ಹೀಗೂ ಇರುತ್ತಾ ಸರ್ಕಾರಿ ಶಾಲೆ ! ಚಂದ್ರಶೇಖರ ಪುರದಲ್ಲಿದೆ ಮಾದರಿ ಸರ್ಕಾರಿ ಪ್ರೌಢಶಾಲೆ

ಹೀಗೂ ಇರುತ್ತಾ ಸರ್ಕಾರಿ ಶಾಲೆ ! ಚಂದ್ರಶೇಖರ ಪುರದಲ್ಲಿದೆ ಮಾದರಿ ಸರ್ಕಾರಿ ಪ್ರೌಢಶಾಲೆ.

ಇದು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಂದ್ರಶೇಖರ ಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ…

ಸರ್ಕಾರಿ ಶಾಲೆ ಎಂದಾಕ್ಷಣ ಮೂಗು ಮುರಿದುಕೊಂಡು ಹೋಗುವವರೇ ಜಾಸ್ತಿ. ಆದರೆ ಒಂದು ಸರ್ಕಾರಿ ಶಾಲೆಯನ್ನು ಈ ರೀತಿಯಲ್ಲಿಯೂ ಮಕ್ಕಳ ಶಿಕ್ಷಣಕ್ಕೆ ಉಪಯುಕ್ತವಾಗುವಂತೆ ರೂಪಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತಿದೆ ಕೂಡ್ಲಿಗಿ ತಾಲೂಕು ಚಂದ್ರಶೇಖರಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ.

ಇಲ್ಲಿ ಹೈಟೆಕ್‌ ಗಣಿತ ಪ್ರಯೋಗಾಲಯವಿದೆ, ಗ್ರಂಥಾಲಯವಿದೆ, ಮಕ್ಕಳ ಓದಿಗೆ ಪೂರಕ ತರಗತಿಗಳಿವೆ. ಒಟ್ಟಾರೆಯಾಗಿ ಇದೊಂದು ವ್ಯವಸ್ಥಿತವಾದ ಸರ್ಕಾರಿ ಪ್ರೌಢಶಾಲೆ.  

ಈ ಶಾಲೆಯನ್ನು ನೋಡಿದರೆ ಸಾಕು ಎಂಥವರಿಗೂ ರೋಮಾಂಚನಾವಾಗುತ್ತದೆ. ಏಕೆಂದರೆ ಇಲ್ಲಿ ಒಂದು ಕೊಠಡಿ ಪೂರ್ತಿ ಗಣಿತ ಪ್ರಯೋಗಕ್ಕೆ ಮೀಸಲಾಗಿದೆ. ಮುಗ್ಧ ಮಕ್ಕಳ ಗಮನ ಸೆಳೆಯುವಂತೆ ವಿವಿಧ ಗಣಿತಕ್ಕೆ ಸಂಬಂಧಪಟ್ಟಂತಹ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

ಗಣಿತದ ಸೂತ್ರಗಳು, ಪ್ರಮೇಯಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥ ಆಗುವಂತೆ ಚಿತ್ರಗಳನ್ನು ಬಿಡಿಸಿ ವಿವರಿಸಲಾಗಿದೆ.

ಕೇವಲ ಗಣಿತ ವಸ್ತು ಸಂಗ್ರಹಾಲಯವಷ್ಟೇ ಅಲ್ಲ, ಸುಸಜ್ಜಿತ ಗ್ರಂಥಾಲಯವೂ ಇದೆ. ಸರ್ಕಾರವೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಿಯಮಿತವಾದ ಗ್ರಂಥಾಲಯ ಸೌಲಭ್ಯವಿದೆಯಾದರೂ ತಮ್ಮ ಸ್ವಂತ ಖರ್ಚಿನಿಂದ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳ ನೆರವಿನಲ್ಲಿ ಈ ಗ್ರಂಥಾಲಯ ಇನ್ನಷ್ಟು ಸುಸಜ್ಜಿತವಾಗಿದೆ.

ಈ ಪ್ರೌಢಶಾಲೆಯ ಗಣಿತ ಶಿಕ್ಷಕ ಎನ್‌. ಶ್ರೀಕಾಂತ ಅವರ ಅದ್ಭುತ ಸೃಜನಶೀಲತೆಯಲ್ಲಿ ಈ ಗಣಿತ ಪ್ರಯೋಗಾಲಯವೂ ಸಿದ್ಧವಾಗಿದೆ. ಈ ಪ್ರಯೋಗಾಲಯವನ್ನು ನೋಡಿದರೆ ಸಾಕು ಗಣಿತ ಇಷ್ಟಪಡದ ಮಕ್ಕಳು ಕೂಡ ಗಣಿತವನ್ನು ಇಷ್ಟಪಡುವ ರೀತಿಯಲ್ಲಿ ನಿಮರ್ಮಿಸಿದ್ದಾರೆ.

ಈ ಪ್ರಯೋಗಾಲಯಲ್ಲ ಮುಗ್ಧ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಹೊಸ ಹೊಸ ಮಾದರಿಗಳನ್ನು ತಯಾರಿಸಿದ್ದಾರೆ. ಇದು ಗಣಿತವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಹಾಯಕಾರಿಯಾಗಿದೆ. ಅಲ್ಲದೇ ಈ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯವೂ ಅಷ್ಟೇ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುವು ಮಾಡಿಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದೊಂದು ಮಾದರಿ ಶಾಲೆ ಎಂದು ಹೇಳಬಹುದು. ಈ ಶಾಲೆಯಂತೆ ಉಳಿದ ಸರ್ಕಾರಿ ಶಾಲೆಗಳು ಆಗಲಿ ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.

ಕೂಡ್ಲಿಗಿಯಿಂದ ವಿ.ಜಿ.ವೃಷಭೇಂದ್ರ, ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Exit mobile version