ಹೆಚ್ಚಿದ ಹಸಿರು ಪಟಾಕಿ ಕ್ರೇಜ್

ದೀಪಾವಳಿಗೂ ಮುನ್ನವೇ ಪಟಾಕಿ ಸದ್ದು ಕೇಳಿ ಬರುತ್ತಿದ್ದು, ಈ ನಡುವೆ ಪಟಾಕಿಯಿಂದ ಆಗುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರಗಳು ಸಜ್ಜಾಗಿವೆ. ಕೆಲ ರಾಜ್ಯಗಳು ಪಟಾಕಿ ಹೊಡೆಯುವುದನ್ನು ಸಂಪೂರ್ಣ ನಿಷೇಧಿಸಿವೆ. ಕೆಲವು ರಾಜ್ಯ ಸರಕಾರಗಳು ಹಸಿರು ಪಟಾಕಿಗಳನ್ನು ಹೊಡೆಯಲು ಅನುಮತಿ ನೀಡಿವೆ. ಆದರೆ, ಇದಕ್ಕೆ ಕಾಲಮಿತಿ ನಿಗದಿಪಡಿಸಲಾಗಿದೆ.

ಹಸಿರು ಪಟಾಕಿ ಎಂದರೇನು?
ಅಪಾಯಕಾರಿ ಹಾಗೂ ಮಾಲಿನ್ಯಕಾರಕ ಪಟಾಕಿಗಳ ಜಾಗದಲ್ಲಿ ಹಲವು ರಾಜ್ಯಗಳು ಹಸಿರು ಪಟಾಕಿ ಸುಡಲು ಅವಕಾಶ ನೀಡಿದ್ದು, ಜನರಲ್ಲಿ ಕ್ರೇಜ್ ಎದ್ದು ಕಾಣುತ್ತಿದೆ. ಆದರೆ ಹಸಿರು ಕ್ರ್ಯಾಕರ್‌ಗಳು ಯಾವುವು ಮತ್ತು ಅವು ಹಳೆಯ ಸಾಂಪ್ರದಾಯಿಕ ಪಟಾಕಿಗಳಿಗಿಂತ  ಹೇಗೆ ಭಿನ್ನವಾಗಿದೆ ಎಂದರೆ, ಹಸಿರು ಕ್ರ್ಯಾಕರ್‌ಗಳು ವಾಯು ಮಾಲಿನ್ಯವನ್ನು ಮಾಡುವ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಇವುಗಳಲ್ಲಿ ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಕಾರ್ಬನ್ ಬಳಸುವುದಿಲ್ಲ ಅಥವಾ ಹಸಿರು ಪಟಾಕಿಗಳಲ್ಲಿ ಅಪಾಯಕಾರಿ ರಾಸಾಯನಿಕಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಈ ಪಟಾಕಿಗಳಿಂದ ಮಾಲಿನ್ಯ ಕಡಿಮೆಯಾಗುತ್ತದೆ.

ಪಟಾಕಿ ಹೊಡೆಯುವದರಿಂದ ಆಗುವ ತೊಂದರೆಗಳು ?
ಪಟಾಕಿಗಳನ್ನು ಸುಡುವುದರಿಂದ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಇದು ಈಗಾಗಲೇ ಚಳಿಗಾಲದಲ್ಲಿ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಕೆಟ್ಟ ಸ್ಥಿತಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ಪಟಾಕಿಗಳನ್ನು ಸುಡುವುದು ಹೆಚ್ಚು ಅಪಾಯಕಾರಿ. ಏಕೆಂದರೆ ಮಾಲಿನ್ಯದಿಂದಾಗಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ ಮತ್ತು ಜನರು ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ.

Exit mobile version