Bengaluru: ರಾಜ್ಯ ಕಾಂಗ್ರೆಸ್ (Gruhalakshmi Scheme Problem) ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಹಣ ಬಿಡುಗಡೆಗೆ ನೂರೆಂಟು
ಸಮಸ್ಯೆಗಳು ಎದುರಾಗಿದ್ದು, 2000 ರೂ.ಗಳು ಪ್ರತಿ ತಿಂಗಳು ಸರಿಯಾಗಿ ತಮ್ಮ ಬ್ಯಾಂಕ್ ಖಾತೆಗೆ (Bank Account) ಬರುತ್ತದೆ ಎಂದು ಕನಸು ಕಂಡಿದ್ದ ರಾಜ್ಯದ ಮಹಿಳೆಯರಿಗೆ ನಿರಾಸೆಯಾಗಿದೆ.
ಮೊದಲ ಕಂತಿನ ಹಣ ಬಿಡುಗಡೆಯಾಗಿ ತಿಂಗಳುಗಳೇ ಕಳೆದರು, ಕೆಲವು ಜಿಲ್ಲೆಗಳಲ್ಲಿ ಎರಡನೇಯ ಕಂತಿನ ಹಣವೇ ಇನ್ನು ಬಂದಿಲ್ಲ. ಅಚ್ಚರಿ ಎಂದರೆ ಅರ್ಜಿ ಸಲ್ಲಿಸಿರುವ ಅನೇಕ ಮಹಿಳೆಯರಿಗೆ
ಮೊದಲನೇಯ ಕಂತಿನ ಹಣವೇ ಇನ್ನೂ ಬಂದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಈ ಯೋಜನೆ ಸಾಗುತ್ತಿರುವ ರೀತಿ ನೋಡಿದರೆ, ಇಡೀ ಯೋಜನೆ ಹಳ್ಳಹಿಡಿಯುತ್ತಿದ್ಯಾ ಎಂಬ ಅನುಮಾನ ಶುರುವಾಗಿದೆ.
ಮೂಲಗಳ ಪ್ರಕಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮಂಡ್ಯ, ರಾಯಚೂರು, ಕೋಲಾರ (Hassan, Mandya, Raichur, Kolar)ಜಿಲ್ಲೆಗಳ ಮಹಿಳೆಯರಿಗೆ ಮೊದಲನೇಯ ಕಂತಿನ
ಹಣ ಮಾತ್ರ ಬಂದಿದ್ದರೆ, ಕೆಲವರಿಗೆ ಮೂರು ತಿಂಗಳ ಹಣ ಬಂದಿದೆ. ಇನ್ನು ಕೆಲವರಿಗೆ ಒಂದು ತಿಂಗಳ ಹಣವೂ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಆಧಾರ್ ಕಾರ್ಡ್, ಫೋನ್ ನಂಬರ್
(Aadhaar Card, Phone Number)ಸರಿಯಲ್ಲ ಎಂದು (Gruhalakshmi Scheme Problem) ಹೇಳುತ್ತಾರೆ.
ಎಲ್ಲವೂ ಸರಿಯಿದ್ದರೂ ಹಣ ಬರುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರ ಸಮಸ್ಯೆಗಳಿಗೆ ಇಲಾಖೆಗಳಿಂದ ಸೂಕ್ತ ಪರಿಹಾರ ಸಿಗುತ್ತಿಲ್ಲ. ಬ್ಯಾಂಕ್ ಹಾಗೂ ಕಂಪ್ಯೂಟರ್
ಸೆಂಟರ್ಗಳಲ್ಲಿ (Computer Center) ಈ ಬಗ್ಗೆ ವಿಚಾರಿಸಿ ನಿರಾಶರಾಗಿದ್ದೇವೆ ಎಂದು ಮಹಿಳೆಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅನ್ನಭಾಗ್ಯದ ಹಣವೂ ಇಲ್ಲ:
ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಸಮಸ್ಯೆಯ ನಡುವೆಯೇ ಅನ್ನಭಾಗ್ಯದ ಹಣವೂ ಬರುತ್ತಿಲ್ಲ. 5ಕೆಜಿ ಅಕ್ಕಿಗೆ ಬದಲಾಗಿ ಬ್ಯಾಂಕ್ ಖಾತೆಗಳಿಗೆ ಹಣ ನೀಡುವ ಭರವಸೆ ನೀಡಿದ್ದ ರಾಜ್ಯ
ಸರ್ಕಾರ, ಪ್ರತಿ ತಿಂಗಳು ಸರಿಯಾಗಿ ಖಾತೆ ಹಣ ಹಾಕುತ್ತಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಬ್ಯಾಂಕ್ ಆಧಾರ್ ಲಿಂಕ್ (Bank Aadhar Link) ಮಾಡಿ ಎನ್ನುತ್ತಾರೆ.
ಬ್ಯಾಂಕ್ನಲ್ಲಿ ವಿಚಾರಿಸಿದರೆ ಆಹಾರ ಇಲಾಖೆಯಲ್ಲಿ ಕೇಳಿ ಎನ್ನುತ್ತಾರೆ. ಒಟ್ಟಿನಲ್ಲಿ ಗೃಹಲಕ್ಷ್ಮೀಯರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಮಹಿಳೆಯರು ಅಸಮಾಧಾನ
ಹೊರ ಹಾಕಿದ್ದಾರೆ.
ಇದನ್ನು ಓದಿ: ಬೆಳ್ಳುಳ್ಳಿ ಶಾಕ್: ಈರುಳ್ಳಿ ಸರಧಿಯಾಯ್ತು, ಜನರಿಗೆ ಹೊರೆಯಾದ ಬೆಳ್ಳುಳ್ಳಿ ರೇಟ್