Bengaluru: 2024 ಲೋಕಸಭಾ ಚುನಾವಣೆ ಫಲಿತಾಂಶ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಗಮನ ಸೆಳೆದಿದೆ. ಒಂದೆಡೆ ಗೆಲುವು ಸಾಧಿಸಿದ ಕಾರಣದಿಂದ ಹಲವು ದೇಶಗಳ ಮುಖ್ಯಸ್ಥರು ಪ್ರಧಾನಿ ಮೋದಿಗೆ ಶುಭಾಶಯಗಳನ್ನು ಹೇಳಿ ಹಾರೈಸಿದರೆ ಇನ್ನೊಂದಡೆ, ಹಲವು ದೇಶಗಳ ಜಾಗತಿಕ ಮಟ್ಟದ ಪ್ರತಿಷ್ಠಿತ ಪತ್ರಿಕೆಗಳಲ್ಲೂ ಭಾರತದ ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಮೋದಿ (Modi) ಬಗ್ಗೆ ಅವಹೇಳನ ಮಾಡಿರುವ ರೀತಿಯಲ್ಲಿ ವಿಶ್ಲೇಷಣೆಗಳು, ವರದಿಗಳು ಪ್ರಕಟವಾಗಿವೆ.
![BBC News](https://sp-ao.shortpixel.ai/client/to_webp,q_glossy,ret_img,w_1024,h_576/https://vijayatimes.com/wp-content/uploads/2024/06/p08nbkg5-1024x576.jpg)
ಅಮೆರಿಕದ (America) ಪ್ರತಿಷ್ಠಿತ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಹೆಡ್ಲೈನ್ ಅಲ್ಲಿ ಭಾರತದ ಮತದಾರರು ಪ್ರಧಾನ ಮಂತ್ರಿ ಮೋದಿ ಅವರ ನಾಯಕತ್ವವನ್ನು ಅನಿರೀಕ್ಷಿತವಾಗಿ ನಿರಾಕರಿಸಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ (BJP) ಸರ್ಕಾರ ಹಾಗೂ ಮೋದಿ 10 ವರ್ಷಗಳ ಕಾಲ ಆಡಳಿತ ನಡೆಸಿ ಪ್ರಬಲರಾಗುವ ಬದಲು ದುರ್ಬಲರಾಗಿದ್ದಾರೆ ಎಂದು ಪತ್ರಿಕೆ ವಿಶ್ಲೇಷಿಸಿದೆ.
ಇನ್ನು ಬ್ರಿಟನ್ನ ದಿ ಗಾರ್ಡಿಯನ್ (Britain’s The Guardian) ಮಾಧ್ಯಮ ಸಂಸ್ಥೆಯ ಪತ್ರಿಕೆಯಲ್ಲಿ ಹಿಂದೂ ರಾಷ್ಟ್ರೀಯವಾದಿ ಪ್ರಧಾನಿ ಮೋದಿ ಅವರಿಗೆ ಭಾರೀ ಹಿನ್ನಡೆ ಎಂದು ಪ್ರಕಟಿಸಿದೆ. ವರದಿಯ ಅಷ್ಟೇ ಅಲ್ಲ, ಬಿಜೆಪಿ ನಾಯಕರಿಗೆ ಈ ಸೋಲಿನ ಹೆದರಿಕೆಯ ಸೂಚನೆ ಮೊದಲೇ ಸಿಕ್ಕಿತ್ತು. ಮುಂದಿನ ದಿನಗಳಲ್ಲಿ ಇನ್ನಷ್ಟು ಸೋಲಲಿದೆ ಎಂದು ವಿಶ್ಲೇಷಿಸಿದೆ. ಇನ್ನು ಅಲ್ಪ ಬಹುಮತದ ಗೆಲುವು ಸಾಧಿಸಿದ ಮೋದಿ ಎಂದು ಬ್ರಿಟನ್ನ ಸರ್ಕಾರಿ ಸುದ್ದಿ ಸಂಸ್ಥೆ ಬಿಬಿಸಿ ಹೆಡ್ಲೈನ್ (BBC Headline) ಅಲ್ಲಿ ಪ್ರಕಟಿಸಿದೆ.