ಸುಂದರಬನ್ ಕಾಡಿನ ನಡುವೆ ಗೋಚರವಾಗುವ ಬೆಳಕಿನ ಬಗ್ಗೆ ಇದೆ ಒಂದು ವಿಚಿತ್ರ ನಂಬಿಕೆ!

West Bengal : ದೆವ್ವ, ಭೂತಗಳು ಇವೆಯಾ ಎನ್ನುವ ಪ್ರಶ್ನೆಗೆ ನಿರ್ದಿಷ್ಟ ಉತ್ತರವಿಲ್ಲ.

ಕೆಲವರ ಪ್ರಕಾರ ದೆವ್ವ(Devil) ಭೂತಗಳು ಇವೆ ಎಂದಾದರೆ, ಕೆಲವರ ಪ್ರಕಾರ ಇಲ್ಲ. ಇದು ಇಂದು ನಿನ್ನೆಯ ಚರ್ಚೆಯಲ್ಲ, ಇದರ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯ.

ಹೀಗೆ, ದೆವ್ವ ಭೂತಗಳ ಕತೆಯ ಕಾರಣದಿಂದಾಗಿಯೇ ಜಗತ್ತಿನಾದ್ಯಂತ ಒಂದಷ್ಟು ಜಾಗಗಳು ಪ್ರಶ್ನೆಯಾಗಿಯೇ ಉಳಿದು ಹೋಗಿವೆ.

ಕೆಲವೊಂದು ಜಾಗಗಳಿಗಂತೂ ಜನ ಹೋಗುವುದಕ್ಕೇ ಹೆದರುತ್ತಾರೆ, ಅಂತಹ ಜಾಗಗಳಲ್ಲಿ ಒಂದು ಪಶ್ಚಿಮ ಬಂಗಾಳದ(West Bengal) ಗಡಿಯಲ್ಲಿರುವ ಸುಂದರಬನ್ ಅರಣ್ಯ ಪ್ರದೇಶ.


ಸುಂದರಬನ್(Sunderbans) ಒಂದು ಅದ್ಭುತವಾದ ಅರಣ್ಯ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಈ ಕಾನನದಲ್ಲಿ ವಿವಿಧ ಪ್ರಭೇದದ ಪ್ರಾಣಿಗಳು, ಸಸ್ಯಸಂಕುಲಗಳಿವೆ.

ಆದರೆ, ಇಂತಹ ದಟ್ಟ ಕಾಡಿನಲ್ಲಿಯೂ ಒಂದು ನಿರ್ದಿಷ್ಟ ಜಾಗ ‘ಭಯಾನಕ’ ಎನ್ನುವ ಹಣೆಪಟ್ಟಿಯನ್ನು ಹೊಂದಿದೆ.

https://fb.watch/h1sE-nALI2/ ಬೆಂಗಳೂರು : ಗಣಿಗಾರಿಕೆಯಿಂದ ನಾಶವಾಗುತ್ತಿದೆ ಶಾಲಾ-ಕಾಲೇಜು ಪ್ರದೇಶ!

ಇದಕ್ಕೆ ಕಾರಣ, ಇಲ್ಲಿ ಹೊಳೆಯುವ ಬೆಳಕು! ಕೆಲವು ಸಂದರ್ಭದಲ್ಲಿ ರಾತ್ರಿಯಾದರೆ ಸಾಕು ಇಲ್ಲಿ ಬೆಳಕು ಪ್ರಜ್ವಲಿಸುತ್ತದೆ,

ಈ ಬೆಳಕು ಕಾಣುವುದು ಸತ್ಯವಾದರೂ ಬೆಳಕಿನ ಹಿಂದೆ ಕಟ್ಟಲಾಗಿರುವ ಕತೆಗಳು ಎಷ್ಟು ಸತ್ಯ ಎನ್ನುವುದು ಪ್ರಶ್ನೆ ಹಾಗೂ ಚರ್ಚೆಯ ವಿಷಯವಾಗಿದೆ.

ಕೆಲವರು ಇದನ್ನು ಕೇವಲ ಕಟ್ಟುಕತೆ ಎಂದರೆ, ಇನ್ನೂ ಕೆಲವರು ಇದು ಮನಸ್ಸಿನ ಭ್ರಮೆ ಎನ್ನುತ್ತಾರೆ. ಇನ್ನೂ ಕೆಲವರಂತೂ ಇದನ್ನು ‘ದೆವ್ವಗಳ ಬೆಳಕು’ ಎಂದೇ ಕರೆಯುತ್ತಾರೆ.

ಮೀನು ಹಿಡಿಯಲು ಹೋದ ಕೆಲವರು ಆಕಸ್ಮಿಕವಾಗಿ ಮೃತಪಟ್ಟಿದ್ದರು, ಅವರ ಆತ್ಮ ರಾತ್ರಿ ಹೊತ್ತು ಇಲ್ಲಿ ಬೆಳಕಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಂಬುದು ಇದರ ಬಗೆಗಿರುವ ಸಾಮಾನ್ಯ ನಂಬಿಕೆ. ಆದರೆ, ಇದಕ್ಕೆ ವಿಜ್ಞಾನದ ತರ್ಕವೇ ಬೇರೆಯಿದೆ ಬಿಡಿ.

ಇದನ್ನೂ ಓದಿ : https://vijayatimes.com/prakash-raj-slams-akshay/


ಹಲವರ ಅನುಭವದ ಪ್ರಕಾರ, ಯಾರಾದರೂ ಈ ಹೊಳೆಯುವ ಬೆಳಕನ್ನು ಅನುಸರಿಸಿಕೊಂಡು ಮುಂದಕ್ಕೆ ಹೋದರೆ ಅವರು ಖಂಡಿತ ಅಪಾಯದಲ್ಲಿ ಸಿಲುಕಿಕೊಳ್ಳುತ್ತಾರಂತೆ.

ಈ ಬೆಳಕು ಇವರನ್ನು ಅಪಾಯಕ್ಕೆ ನೂಕುತ್ತದೆಯಂತೆ. ಕೆಲವು ಸಂದರ್ಭದಲ್ಲಿ, ಈ ಬೆಳಕು ಬೆನ್ನಟ್ಟಿಕೊಂಡು ಬರುತ್ತವೆ ಎಂದೂ ಕೂಡ ಜನ ಹೇಳುತ್ತಾರೆ. ಹೀಗೆ, ಇಲ್ಲಿನ ಜನರನ್ನು ಕೇಳಿದರೆ ಈ ಬೆಳಕಿನ ಬಗ್ಗೆ ಹಲವಾರು ಕತೆಗಳು ಸಿಗುತ್ತವೆ.

ಇದು ಜನರ ತಪ್ಪಂತೂ ಅಲ್ಲ, ಏಕೆಂದರೆ ಯಾವುದಾರೂ ವಿಷಯ ನಮಗೆ ತಾರ್ಕಿಕವಾಗಿ ತರ್ಕಕ್ಕೆ ನಿಲುಕದೇ ಹೋದರೆ,

ಇಂತಹ ಅಪರೂಪದ ಸನ್ನಿವೇಶಗಳ ಹಿಂದಿನ ಕಾರಣ ಸರಿಯಾಗಿ ತಿಳಿಯದಿದೇ ಹೋದರೆ, ಅದು ಅಲೌಕಿಕ ಅಥವಾ ಅತಿಮಾನುಷ ಶಕ್ತಿಯ ಆಟ ಎಂದೆನಿಸಲು ಶುರುವಾಗುತ್ತದೆ.

ಇದನ್ನೂ ಓದಿ : https://vijayatimes.com/nia-enters-mangaluru-blast/

ಈ ಬೆಳಕಿನ ಬಗ್ಗೆಯೂ ಕೂಡಾ ಅದೇ ಭಾವನೆ ಜನರಲ್ಲಿ ಮೂಡಿರುವುದು ಸರ್ವೇ ಸಾಮಾನ್ಯ. ಇದರ ಬಗ್ಗೆ ವಿಜ್ಞಾನ ಹಾಗೂ ಜನರ ನಂಬಿಕೆ ಎರಡೂ ಬೇರೆ ಬೇರೆಯ ಕಾರಣಗಳನ್ನೇ ಹೇಳುತ್ತದೆ.

ವಿಜ್ಞಾನ ಕಂಡುಕೊಂಡ ಕಾರಣ ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ, ಆದರೂ ಜನರ ಮನಸ್ಸಲ್ಲಿ ಕುಳಿತಿರುವಂತಹ ಭಯ ಸುಲಭವಾಗಿ ದೂರವಾಗುವಂತದ್ದಲ್ಲ. ಹೀಗಾಗಿ, ಈ ಪ್ರಜ್ವಲಿಸುವ ಬೆಳಕು ಇಂದಿಗೂ ದೆವ್ವಗಳ ಬೆಳಕಾಗಿಯೇ ಜನರ ಮನದಲ್ಲಿ ಉಳಿದಿದೆ!

Exit mobile version