ಹ್ಯಾಕಿಂಗ್ ಮಾಡಲು ಏಕಾಗ್ರತೆ ಅಗತ್ಯ: ಕುಖ್ಯಾತ ಹ್ಯಾಕರ್ ಶ್ರೀಕಿ

ಬೆಂಗಳೂರು, ನ. 21: ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್‌ ಶ್ರೀಕಿ  ಸಿಸಿಬಿ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ಈ ಬಗ್ಗೆ ಈಗ ಒಂದು ಶಾಕಿಂಗ್‌ ನ್ಯೂಸ್‌ಗಳು ಹೊರಬಂದಿದೆ. ವಿಚಾರಣೆಯ ಸಂದರ್ಭದಲ್ಲಿ ಏನಾದ್ರೂ ಆಗಲಿ ನಾನು ಮಾತ್ರ ಹ್ಯಾಕ್‌ ಮಾಡೋದನ್ನು ಬಿಡುವುದಿಲ್ಲ ಎಂದು ಹೇಳಿದ್ದಾನೆ ಎನ್ನಾಲಾಗುತ್ತಿದೆ.

ಡಾರ್ಕ್‌ ವೆಬ್‌ ಮೂಲಕ ಅಕ್ರಮ ಹಣ ಮಾಡುತ್ತಿದ್ದ ಆರೋಪದ ಮೇಲೆ ಹಾಗೂ ಸರ್ಕಾರಿ ವೆಬ್‌ ಸೈಟ್‌ಗಳ ಜತೆಗೆ ಅಂತರಾಷ್ಟ್ರೀಯ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಶ್ರೀಕಿಯನ್ನು ಬಂಧಿಸಿದ್ದಾರೆ.

ಶ್ರೀಕಿ ವಿಚಾರಣೆಯು ತೀವ್ರವಾಗಿ ನಡೆಯುತ್ತಿದ್ದು, ಈ ವೇಳೆ ಈ ಶಾಕಿಂಗ್‌ ಹೇಳಿಕೆಯನ್ನು ನೀಡಿರುವುದು ಕೇಳಿ ಬಂದಿದೆ. ಅದರಲ್ಲಿಯೂ ಸ್ಥಳೀಐ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವುದಿಲ್ಲ ಆದರೆ ಚೀನಾ ಅಥವಾ ಬೇರೆ ಧೇಸದ ಆನ್‌ಲೈನ್‌ ಗೇಮ್‌ ಹ್ಯಾಕ್‌ ಮಾಡೋದನ್ನ ನಿಲ್ಲಿಸುವುದಿಲ್ಲ. ಈ ಕೆಲಸ ಬಿಟ್ಟು ಬೇರೆ ಯಾವುದು ಕೆಲಸಗಳು ಬರುವುದಿಲ್ಲ ಎಂದು ಹೇಳಿಕೆ ನಿಡಿದ್ದಾನೆಎಂಬುದಾಗಿ ಕೇಳಿ ಬರುತ್ತಿದೆ.

ಇನ್ನು ಕುಖ್ಯಾತ ಆರೋಪಿ ಭಗವದದ್ಗೀತೆ ಪಠಣ, ಬಳಿಕ ಧ್ಯಾನ, ಸ್ವಾ,ಮಿ ವಿವೇಕಾನಂದರ ಜೀವನ ಚರಿತ್ರೆ, ಓಶೋ ಸೇರಿದಂತೆ ಆಧ್ಯಾತ್ಮ ಚರಿತ್ರೆ ಪುಸ್ತಕಗಳನ್ನು ನಿರಂತರವಾಗಿ ಓದುತ್ತಿದ್ದಾನೆ ಎಂದು ತಿಳಿದು ಬಂದಿದೆ. ಹ್ಯಾಕಿಂಗ್‌ ಮಾಡಲು ಮನಸ್ಸಿನ ನೆಮ್ಮದಿ ಮತ್ತು ಏಕಾಗ್ರತೆ ಮುಖ್ಯವಾಗಿ ಬೇಕಾಗುತ್ತದೆ ಆದ್ದರಿಂದ ಓದುತ್ತಿರುವುದಾಗಿ ತಿಳಿದು ಬಂದಿದೆ.

Exit mobile version