ಪಿಯುಸಿ ಪಾಸ್ ಮಾಡಿದ 2 ಮೊಮ್ಮಕ್ಕಳ ಮುದ್ದಿನ ಅಜ್ಜಿ

FB : Lakyntiew Syiemlieh


ಗಣಿತ ಕಷ್ಟ ಎಂದು 10 ನೇ ತರಗತಿಯಲ್ಲಿ ಶಾಲೆಗೆ ಹೋಗುವುದನ್ನು ತೊರೆದ್ದಿದ್ದ ಶಿಲ್ಲಾಂಗ್‌ನ ಮೂಲದ ಮಹಿಳೆ ಇದೀಗ ತನ್ನ 50 ನೇ ವಯಸ್ಸಿನಲ್ಲಿ 12 ನೇ ತರಗತಿಯನ್ನು ಪಾಸ್ ಮಾಡಿಕೊಂಡು ದೇಶದ ಜನರ ಗಮನ ಸೆಳೆದಿದ್ದಾರೆ.

ಶಿಲ್ಲಾಂಗ್‌ನ ಉಮ್ಸಿಂಗ್ ಎಂಬ ಸಣ್ಣ ಹಳ್ಳಿಯ ನಿವಾಸಿ 50 ವರ್ಷದ ಲ್ಯಾಕ್ಟಿವ್ಯು ಸಿಮ್ಯುಲೆ ಮಹಿಳೆ ಈ ಬಾರಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಈಕೆ ನಾಲ್ಕು ಮಕ್ಕಳ ತಾಯಿ ಹಾಗು ಎರಡು ಮುದ್ದು ಮಕ್ಕಳ ಪ್ರೀತಿಯ ಅಜ್ಜಿ ಎಂಬುದು ವಿಶೇಷ.ಲ್ಯಾಕ್ಟಿವ್ಯು ತನ್ನ 21 ವಯಸ್ಸಿನಲ್ಲಿ ಮದುವೆಯಾಗುತ್ತಾಳೆ. ದುರಾದೃಷ್ಟವಶಾತ್ ಈಕೆಯ ಮದುವೆ ಮುರಿದು ಬೀಳುತ್ತದೆ. ಇದರಿಂದ ಮನೆಯನ್ನು ನೋಡಿಕೊಳ್ಳುವ ಜವಾಬ್ಧಾರಿ ಲ್ಯಾಕ್ಟಿವ್ಯು ಹೆಗಲಿಗೆ ಬೀಳುತ್ತದೆ. ತನ್ನ 4 ಮಕ್ಕಳನ್ನು ಸಾಕಬೇಕೆಂಬ ಛಲದಿಂದ ತನ್ನ ಊರಿನ ಶಾಲೆಯಲ್ಲಿ ಈಕೆಯ ಇಷ್ಟವಾದ ಕಾಸಿ ಭಾಷೆಯನ್ನು ಪಾಠಮಾಡಲು ಪ್ರಾರಂಭಿಸಿದಳು.

2015 ರಲ್ಲಿ ಈಕೆಗೆ ಶಾಲೆಗೆ ಮರಳಿ ಹೋಗುವ ಆಸೆಯಾಗುತ್ತದೆ. ಇದರಂತೆ ಉದ್ಯೋಗ, ಮನೆ ಹಾಗೂ ಶಾಲೆ ಎಲ್ಲವನ್ನು ಸಮತೋಲನವಾಗಿ ನಡೆಸಿ ಇಂದಿರ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ 10 ನೇ ತರಗತಿಯನ್ನು ಪಾಸ್ ಮಾಡಿಕೊಂಡಿರುತ್ತಾರೆ. ಇನ್ನು ಶಾಲೆಯ ಶಾಲೆಯ ಶಿಕ್ಷಕಿಯಾಗಬೇಕಾದರೆ 12 ನೇ ತರಗತಿ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಉದ್ಯೋಗಕ್ಕೆ 1 ವರ್ಷಗಳ ಕಾಲ ಬ್ರೇಕ್ ನೀಡಿ ಉಮ್ಸ್ಂಗ್ ನ ಬಲ್ವಾನ್ ಕಾಲೇಜಿನಲ್ಲಿ ಪೂರ್ಣ ಪ್ರಮಾಣದ ವಿದ್ಯಾರ್ಥಿಯಾಗಿ ಸೇರಿಕೊಂಡು ಪಿಯುಸಿ ಪಾಸ್‌ ಮಾಡಿದ್ದಾರೆ.

ಉಮ್ಸಿಂಗ್‌ನ ಬಲ್ವಾನ್ ಕಾಲೇಜಿಗೆ ಆರ್ಟ್ಸ್ ವಿಭಾಗಕ್ಕೆ ಸೇರಿಕೊಂಡು ಅರ್ಥಶಾಸ್ಥ್ರ, ಆಂಗ್ಲಾ, ರಾಜ್ಯ ಶಾಸ್ತ್ರಾ, ಹಾಗೂ ಕಾಸಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇದೀಗ 3 ನೇ ಗ್ರೇಡ್‌ನಲ್ಲಿ 12ನೇ ತರಗತಿಯನ್ನು ಪಾಸ್ ಮಾಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಎಲ್ಲರಂತೆ ಲ್ಯಾಕ್ಟಿವ್ಯು ಕೂಡ ಸಮವಸ್ತ್ರ ಧರಿಸಿ ತನಗಿಂತ ವಯಸ್ಸಿನಲ್ಲಿ ಸುಮಾರು 30 ವರ್ಷದಷ್ಟು ಸಣ್ಣವರ ಜೊತೆ ಈಕೆ ಕಾಲೇಜಿನಲ್ಲಿ ಕಲಿತಿದ್ದಾರೆ. ಓದುವುದರ ಜೊತೆಗೆ ನೃತ್ಯ ಹಾಗು ಸಂಗೀತ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸುತ್ತಿದ್ದುದ್ದು ಈಕೆಯ ವಿಶೇಷತೆ.

ಲ್ಯಾಕ್ಟಿವ್ಯು ಸಿಮ್ಯುಲೆ ಸಾಧನೆಗೆ ಇಡೀ ದೇಶವೇ ಕೊಂಡಾಡುತ್ತಿದ್ದು ಶಿಲ್ಲಾಂಗ್ ನ ಮುಖ್ಯಮಂತ್ರಿ ಕೂಡ ಈಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಲ್ಯಾಕ್ಟಿವ್ಯು ನ ಮಕ್ಕಳು ಕಾಲೇಜಿಗೆ ಹೋಗಲು ಹುರಿದುಂಬಿಸಿದ್ದು ಈಗ ತಾಯಿಯ ಈ ಸಾಧನೆಗೆ ಹೆಮ್ಮೆ ಪಡುತ್ತಿದ್ದಾರೆ. ನಮ್ಮ ತಾಯಿಯೇ ನಮಗೆ ಸ್ಪೂರ್ಥಿ ಎನ್ನುತ್ತಿದ್ದಾರೆ ಲ್ಯಾಕ್ಟಿವ್ಯು ನ ಮಕ್ಕಳು . ಇಷ್ಟೇ ಅಲ್ಲದೇ ಇನ್ನು ಹೆಚ್ಚು ಓದಲು ಲ್ಯಾಕ್ಟಿವ್ಯು ಇಚ್ಛಿಸುತ್ತಿದ್ದಾರೆ. ಶಾಲೆಯ ಜೊತೆ ಜೊತೆಗೆ ಈಕೆ ಸೆಲ್ಫ್ ಹೆಲ್ಪ್ ಗ್ರೂಪ್‌ನ ಸದಸ್ಯೆಯಾಗಿದ್ದಾರೆ. ಇದರ ಜೊತೆಗೆ ಇವರ ಹಳ್ಳಿಯ ಮಾಸ್ಟರ್ ಬುಕ್ ಕೀಪರ್ ಕೂಡ ಲ್ಯಾಕ್ಟಿವ್ಯು ಆಗಿದ್ದಾರೆ.

ಇನ್ನು ಸಾಧನೆ ಮಾಡಲು ವಯಸ್ಸಿನ ಮಿತಿ ಬೇಕಿಲ್ಲ ಎಂದು ತೋರಿಸಿ ಕೊಟ್ಟವರಲ್ಲಿ ಇವರು ಮೊದಲೇನಲ್ಲ. ಪೌಲ್ ಸಿರೋಮನಿ ಎಂಬ ವ್ಯಕ್ತಿ ತನ್ನ 90ನೇ ವಯಸ್ಸಿನಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದರು. ಇನ್ನು ರಾಜ್ ಕುಮಾರ್ ವೈಷ್ಯಾ ಎಂಬವರು ತಮ್ಮ 97 ವಯಸ್ಸಿನಲ್ಲಿ ಎಲ್.ಎಲ್.ಬಿ ಪದವಿಯನ್ನು ಪೂರ್ಣಗೊಳಿಸಿಕೊಂಡಿದ್ದರು . ಡಾ. ಭಗವತಿ ಓಜಾ ರವರಿಗೆ ತಮ್ಮ 79 ನೇ ವಯಸ್ಸಿನಲ್ಲಿ ಕ್ರೀಡೆಗಾಗಿ ನ್ಯಾಷನಲ್ ಅವಾರ್ಡ್ ದೊರಕಿತ್ತು. ಇನ್ನು ದೀಪಾ ಮಲಿಕ್ 40 ವರ್ಷದಲ್ಲಿ ಪ್ಯಾರಾ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ದೇಶಕ್ಕೇ ಹೆಮ್ಮೆಯನ್ನು ತಂದು ಕೊಟ್ಟಿದ್ದರು.

Exit mobile version