ಅಪಾಯದಲ್ಲಿದೆ ಹಾಸನದ ಸರ್ಕಾರಿ ಶಾಲೆ ! ಅರಕಲಗೂಡಿನ ಸರ್ಕಾರಿ ಶಾಲೆ ಛಾವಣಿ ಕುಸಿಯುತ್ತಿದೆ. ದೂರು ಕೊಟ್ರೂ ಕ್ಯಾರೇ ಅಂತಿಲ್ಲ ಶಿಕ್ಷಣ ಅಧಿಕಾರಿಗಳು. ಮಕ್ಕಳ ಬಲಿಗಾಗಿ ಕಾಯುತ್ತಿದೆಯಾ ಶಿಕ್ಷಣ ಇಲಾಖೆ? ದಲಿತ ಮಕ್ಕಳಿಗೇಕೆ ಈ ಶಿಕ್ಷೆ ?

Government school is in Danger! Government school of Arakalagudu, Hassan district is in collapsing.

ಮಾಜಿ ಪ್ರಧಾನಿ ದೇವೇಗೌಡರ ತವರ ಜಿಲ್ಲೆ ಹಾಸನದ ಅರಕಲಗೂಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಬಲಿಗಾಗಿ ಕಾಯುತ್ತಿದೆ. ಈ ಶಾಲೆಗೆ ಮಕ್ಕಳನ್ನು ಕಳುಹಿಸಲು ಹೆತ್ತವರು ಭಯ ಬೀಳುತ್ತಿದ್ದಾರೆ. ಯಾಕಂದ್ರೆ ಈ ಶಾಲೆಯ  ಮೇಲ್ಛಾವಣಿಯೇ ಕೆಳಗೆ ಬೀಳೋ ಹಂತದಲ್ಲಿದೆ. ಗೋಡೆಗಳು ಬಿರುಕು ಬಿಟ್ಟಿದ್ದು ಯಾವಾಗ ಬೇಕಾದ ಗೋಡೆ ಕುಸಿದು ಬೀಳಬಹುದು.

ಮಕ್ಕಳ ಪ್ರಾಣ ಕುತ್ತು ತರುವ ಶಾಲೆ ಇರೋದು, ಅರಕಲಗೂಡು ತಾಲ್ಲೂಕಿನ ಇಬ್ಬಡಿಯಲ್ಲಿ. ಈ ಶಾಲೆಯಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಬಡ ಕುಟುಂಬಕ್ಕೆ ಸೇರಿರುವ ಈ ಮಕ್ಕಳಿಕೆ ಕಲಿಯುವ ಮನಸ್ಸಿದ್ದರೂ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸೋತಿದೆ ಅನ್ನೋದು ಗ್ರಾಮಸ್ಥರ ಆರೋಪ.

ದೊಡ್ಡಮಗ್ಗೆ ಹೋಬಳಿ ಇಬ್ಬಡಿ ಗ್ರಾಮದಲ್ಲಿರುವ ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7 ನೇ ತರಗತಿಯವರೆಗೆ ಪ್ರಸ್ತುತ 61ಕ್ಕೂ ಹೆಚ್ಚು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮುಖ್ಯಶಿಕ್ಷಕರು ಸೇರಿ 4 ಜನ  ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.ಇಲ್ಲಿ ಒಟ್ಟು 5 ಕೊಠಡಿಗಳು ಇದ್ದು, ಅದರಲ್ಲಿ ಒಂದು ಕೊಠಡಿ ಪೂರ್ಣ ಹದಗೆಟ್ಟಿದ್ದು, ಪಿಡಬ್ಲ್ಯೂ ಡಿ ಯವರಿಗೆ ತೆರವು ಗೊಳಿಸಲು ಮನವಿ ಮಾಡಲಾಗಿದೆ. ಯೋಗ್ಯವಾಗಿರುವ ನಾಲ್ಕೂ ಕೊಠಡಿಗಳ ಒಂದನ್ನು ಮುಖ್ಯಶಿಕ್ಷಕರು ಬಳಸಿಕೊಂಡರೆ ಉಳಿದ  ಕೊಠಡಿಯಲ್ಲಿ ಒಂದರಲ್ಲಿ ನಲಿ-ಕಲಿ ಮಕ್ಕಳು 1ರಿಂದ 5ನೇ ತರಗತಿಯಲ್ಲಿ 39 ಮಕ್ಕಳು ಒಂದೇ ಕೊಠಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಉಳಿದ ಎರಡು ಕೊಠಡಿಗಳು ಬಿರುಕು ಬಂದು ಯಾವಾಗ ಬೇಕಾದ್ರೂ ಕುಸಿದು ಮಕ್ಕಳನ್ನು ಬಲಿ ಪಡೀ ಬಹುದು ಅನ್ನೋದು ಸಾರ್ವಜನಿಕರ ಆತಂಕ. ಹಾಗಾಗಿ ಈ ಶಾಲೆಗೆ ಮಕ್ಕಳನ್ನು ದಾಖಲಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಒಂದೇಡೆ ಕೊರೊನಾ ಬೀತಿ ಇನ್ನೊಂದು ಕಡೆ ಕೊಠಡಿ ಭೀತಿ ಇದರಿಂದ ಈ ಗ್ರಾಮದ ಬಡವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಾಗಿದೆ. ಅದಕ್ಕಾಗಿ ಗ್ರಾಮಸ್ಥರೇ ಸೇರಿ ಕೊಠಡಿ ನಿರ್ಮಿಸಲು ಮುಂದಾಗಿದ್ದಾರೆ. ಆದ್ರೆ ಇವರಿಗೆ ಶಿಕ್ಷಣ ಇಲಾಖೆ ಒಂದು ರೂಪಾಯಿ ಅನುದಾನವನ್ನೂ ಕೊಡುತ್ತಿಲ್ಲ ಅನ್ನೋದು ಗ್ರಾಮದ ಜನರ ಆರೋಪ. ಸರ್ಕಾರ ಮಕ್ಕಳಿಗೆ ಶಿಕ್ಷಣ ನೀಡಲು  ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಲವು ಸೌಲಭ್ಯ ಕಲ್ಪಿಸುತ್ತಿದೆ.  ಆದ್ರೆ ಕೆಲ ಸರ್ಕಾರಿ ಶಾಲೆಗಳು ಮೂಲಭೂತ ಸೌಲಭ್ಯದಿಂದ ವಂಚಿತವಾಗಿ ಗುಣಮಟ್ಟ ಶಿಕ್ಷಣಕ್ಕೆ ಅಡ್ಡಿಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸರ್ಕಾರಿ ಶಾಲೆಗೆ ಹೆಚ್ಚಾಗಿ ಹಿಂದುಳಿದ ಎಸ್ಸಿ-ಎಸ್ಟಿ ಮಕ್ಕಳೇ ಹೆಚ್ಚು ದಾಖಲಾತಿ ಪಡೆಯುತ್ತಿದ್ದಾರೆ. ಸರ್ಕಾರ ಎಲ್ಲಾ ರೀತಿಯಲ್ಲಿ  ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರಿಗೆ ಪ್ರೋತ್ಸಾಹಿಸಬೇಕು. ಈಗಲಾದ್ರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಈ ಶಾಲೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಿ ಅನ್ನೋದು ವಿಜಯಟೈಮ್ಸ್‌ ಆಶಯ.

Exit mobile version