ಇಲ್ಲಿ ಕೇಳಿ ಮಕ್ಕಳೇ: ಬೇಸಿಗೆಯ ರಜೆಗೆ ಟಾಟಾ, ಶಾಲೆಯ ಕಡೆಗೆ ಓಟ!

Schools Reopen: ಎರಡು ತಿಂಗಳ ಬೇಸಿಗೆಯ ರಜೆ ಸದ್ದಿಲ್ಲದೇ ಕಳೆದಿದೆ. ಶಾಲೆಯು ಕೂಡ ಮಕ್ಕಳನ್ನು ಜ್ಞಾನಮಂದಿರಕ್ಕೆ ಕರೆಯುತ್ತಿದ್ದೆ, ಮಕ್ಕಳಲ್ಲಿ ಯಾವುದೇ ತಾರತಮ್ಯ ನೋಡದಿರುವ ಜಾಗವೆಂದರೆ ಅದು ಶಾಲೆ. ಎಲ್ಲಾ ಮಕ್ಕಳನ್ನು ಒಂದೇ ರೀತಿ ನೋಡಿ ವಿದ್ಯಾ, ಬುದ್ದಿಯನ್ನು ಧಾರೆಯೆರೆಯುವ ಅದ್ಭುತವಾದ ಸ್ಥಳ. ಮಕ್ಕಳು #Students ಮೊದಲನೆಯ ಬಾರಿ ಶಾಲೆಗೆ ಹೋಗುತ್ತಾರೆ ಎನ್ನುವಾಗ ತಂದೆಗೆ ತುಸು ಹೆಚ್ಚೇ ಜವಾಬ್ದಾರಿ ಇರುತ್ತದೆ. ಇನ್ನು ತಾಯಿಯ ಆನಂದಕ್ಕೆ ಪಾರವೇ ಇರುವುದಿಲ್ಲ ಮೊಗ ಅರಳಿಸಿ ಮಕ್ಕಳ ಭವಿಷ್ಯದ ಬಗ್ಗೆ ತನ್ನ ಉಹಾ ಲೋಕದಲ್ಲಿ ಮಿಂದೇಳುತ್ತಾಳೆ. ಇನ್ನು ಶಾಲೆಯ ಆಟ, ಪಾಠ, ಮತ್ತು ಕಲಿಯುವುದು, ನಲಿಯುವುದು ಹೇಗಿರುತ್ತದೆ ಎಂಬುದರ ಮಾಹಿತಿ ಇಲ್ಲಿ ತಿಳಿಯಿರಿ!

Summer Holidays

ಮಕ್ಕಳು ಪ್ರಥಮ ಬಾರಿ ಸ್ಕೂಲಿಗೆ ತೆರಳುವಾಗ ಗಾಬರಿ, ಹೆದರಿಕೆ ಮತ್ತು ಖುಷಿಯ ಜೊತೆಗೆ ಶಾಲೆಯತ್ತ ಮುಖ ಮಾಡುತ್ತಾರೆ. ಕೆಲ ಮಕ್ಕಳು ಬೇಸಿಗೆ ರಜೆಯಲ್ಲಿ ನೀಡಿದ ಹೋಂ ವರ್ಕ್ ಅರ್ಧಂಬರ್ಧ ಮಾಡಿ ಮತ್ತು ಊರು ಸುತ್ತಿ ರಜೆ ಮುಗಿಯುತ್ತಿದ್ದಂತೆ ಶಾಲೆಗೆ ಹೊಗಬೇಕು ಎನ್ನುವುದು ನೆನೆದು ಅಲ್ಪ #Schools ಬೇಸರಪಟ್ಟು ಗೆಳೆಯ ಗೆಳತಿಯರನ್ನು ಭೇಟಿ ಮಾಡಬೇಕು ಮತ್ತು ಶಾಲೆಯ ಘಂಟೆಯ ಸದ್ಧು ಕೇಳಬೇಕು ಬಿಸಿ ಊಟದ ಗಮವನ್ನು ಮನಸಲ್ಲೆ ಹೊಗಳುತ್ತಾ, ಸಮವಸ್ತ್ರ ಧರಿಸಿ ಪಠ್ಯ ಪುಸ್ತಕವನ್ನು ಪಾಟಿಚೀಲದಲ್ಲಿರಿಸಿ ಬ್ಯಾಗನ್ನು ಹೆಗಲಿಗೆ ತಗುಲಿಸಿ ಶಾಲೆಯ ಬಾಗಿಲನ್ನು ತಟ್ಟಲು ಸಿದ್ಧರಾಗುತ್ತಾರೆ.

ಹಾಗೆ ಭವಿಷ್ಯದ ಕನಸು ಕಾಣುತ್ತ ಜೀವನದಲ್ಲಿ ಉನ್ನತ ಸ್ಥಾನವನ್ನು ತಮ್ಮದಾಗಿಸಿಕೊಳ್ಳಬೇಕೆಂದು ಹಾತೊರೆಯುತ್ತಾರೆ. ತಂದೆ-ತಾಯಿಯ ಕನಸು ನನಸು ಮಾಡಬೇಕೆಂದು ಶಾಲೆ ಎಂಬ ಅಧ್ಯಾಯದಲ್ಲಿ ಈಜಿ ದಡ ಸೇರುವುದೇ ಸುಂದರ. ಸರ್ಕಾರಿ ಶಾಲೆಯಲ್ಲಿ ಹಲವಾರು ಯೋಜನೆಯಡಿ ಮಕ್ಕಳಿಗೆ ಅನುಕೂಲವಾಗುವಂತೆ (Summer Holidays) ಮಾಡಿದೆ. ಸರ್ಕಾರಿ ಶಾಲೆಯ ಗತ್ತು ಎಲ್ಲರಿಗು ಗೊತ್ತು ಏನಂತೀರಾ?

ಖಾಸಗಿ ಶಾಲೆಗಳ ವಿಚಾರಕ್ಕೆ ಬರೋಣ… ಮೊದಲನೇ ದಿನದಂದು ಸ್ಕೂಲ್ಗೆ ಹೋಗುತ್ತಾರೆ. ಮಕ್ಕಳು ಎಂದಾಗ ಹೊಸ ಅನುಭವ, ತಳಮಳ, ಅಮ್ಮಂದಿರಿಗಂತೂ ಫುಲ್ ಟೈಮ್ ವರ್ಕ್, ಸ್ಟಾರ್ಟ್ ಯುನಿಫಾರ್ಮ್, ಟೈ, ಬೆಲ್ಟ್ ಮತ್ತು ಶೂಸ್ ಹಾಕಿ ಮಕ್ಕಳನ್ನು ರೆಡಿ ಮಾಡಿ ಬುತ್ತಿ ಡಬ್ಬವನ್ನು ಲಂಚ್ ಬ್ಯಾಗ್ನಲ್ಲಿರಿಸಿ (Lunch Bag) ಪುಟ್ಟ ಎಲ್ಲಾ ರೆಡಿತಾನೇ ಎಂದು ಕೇಳಿದಾಗ ಹಾ! ಅಮ್ಮ ರೆಡಿ ಎಂದಾಗ ಮಕ್ಕಳನ್ನು ಶಾಲೆಗೆ ಕರೆತಂದು ಮಗು ಶಾಲೆಯ ಒಳಗೆ ಹೋಗುವವರೆಗೂ ಬೈ ಅಮ್ಮ ಎಂದಾಗ ಹುಷಾರು ಕಂದ ಎಂದು ಹೇಳುವ ಅಮ್ಮನ ತವಕವೆ ಬೇರೆ , ಖುಷಿಯೇ ಬೇರೆ ತಂದೆಯ ಸಂತಸವು ದುಪ್ಪಟ್ಟಾಗುತ್ತದೆ.

ಬೇಸಿಗೆಯ ರಜೆಯನ್ನು ಮುಗಿಸಿರುವ ಮಕ್ಕಳತ್ತ ಗಮನ ಕೊಡುವುದಾದರೆ ಹೊಸ ಸಮವಸ್ತ್ರ ಹಾಕಿಕೊಂಡು ಬುಕ್ಕನ್ನು ಬ್ಯಾಗನ್ನಲ್ಲಿ ಜೋಡಿಸಿಕೊಂಡು, ಕೈನಲ್ಲಿ ಇಷ್ಟದ ಊಟವಿರುವ ಲಂಚ್ ಬ್ಯಾಗ್ ಹಿಡಿದು ಹೊರಡುವಾಗ ಯಾರೊಂದಿಗೂ ಜಗಳವಾಡಬೇಡ.. ಎಲ್ಲರೊಂದಿಗೂ ಖುಷಿಯಿಂದ ಮಾತನಾಡು ಟೀಚರ್ (Teacher) ಕೇಳಿದ ಎಲ್ಲ ಪ್ರಶ್ನೆಗೂ ಉತ್ತರಿಸು ಎಂದು ಹೇಳಿರುವ ಅಮ್ಮನ ಮಾತನ್ನು ನೆನೆದು ಶಾಲೆಯತ್ತ ಪಾದಾರ್ಪಣೆ ಮಾಡುತ್ತಾರೆ. ಕ್ಲಾಸ್ ರೂಮಿನಲ್ಲಿ ಕುಳಿತು ಓದಿನ ಮತ್ತು ಭವಿಷ್ಯದ ಬಗ್ಗೆ ಮೊದಲನೇ ದಿನ ಶಾಲೆಗೆ ಬಂದಿದ್ದು ಜ್ಞಾಪಿಸಿಕೊಂಡು ಹಳೆಯ ಅನುಭವಕ್ಕೆ ಹೊಸ ಬಣ್ಣ ಹಚ್ಚುತ್ತಾರೆ.

ಶಾಲೆ ಯಾವುದಾದರೇನು ಕಲಿಯುವ ಉತ್ಸಹ ಒಂದೇ ಆಗಿರಬೇಹು ಅಲ್ಲವೇ?
ಎಲ್ಲರು ಮಕ್ಕಳನ್ನು ಶಾಲೆಗೆ ಕಳುಹಿಸಿ ಏಪ್ರಿಲ್ (April) ಮತ್ತು ಮೇ ತಿಂಗಳ ಬೇಸಿಗೆಯ ರಜೆಗೆ ವಿದಾಯ ಹೇಳಿ ಮಕ್ಕಳೇ, ಶಿಕ್ಷಣವನ್ನು #Education ಪಡೆದು ಬುದ್ಧಿಯೆಂಬ ಆದಾಯವನ್ನು ಪಡೆಯಿರಿ..

ವೈಷ್ಣವಿ ರೆಡ್ಡಿ

Exit mobile version