ಚರಂಡಿಗಳು ಗಬ್ಬುನಾರುತ್ತಿದ್ದರೂ, ಅದರ ಬಗ್ಗೆ ಚಿಂತೆ ಮಾಡುವವರು ಯಾರೂ, ಇರಲ್ಲ. ಈ ಚರಂಡಿ ನೀರಿನಲ್ಲಿ ರಾಶಿ ರಾಶಿ ಸೊಳ್ಳೆ, ಕ್ರಿಮಿ ಕೀಟಗಳು ಓಡಾಡುತ್ತವೆ, ಆದ್ದರಿಂದ ಇಲ್ಲಿ ಜನರು ಸಂಜೆಯಾದ್ರೆ ಓಡಾಡಲೂ ಭಯಪಡುತ್ತಿದ್ದಾರೆ.

ಇದಕ್ಕೆಲ್ಲಾ ಪ್ರಮುಖ ಕಾರಣ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು. ಚರಂಡಿ ನೀರಿನಿಂದ ನೊಂದ ಜನ ಪರಿಸರವನ್ನು ಸ್ವಚ್ಛ ಮಾಡುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಿಲ್ಲ. ಜನರಿಗೆ ಚರಂಡಿ ನೀರಿನಿಂದ, ರೋಗಗಳಿಂದ ಮುಕ್ತಿಯೇ ಸಿಗುತ್ತಿಲ್ಲ. ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಈ ಗ್ರಾಮದ ಜನರ ಬಗ್ಗೆ ಕಾಳಜಿವಹಿಸಲಿ, ಈ ಬಗ್ಗೆ ಗಮನಹರಿಸಿ, ಸ್ವಚ್ಛಂದ ಪರಿಸರವನ್ನು ಕಟ್ಟಿಕೊಡಲಿ, ಜನಸಾಮಾನ್ಯರ ಕಷ್ಟಗಳನ್ನು ದೂರಮಾಡಲಿ ಎಂಬುದು ವಿಜಯಟೈಮ್ಸ್ನ ಆಶಯವಾಗಿದೆ.

ಕೂಡ್ಲಿಗಿಯಿಂದ ಸಿಟಿಜನ್ ಜರ್ನಲಿಸ್ಟ್ ವಿ.ಜಿ.ವೃಷಭೇಂದ್ರ ವಿಜಯಟೈಮ್ಸ್

Exit mobile version