ಗಾರ್ಮೆಂಟ್ಸ್‌ನ 45 ನೌಕರರಿಗೆ ಕೊರೊನಾ ಸೋಂಕು: ಹೆಚ್ಚಿದ ಆತಂಕ

ಮದ್ದೂರು, ಡಿ. 08: ತಾಲ್ಲೂಕಿನ ಸೋಮನಹಳ್ಳಿ ಗಾರ್ಮೆಂಟ್ಸ್‌ನ 45 ನೌಕರರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗಾರ್ಮೆಂಟ್ಸ್‌ನಲ್ಲಿ ಆತಂಕದ ವಾತಾವರಣ ಮನೆಮಾಡಿದೆ. ಸೋಮನಹಳ್ಳಿ ಕೈಗಾರಿಕೆ ವಸಾಹತು ಪ್ರದೇಶದಲ್ಲಿರುವ ಗಿಲ್ ಉಡ್ ಗಾರ್ಮೆಂಟ್ಸ್‌ ನೌಕರರಲ್ಲಿ ಆತಂಕ ಸೃಷ್ಟಿಯಾಗಿದೆ. ಸುದ್ದಿ ತಿಳಿದು ಗಾರ್ಮೆಂಟ್ಸ್ ಒಳಗೆ ತೆರಳಲು ಕಾರ್ಮಿಕರು ನಕಾರ ಮಾಡಿದರು.

ಗಾರ್ಮೆಂಟ್ಸ್ ಒಳಗೆ ಬರುವಂತೆ ಮಾಲೀಕರು ಸೂಚಿಸಿದರೂ, ಆದೇಶ ಧಿಕ್ಕರಿಸಿ ಕಾರ್ಮಿಕರು ಒಳಹೋಗಲು ನಿರಾಕರಿಸಿದರು.

ನೌಕರರಿಗೆ ಕೊರೊನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಗಾರ್ಮೆಂಟ್ಸ್‌ನ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲು ಎಚ್‌.ಆರ್‌. ಎರಡು ದಿನ ಕಾಲಾವಕಾಶ ನೀಡಿದ್ದಾರೆ. ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿವರಿಗೆ ಹತ್ತು ದಿನಗಳ ಸಂಬಳ ಸಹಿತ ರಜೆ ಘೋಷಿಸಿದ್ದು, ನೆಗೆಟಿವ್‌ ಬಂದವರು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.

Exit mobile version