ದೀಪಾವಳಿಗೆ ಬ್ಯಾಂಕ್ ಉದ್ಯೋಗಿಗಳಿಗೆ ಬಂಪರ್ ಧಮಾಕ!!!
ದೀಪಾವಳಿ ಹಬ್ಬದ ಪ್ರಯುಕ್ತ ಬ್ಯಾಂಕ್ ನೌಕರರಿಗೆ ಖುಷಿ ಸುದ್ದಿಯೊಂದಿದೆ. ಹಬ್ಬಕ್ಕೆ ಮುಂಚಿತವಾಗಿ ಲಕ್ಷಾಂತರ ಬ್ಯಾಂಕ್ ಉದ್ಯೋಗಿಗಳು ದೀಪಾವಳಿ ಉಡುಗೊರೆ ಪಡೆದಿದ್ದಾರೆ.
ತುಟ್ಟಿಭತ್ಯೆ ,ಡಿಎ ಯನ್ನು ಉದ್ಯೋಗಿಗಳಿಗೆ ಹೆಚ್ಚಿಸಲಾಗಿದೆ.
ಶೇಕಡಾ 80ರಷ್ಟು ಸ್ಟಾಫ್ಗಳು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ.ತುಟ್ಟಿಭತ್ಯೆಯು ನವೆಂಬರ್, ಡಿಸೆಂಬರ್ ಮತ್ತು ಜನವರಿ, 2021 ಕ್ಕೆ ಅನ್ವಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ತುಟ್ಟಿಭತ್ಯೆ ಶೇ 38ಕ್ಕೆ ಏರಿಸಲಾಗಿದೆ. ಎಐಎಸಿಪಿಐ (ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ) ಅಂಕಿಅಂಶಗಳು ಬಿಡುಗಡೆಯಾದ ನಂತರ ಈ ಹೆಚ್ಚಳ ಮಾಡಲಾಗಿದೆ.