ಗ್ರಾಮ ಪಂಚಾಯತ್‌ಗೂ ಇರಬೇಕಾ ‘ನೋಟಾ’

ಬೆಂಗಳೂರು, ಡಿ.11: ಈಗ ಕರ್ನಾಟಕ ರಾಜ್ಯದಲ್ಲಿ  ಗ್ರಾಮ ಪಂಚಾಯಿತಿ ಚುನಾವಣೆಯ ಹವಾ ಜೋರಾಗಿ ನಡೆಯುತ್ತಿದೆ. ಪ್ರತಿಯೊಬ್ಬ ಪ್ರಜೆ ತನ್ನ ಮತವನ್ನು ಯೋಗ್ಯರಿಗೆ ಮಾತ್ರ ನೀಡುವ ಸಲುವಾಗಿ, ಗ್ರಾಮ ಪಂಚಾಯತ್‌ ಚುನಾವಣೆಯ ಸಂದರ್ಭದಲ್ಲಿಯೂ ಬೇರೆ ಚುನಾವಣೆಗಳಿಗೆ ಇರುವಂತೆ ‘ನೋಟಾ’ (ನನ್‌ ಆಫ್‌ ದಿ ಎಬೋವ್‌) ಇರಬೇಕು ಎಂಬ ಕೂಗು ಎದ್ದಿದೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಎಂಬ ವಿಕೇಂದ್ರೀಕರಣದ ಮೂರು ಸ್ತರದ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯೇ ಬಲಿಷ್ಠವಾದುದು. ಎಲ್ಲ ಸರ್ಕಾರಿ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ನಡೆಯುವುದೇ ಗ್ರಾಮಸಭೆಗಳಲ್ಲಿ. ಇಂಥ ಅಧಿಕಾರ ಜಿಲ್ಲಾ ಪಂಚಾಯಿತಿಗಾಗಲಿ, ತಾಲ್ಲೂಕು ಪಂಚಾಯಿತಿಗಾಗಲಿ ಇಲ್ಲ. ಶಾಸಕರ ನಂತರ ಇಂಥ ಅವಕಾಶವನ್ನು ಹೊಂದಿರುವ ಗ್ರಾಮ ಪಂಚಾಯಿತಿಗೆ ಪ್ರಾಮಾಣಿಕರು, ಅಭಿವೃದ್ಧಿ ಬಗ್ಗೆ ಬದ್ಧತೆ ಇರುವವರು ಆಯ್ಕೆಯಾಗಬೇಕು. ಆದರೆ, ಹಣದ ಬಲ ಅಥವಾ ಇನ್ಯಾವುದೋ ಬಲದ ಕಾರಣದಿಂದ ಭ್ರಷ್ಟರು, ವೈಯಕ್ತಿಕ ಅಭಿವೃದ್ಧಿ ಮಾಡಿಕೊಳ್ಳುವವರು ಚುನಾವಣೆಗೆ ನಿಂತಿದ್ದರೆ ಅವರನ್ನು ತಿರಸ್ಕರಿಸುವ ಅಧಿಕಾರ ನೀಡಬೇಕು ಎಂದು ಗ್ರಾಮೀಣ ರಾಜಕೀಯ ಚಿಂತಕ ತೇಜಸ್ವಿ ಪಟೇಲ್.

ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಮಾಡಲಾಗಿತ್ತು. ಚುನಾವಣೆ ಎಂಬುದು ಕೊರೊನಾಕ್ಕಿಂತ ದೊಡ್ಡ ಸೋಂಕಾಗಿ ಪರಿವರ್ತನೆಗೊಂಡಿದೆ. ಮತ್ತು ಹಲವು ರೀತಿಯ ವ್ಯವಸ್ಥೆಗಳು ಬದಲಾಗಿವೆ ಅದಕ್ಕಾಗಿ ಮತದಾನ ಮುಗಿಯುವವರೆಗೆ ಲಾಕ್‌ಡೌನ್‌ ಘೋಷಣೆ ಮಾಡಬೇಕು. ಗ್ರಾಮ ಪಂಚಾಯಿತಿ ಚುನಾವಣೆಗೆ ಯಾರು ನಿಂತಿದ್ದಾರೆ ಎನ್ನುವುದನ್ನು ಚುನಾವಣಾ ಆಯೋಗವೇ ಮನೆಮನೆಗೆ ತಿಳಿಸಬೇಕು. ಅಭ್ಯರ್ಥಿಗಳಾಗಲಿ, ಅಭ್ಯರ್ಥಿಗಳ ಪರವಾಗಲಿ ಪ್ರಚಾರ ಮಾಡುವವರು ಮನೆ ಮನೆಗಳಿಗೆ ತೆರಳಬಾರದು. ಇದರಿಂದ ಕೊರೊನ ವೈರಸ್ ಹರಡುವ ಭೀತಿ ಹೆಚ್ಚಾಗಬಹುದು.

 ಗ್ರಾಮ ಪಂಚಾಯಿತಿಗೆ ‘ನೋಟಾ’ ಅವಕಾಶ ಇಲ್ಲ. ಬದಲಾವಣೆ ಆಯೋಗ ಮಾಡಬೇಕೇ ಹೊರತು ನಮ್ಮ ಹಂತದಲ್ಲಿ ಆಗುವುದಿಲ್ಲ.ಮಹಾಂತೇಶ ಬೀಳಗಿ, ಜಿಲ್ಲಾ ಚುನಾವಣಾಧಿಕಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಯಾಕೆಂದರೆ ಈಗಿನ ಚುನಾವಣೆಯಲ್ಲಿ ಭ್ರಷ್ಟಚಾರ ಅತಿ ಹೆಚ್ಚಾಗಿ ಕಂಡುಬರುತ್ತಿದೆ.ಇದರಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಹ ಭ್ರಷ್ಟಚಾರ ಕಾಣಬಾರದೆಂದ ಈ ನೋಟಾ ವಿಧಾನ ಬಳಸಬೇಕೆಂದು ತೇಜಸ್ವಿ ಪಟೇಲ್ ರವರು ಅಭಿಪ್ರಾಯ ಪಟ್ಟಿದ್ದಾರೆ.

Exit mobile version