ಗೃಹಲಕ್ಷ್ಮಿ ಮಹತ್ವದ ಪ್ರಕಟಣೆ: ಗೃಹಲಕ್ಷ್ಮಿ ಯೋಜನೆಯ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕಾಂಗ್ರೆಸ್ (Congress) ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ (Gruhalakshmi Important Announcement) ಯೋಜನೆ ಅಡಿಯಲ್ಲಿ ಮನೆಯ

ಒಡತಿಗೆ ಪ್ರತಿ ತಿಂಗಳು 2,000 ರೂಪಾಯಿಗಳು ಆರ್ಥಿಕ ನೆರವನ್ನು ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆದರೆ ಇದುವರೆಗೂ 9‌.44ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ

ಜಮೆ‌ಯಾಗಿಲ್ಲ.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಗೃಹಲಕ್ಷ್ಮೀ ಬಗ್ಗೆ ಇದೀಗ ಈ ಯೋಜನೆಯ ಗೊಂದಲದ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿ ತೆರೆ ಎಳೆದಿದ್ದಾರೆ.

ರಕ್ಷಾ ಬಂಧನದ ದಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಮ್ಮುಖದಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ ಇದಕ್ಕೆ

ಕಾರಣ ಅವರ ದಾಖಲೆಗಳು ಸರಿಯಾಗಿಲ್ಲದೇ ಇರಬಹುದು ಆದರೆ ನಮ್ಮಿಂದ ಆಗಿದ್ದಲ್ಲ ಮತ್ತು ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು.

1.08 ಕೋಟಿ ಅರ್ಜಿದಾರರಿಗೆ 2,169 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು ಮತ್ತು ಆಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮೀ (Gruhalakshmi) ಯೋಜನೆಗೆ 1.08 ಕೋಟಿ ಅರ್ಜಿ ಸಲ್ಲಿಕೆಯಾಗಿತ್ತು.1.8 ಕೋಟಿ

ಅರ್ಜಿದಾರರಲ್ಲಿ 93 ಲಕ್ಷ ಫಲಾನುಭವಿಗಳಿಗೆ ಹಣ ಜಮೆ ಆಗಿದೆ ಮತ್ತು 5.5 ಲಕ್ಷ ಅರ್ಜಿದಾರರಿಗೆ ಡಿಬಿಟಿ ಮೂಲಕ‌ ಹಣ ವರ್ಗಾವಣೆ ಚಾಲ್ತಿಯಲ್ಲಿದೆ.ಆದರೆ ಈವರೆಗೆ 9‌.44 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮೀ

ಹಣ ಜಮೆ‌ಯಾಗಿಲ್ಲ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Gruhalakshmi Important Announcement) ಮಾಧ್ಯಮ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ.

ಹಣ ಜಮೆಯಾಗದಿರೋದಕ್ಕೆ ಕಾರಣ:
3082 ಅರ್ಜಿದಾರರು ಮರಣ ಹೊಂದಿದ್ದು, ಅನರ್ಹಗೊಳಿಸಲಾಗಿದೆ ಹಾಗೂ 1 ಲಕ್ಷದ 75 ಸಾವಿರ ಅರ್ಜಿದಾರರ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ ಇದೆ. ಮತ್ತು 1 ಲಕ್ಷದ 59 ಸಾವಿರ ಅರ್ಜಿದಾರರ ಡೆಮೋ

ದೃಢೀಕರಣ ವಿಫಲವಾಗಿದೆ. 5 ಲಕ್ಷ 96 ಸಾವಿರ ಅರ್ಜಿದಾರರ ಬ್ಯಾಂಕ್ ಆಧಾರ್ (Aadhar) ಜೋಡಣೆಯಾಗಿಲ್ಲ ಆದ್ದರಿಂದ 9,766 ಅರ್ಜಿ ಸೇವಾಸಿಂಧು ವತಿಯಿಂದ ಪುನರ್ ಪರಿಶೀಲನೆ ನಡೀತಿದೆ

ಎಂದು ತಿಳಿಸಿದ್ದಾರೆ.

ಈ ಬಾರಿ ಮತ್ತೆ ಸೆಪ್ಟೆಂಬರ್​ನಲ್ಲಿ 1ಕೋಟಿ 14ಲಕ್ಷ ಜನ ಗೃಹಲಕ್ಷ್ಮೀ ‌ಫಲಾನುಭವಿಗಳಿದ್ದಾರೆ. ಸೆಪ್ಟೆಂಬರ್​​ನಲ್ಲಿ (September) ಗೃಹಲಕ್ಷ್ಮೀ ಯೋಜನೆಗಾಗಿ 2280 ಕೋಟಿ ಹಣ ಬಿಡುಗಡೆ

ಮಾಡಲಾಗಿದೆ ಎಂದು ಮಹಿಳಾ & ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನು ಓದಿ : ಖ್ಯಾತ ಪತ್ರಕರ್ತೆ, ವಿಜಯ ಟೈಮ್ಸ್‌ನ ಮುಖ್ಯ ಸಂಪಾದಕರಾದ ವಿಜಯಲಕ್ಷ್ಮೀ ಶಿಬರೂರುರವರಿಗೆ ಬಿ.ಎಸ್.ಡಬ್ಲ್ಯೂ.ಟಿ ವರ್ಷದ ವ್ಯಕ್ತಿ ಪ್ರಶಸ್ತಿ

Exit mobile version