ಹಮಾಸ್ (Hamas) ಗಾಜಾ ಪಟ್ಟಿಯನ್ನು 16 ವರ್ಷಗಳಿಂದ ಆಳ್ವಿಕೆ ನಡೆಸಿದೆ. ಆದರೆ ಇದೀಗ ಇಸ್ರೇಲ್ ವಶವಾಗಿದೆ ಎಂದು ಇಸ್ರೇಲಿ ರಕ್ಷಣಾ ಸಚಿವ (Gaza occupied by Israel)
ಯೋವ್ ಗ್ಯಾಲಂಟ್ (Yove gallant) ತಿಳಿಸಿದ್ದಾರೆ. ಹಮಾಸ್ ಗಾಜಾ ಪಟ್ಟಿ ಅಧಿಕಾರಿವನ್ನು ಕಳೆದುಕೊಂಡಿದ್ದು, ಉಗ್ರರು ದಕ್ಷಿಣದ ಕಡೆ ಪಲಾಯನವಾಗುತ್ತಿದ್ದಾರೆ. ನಾಗರಿಕರು ಹಮಾಸ್
ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು (Gaza occupied by Israel) ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಗಾಜಾ ಪಟ್ಟಿಯ (Gazapatti) ಅಧಿಕಾರಿವನ್ನು ಹಮಾಸ್ ಕಳೆದುಕೊಂಡಿದ್ದು, ಉಗ್ರರು ದಕ್ಷಿಣದ ಕಡೆ ಓಡಿ ಹೋಗುತ್ತಿದ್ದಾರೆ. ನಾಗರಿಕರು ಹಮಾಸ್ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು
ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಈ ವಿಡಿಯೋವನ್ನು ಪ್ರಕಟ ಮಾಡಲಾಗಿದೆ. ಅಲ್ಲಿನ ಜನರಿಗೆ ಹಮಾಸ್ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
ಹಮಾಸ್ ಇಸ್ರೇಲ್ (Israel) ಮೇಲೆ ಅಕ್ಟೋಬರ್ 6ರಂದು ದಾಳಿ ಮಾಡಿತ್ತು. ಈ ದಾಳಿಯಿಂದ 1,200 ಇಸ್ರೇಲ್ ನಾಗರಿಕರು ಸಾವನ್ನಪ್ಪಿದರು. ಜತೆಗೆ ಇಸ್ರೇಲ್ ಸೇರಿ ಬೇರೆ ಬೇರೆ ದೇಶದ ನಾಗರಿಕರನ್ನು
ಒತ್ತೆಯಾಳುಗಾಗಿ ಇಟ್ಟುಕೊಂಡಿದ್ದರು. ಇದು ಇಸ್ರೇಲ್ನ 75 ವರ್ಷದ ಇತಿಹಾಸದಲ್ಲಿ ನಡೆದ ಮಾರಣಾಂತಿಕ ಘಟನೆ ಎಂದು ಯೋವ್ ಗ್ಯಾಲಂಟ್ ಹೇಳಿದ್ದಾರೆ.
ಇಸ್ರೇಲ್ ಹಮಾಸ್ಗೆ ಪ್ರತ್ಯುತ್ತರ ನೀಡಿದ್ದು, ಹಮಾಸ್ ಪ್ರಾರಂಭಿಸಿದನ್ನು ಇಸ್ರೇಲ್ ಅಂತ್ಯ ಮಾಡಲು ಮುಂದಾಗಿದೆ. 4000 ಕ್ಕೂ ಹೆಚ್ಚು ಹಮಾಸ್ ಉಸಿರು ನಿಲ್ಲಿಸಿದೆ. ಹಮಾಸ್ ತಾಣಗಳ ಮೇಲೆ ಇಸ್ರೇಲ್
ದಾಳಿ ಮಾಡಿ ಧ್ವಂಸ ಮಾಡಿದೆ. ಒತ್ತೆಯಾಳುಗಳನ್ನು ರಕ್ಷಣೆ ಮಾಡಿ ಇಸ್ರೇಲ್ಗೆ ಕರೆದುಕೊಂಡು ಬಂದಿದ್ದಾರೆ. ಇದೀಗ ಹಮಾಸ್ ದೊಡ್ಡ ಬಲವಾಗಿದ್ದ ರಾಂಟಿಸ್ಸಿ (Rantissi) ಆಸ್ಪತ್ರೆಯ ನೆಲಮಾಳಿಗೆ ಮೇಲೆ
ಇಸ್ರೇಲ್ ದಾಳಿ ಮಾಡಿದೆ.
ಅಲ್ಲಿರುವ ಒತ್ತೆಯಾಳುಗಳನ್ನು ಕಾಪಾಡುವ ಕೆಲಸ ಮಾಡುತ್ತಿದ್ದು, ಹಮಾಸ್ನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೆ ದಾಳಿ ಮುಂದುವರಿಯುತ್ತದೆ ಎಂದು ಇಸ್ರೇಲ್ ಹೇಳಿದೆ. ಇನ್ನು ಇಸ್ರೇಲ್
ಗಾಜಾದಲ್ಲಿರುವ ಹಮಾಸ್ ತಾಣಗಳ ಮೇಲೆ ದಾಳಿ ಮಾಡಿತ್ತು. ಇದಕ್ಕೂ ಮುನ್ನ ಗಾಜಾ ಪಟ್ಟಿ ನಾಗರಿಕರನ್ನು ಜಾಗ ಖಾಲಿ ಮಾಡುವಂತೆ ಎಚ್ಚರಿಕೆಯನ್ನು ನೀಡಿತ್ತು.
ಇನ್ನು ಅನೇಕರು ಗಾಜಾದಲ್ಲಿರುವ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾದಲ್ಲಿ(Al Shifa) ಆಶ್ರಯ ಪಡೆದರು. ಆದರೆ ಅಲ್ಲಿ ಈಗಾಗಲೇ ಔಷಧಿ, ಆಹಾರ, ವಿದ್ಯುತ್ ಇಲ್ಲದೆ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು
ಹೇಳಲಾಗಿದ್ದು, ಅನೇಕ ದೇಶಗಳು ಗಾಜಾದಲ್ಲಿ ಕದನ ವಿರಾಮ ಘೋಷಣೆ ಮಾಡುವಂತೆ ಹೇಳಿತ್ತು. ಆದರೆ ಈ ಒತ್ತಡವನ್ನು ಇಸ್ರೇಲ್ ವಿರೋಧಿಸಲೇ ಬಂದಿದೆ. ಒಂದು ವೇಳೆ ಕದನ ವಿರಾಮವನ್ನು
ಪರಿಗಣಿಸಬೇಕಾದರೆ ಹಮಾಸ್ ಅಕ್ಟೋಬರ್ (October) 7 ರ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ 240 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಿಂದಿರುಗಿಸಬೇಕೆಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು
((Benjamin Netanyahu) ಖಡಕ್ ಹೇಳಿದ್ದಾರೆ.
ಇದನ್ನು ಓದಿ: ಮೇಲ್ನೋಟಕ್ಕೆ ಸರಳರಾಮಯ್ಯ, ಒಳಗೆ ಐಶಾರಾಮಯ್ಯ: ಸಿದ್ದರಾಮಯ್ಯ ಅವರ ವಿರುದ್ಧ ಎಚ್‌ಡಿಕೆ ವಾಗ್ದಾಳಿ
- ಭವ್ಯಶ್ರೀ ಆರ್.ಜೆ