Congress : ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ನೋಡಿ ಕಣ್ಣೀರಿಟ್ಟ ಯುವತಿ

Bharat Jodo Yatra

Kerala : ಭಾರತ್ ಜೋಡೋ ಯಾತ್ರೆ(Bharat Jodo Yathra) ಪುನಃ ಆರಂಭವಾಗಿದ್ದು, ಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು(Rahul Gandhi) ನೇರವಾಗಿ ಭೇಟಿಯಾದ ಯುವತಿ, ರಾಹುಲ್ ಗಾಂಧಿಯನ್ನು ತಬ್ಬಿ ಕಣ್ಣೀರಿಟ್ಟಿದ್ದಾಳೆ.

ಈ ಹಿಂದೆ ಕೇರಳದಲ್ಲಿ(Kerala) ಆರಂಭಗೊಂಡಿದ್ದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಕೆಲವು ತಿಂಗಳು ಸ್ಥಗಿತಗೊಂಡಿತ್ತು. ಸದ್ಯ ಈಗ ಮತ್ತೊಮ್ಮೆ ಕೇರಳ ರಾಜ್ಯದಿಂದಲೇ ಪ್ರಾರಂಭವಾಗಿದ್ದು, ಈ ಯಾತ್ರೆಯಲ್ಲಿ ರಾಹುಲ್ ಗಾಂಧಿ ಸಾಕಷ್ಟು ತಯಾರಿಗಳೊಂದಿಗೆ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ : https://vijayatimes.com/siddaramaiah-for-kolar-vidhansabha/

ಯಾತ್ರೆಯಲ್ಲಿ ಸಾಗುವಾಗ ಯುವತಿಯೊಬ್ಬಳು ರಾಹುಲ್ ಗಾಂಧಿಯನ್ನು ನೇರವಾಗಿ ಕಂಡು ಅಶ್ಚರ್ಯಗೊಂಡಿದ್ದಾಳೆ. ರಾಹುಲ್ ಗಾಂಧಿಯನ್ನು ಕಂಡ ಯುವತಿ ಸಂತೋಷದಿಂದ ರಾಹುಲ್ ಗಾಂಧಿಯತ್ತ ಓಡಿ ಬಂದಿದ್ದಾಳೆ. ರಾಹುಲ್ ಗಾಂಧಿ ಯುವತಿಯನ್ನು ಪ್ರೀತಿಯಿಂದ ಮಾತನಾಡಿಸಿ ತಮ್ಮ ಜೊತೆಯಲ್ಲೇ ನಡೆಸಿಕೊಂಡು ಹೋಗಿದ್ದಾರೆ.

ಯುವತಿಗೆ ರಾಹುಲ್ ಗಾಂಧಿಯನ್ನು ನೇರವಾಗಿ ನೋಡಿ ಸಂತೋಷದ ಕೋಡಿ ಒಡೆದು ಕಣ್ಣೀರು ಹರಿದುಬಂದಿದೆ. ಅದೇ ಸಮಯದಲ್ಲಿ ಅಳುತ್ತಲೇ ರಾಹುಲ್ ಅವರನ್ನು ಮಾತನಾಡಿಸಿಕೊಂಡು ಬಂದಿದ್ದಾಳೆ. ಸಾಮಾನ್ಯವಾಗಿ ಇಂತಹ ಪ್ರತಿಕ್ರಿಯೆಗಳು ಒಬ್ಬ ನಟ-ನಟಿ ಅಥವಾ ದೊಡ್ಡ ಕಲಾವಿದರನ್ನು ಕಂಡರೆ ಹೊರಹೊಮ್ಮುವುದು ಸಾಮಾನ್ಯ.

ಆದ್ರೆ, ರಾಜಕಾರಣಿಯನ್ನು ನೋಡಿ ಈ ರೀತಿ ಖುಷಿಪಟ್ಟವರು ಕೆಲವರು ಮಾತ್ರ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯ 18ನೇ ದಿನದ ಮೆರವಣಿಗೆಯಲ್ಲಿ ಪಾಲ್ಗೊಂಡರು.

https://twitter.com/srinivasiyc/status/1575010176931074048?s=20&t=yLPaOKH3We3DWnvQ1ukCWw

ಕೇರಳದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಅನುಯಾಯಿಗಳೊಂದಿಗೆ ಯಾತ್ರೆಯನ್ನು ಬೃಹತ್ ಮಟ್ಟದಲ್ಲಿ ಪ್ರಾರಂಭಿಸಿದ್ದಾರೆ.

Exit mobile version