ಗೃಹಲಕ್ಷ್ಮಿ ಸ್ಥಗಿತ: ಗೃಹಲಕ್ಷ್ಮೀ ಯೋಜನೆಯ ನೋಂದಣಿ ತಾತ್ಕಾಲಿಕ ಸ್ಥಗಿತ, ಮಹಿಳೆಯರಿಗೆ ಬಿಗ್‌ ಶಾಕ್‌ !

Bengaluru: ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಅದ್ಧೂರಿಯಾಗಿ ಚಾಲನೆ ನೀಡಿ ಒಂದು ವಾರವಷ್ಟೇ ಕಳೆದಿದೆ. (Grulahakshmi Temporary suspension) ಆದರೆ ಇದರ ನಡುವೆಯೇ

Grulahakshmi Temporary suspension

ಗೃಹಲಕ್ಷ್ಮೀ ಯೋಜನೆಯ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಹೊಸ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದೆ.

ಅಂದರೆ ನೋಂದಾಯಿತ ಫಲಾನುಭವಿಗಳ ಖಾತೆಗೆ 2000 ರೂ. ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದೆ ಇರಲೆಂದು ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಇದುವರೆಗೂ ನೋಂದಾಯಿಸಿಕೊಳ್ಳದ ಮಹಿಳೆಯರಿಗೆ ಸರ್ಕಾರ ಬಿಗ್‌ ಶಾಕ್‌ ನೀಡಿದ್ದು, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿಯನ್ನು

ನೀಡಿದೆ ಮತ್ತು ಶೀಘ್ರದಲ್ಲಿಯೇ ನೋಂದಣಿ ಪುನರಾರಂಭಗೊಳ್ಳಲಿದೆ ಎಂದು ತಿಳಿಸಿದೆ. ಗೃಹಲಕ್ಷ್ಮೀ ಯೋಜನೆಯ ಹೊಸ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು,

ನೋಂದಣಿಯಾದ ಎಲ್ಲ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮಾಗೊಂಡ ಬಳಿಕ ನೋಂದಣಿ ಪ್ರಕ್ರಿಯೆ ಪುನರಾರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ

ಎಕ್ಸ್‌ ಖಾತೆಯಲ್ಲಿ (ಹಿಂದಿನ ಟ್ವಿಟರ್‌) (Twitter) ತಿಳಿಸಿದೆ.

ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್‌ 30ರಂದು ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೈಸೂರಿನಲ್ಲಿ ಚಾಲನೆ ನೀಡಲಾಗಿತ್ತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹಾಗೂ ಎಐಸಿಸಿ

ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೇರಿ ಯೋಜನೆಗೆ ಚಾಲನೆ ನೀಡಿ, ಗೃಹಿಣಿಯರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಈಗ ಯೋಜನೆಗೆ ಚಾಲನೆ ನೀಡಿ

ಒಂದೇ ವಾರದಲ್ಲಿ ನೋಂದಣಿಯನ್ನು ಸರ್ಕಾರ (Grulahakshmi Temporary suspension) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಏನಿದು ಗೃಹಲಕ್ಷ್ಮೀ ಯೋಜನೆ
ವಿಧಾನಸಭಾ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಪಕ್ಷವೂ ಮನೆ ಯಜಮಾನಿಗೆ ಮಾಸಿಕ 2 ಸಾವಿರ ರೂ. ನೀಡುವ ಭರವಸೆಯನ್ನು ಘೋಷಿಸಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ

ನಾ ನಾಯಕಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanaka Gandhi) ಗೃಹಲಕ್ಷ್ಮೀ ಯೋಜನೆಯನ್ನು ಘೋಷಣೆ ಮಾಡಿದ್ದರು. ತದ ನಂತರ ಕಾಂಗ್ರೆಸ್‌ ಭರ್ಜರಿ ಗೆಲುವು

ಸಾಧಿಸಿದ್ದು, ಈಗ ಅವೆಲ್ಲಾ ಭರವಸೆಗಳನ್ನು ಕಾಂಗ್ರೆಸ್‌ ಸರ್ಕಾರ ಈಡೇರಿಸುತ್ತಿದೆ. ಇದರ ಜೊತೆಗೆ ಈ ಯೋಜನೆಗೆ ಚಾಲನೆ ಸಿಕ್ಕಿದ್ದು ಮನೆ ಯಜಮಾನಿಯರ ಬ್ಯಾಂಕ್‌ ಖಾತೆಗೆ ಮೊದಲ ಕಂತಿನ

2 ಸಾವಿರ ರೂ. (Grilahakshmi Temporary suspension) ಪಾವತಿಯಾಗುತ್ತಿದೆ.

ಯೋಜನೆಯ ಲಾಭ ಪಡೆಯಲು ಗೃಹಿಣಿ ಮನೆ ಯಜಮಾನಿಯಾಗಿರಬೇಕು ಅಷ್ಟೇ ಅಲ್ಲದೆ ಬಿಪಿಎಲ್‌, ಎಪಿಎಲ್‌ (BPL APL) ಅಥವಾ ಅಂತ್ಯೋದಯ ಕಾರ್ಡ್‌ ಹೊಂದಿದವರು ಗೃಹಲಕ್ಷ್ಮೀ ಯೋಜನೆಗೆ

ಅರ್ಹರಾಗಿದ್ದು, ಜೊತೆಗೆ ಆಕೆ ಮತ್ತು ಆಕೆಯ ಪತಿ ಆದಾಯ ತೆರಿಗೆ (Income Tax) ಪಾವತಿದಾರರಾಗಿರಬಾರದು ಎಂಬ ಷರತ್ತನ್ನು ಸರ್ಕಾರ ವಿಧಿಸಿತ್ತು.

ಮೊದಲಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿಯೇ ನೋಂದಣಿಗೆ ಅವಕಾಶ ನೀಡಬೇಕು ಎಂದುಕೊಂಡಿದ್ದ ಸರ್ಕಾರ ಬಳಿಕ ಗ್ರಾಮ ಒನ್‌ ಕೇಂದ್ರ (Gram One), ಬಾಪೂಜಿ ಒನ್‌ ಕೇಂದ್ರ, ಕರ್ನಾಟಕ ಒನ್‌,

ಬೆಂಗಳೂರು ಒನ್‌ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ನೀಡಿತ್ತು.

Exit mobile version