ಕರುನಾಡಿಗೆ ಹಬ್ಬದ ವಾತಾವರಣ ತಂದ ‘ಡಿ ಬಾಸ್’ ಹುಟ್ಟುಹಬ್ಬ!

darshan

ಇಂದು ಕರುನಾಡಿನ ಮೂಲೆ ಮೂಲೆಯಲ್ಲೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಹೌದು, ಇದಕ್ಕೆ ಕಾರಣ ನಿಮಗೆಲ್ಲರಿಗೂ ಈಗಾಗಾಲೇ ತಿಳಿದಿರುವಂತೆ ಫೆಬ್ರವರಿ 16 1977 ರಂದು ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನ. ಸಾಮಾನ್ಯನಾಗಿ ಜನಿಸಿದ ಚಾಲೆಂಜಿಂಗ್ ಹೀರೋ, ಅಸಮಾನ್ಯವಾಗಿ ಬೆಳೆದು ಇಂದು ಕನ್ನಡಿಗರ ಮನಸಲ್ಲಿ ರಾರಾಜಿಸುವ ಡಿ ಬಾಸ್ ಅಗಿ ಕುಳಿತಿರುವ ಯಜಮಾನ ದರ್ಶನ ತೂಗುದೀಪ ಅವರ ಹುಟ್ಟು ಹಬ್ಬ. ದರ್ಶನ ಅವರ ಜನ್ಮದಿನದಂದು ಅವರ ಬಗ್ಗೆ ಕೆಲ ವಿಶೇಷ ಮಾಹಿತಿಗಳನ್ನು ತಿಳಿಯೋಣ.

ಸಾಮಾನ್ಯನಾಗಿ ಬಂದು ಅಸಮಾನ್ಯಾನಾಗಿ ಬೆಳೆದ ಕಥೆ :

ದರ್ಶನ್ ಅವರ ಮೂಲ ಹೆಸರು ಹೇಮಂತ್ ಕುಮಾರ್. ತಂದೆ ಖಳನಾಯಕ ಪಾತ್ರದಾರಿ ಶ್ರೀನಿವಾಸ್ ತೂಗುದೀಪ ಅವರು. ಸಿಂಹದಂತೆ ಇದ್ದ ಶ್ರೀನಿವಾಸ್ ತೂಗುದೀಪ ಅವರು ಇರುವವರೆಗು ದರ್ಶನ ಅವರ ಜೀವನ ತಂದೆಯ ನೆರಳಿನಲ್ಲಿ ಬಹಳ ಸೊಗಸಾಗಿ ಹಾಗು ನೆಮ್ಮದಿಯಾಗಿರುತ್ತದೆ. ಆದರೆ ದರ್ಶನ್ ಅವರ ತಮ್ಮ 17 -18 ವಯಸ್ಸಿನ ಆಸುಪಾಸಿನಲ್ಲಿದ್ದಾಗ ತಂದೆ ತೂಗುದೀಪ ಅವರು ತೀವ್ರ ಅನಾರೋಗ್ಯದಿಂದ ಮೃತಪಡುತ್ತಾರೆ. ತಂದೆಯವರ ಅನಿಶ್ಚಿತ ಸಾವು ದರ್ಶನ್ ಅವರ ಜೀವನದಲ್ಲಿ ಒಂದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿಬಿಡುತ್ತೆ. ತದನಂತರ ದರ್ಶನ್ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ ಬಿಡಿ!


ತಂದೆಯ ಚಿಕಿತ್ಸೆಗೆ ಅಂತ ಅಷ್ಟೊ-ಇಷ್ಟೊ ಇದ್ದ ಆಸ್ತಿ ಪಾಸ್ತಿಗಳನ್ನು ಮಾರಲಾಗುತ್ತದೆ. ತಂದೆಯ ಸಾವಿನ ನಂತರ ದರ್ಶನ್ ಅವರ ಜೀವನ ನಿಜವಾಗಿಯು ಚಾಲೆಂಜಿಂಗ್ ಆಗಿಯೇ ಇರುತ್ತದೆ. ಅಲ್ಲಿಂದ ದರ್ಶನ್ ಅವರು ತಮ್ಮ ಜೀವನೋಪಾಯಕ್ಕೆ ಸಿಕ್ಕ – ಸಿಕ್ಕ ಕೆಲಸಗಳನ್ನು ಮಾಡಲು ಶುರುಮಾಡುತ್ತಾರೆ. ಹಾಲು ಮಾರಟದಿಂದ ಇಡಿದು, ಲೈಟ್ ಬಾಯ್ ಕೆಲಸದವರೆಗೂ ಎಲ್ಲಾ ರೀತಿಯ ಕೆಲಸವನ್ನು ಮಾಡಲು ಶುರುಮಾಡತ್ತಾರೆ. ಅವರ ಮನಸಲ್ಲಿ ಇದ್ದದ್ದು ಒಂದೆ, ತಿನ್ನಲು ಎರಡು ಹೊತ್ತು ಊಟ, ಇರೋಕೆ ಒಂದು ಸೂರು ಹಾಗು ಅಮ್ಮ ಮಾಡಿದ ಸಾಲಕ್ಕೆ ನೆರವಾಗಬೇಕು ಅಂತ. ಇಂತಹ ಕಷ್ಟಕಾಲದಲ್ಲಿ, ಆ ಒಂದು ದಿನ ದರ್ಶನ ಅವರ ನಿರ್ಧಾರವು ಅವರನ್ನು ಸಂಪೂರ್ಣವಾಗಿ ಬದಲಾಯಿಸುತ್ತೆ.

ಒಂದು ದಿನ ದರ್ಶನ್ ಅವರು ಕನ್ನಡದ ಒಂದು ಸಿನಿಮಾದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡುವಾಗ ಊಟಕ್ಕೆ ಅಂತ ಕೂತಿದ್ದ ಸಂದರ್ಭದಲ್ಲಿ ಅವರು ಕೂತಿದ್ದ ಕುರ್ಚಿಯನ್ನು ಒದ್ದು ಬಿಡುತ್ತಾರೆ. ಇದು ದರ್ಶನ್ ಅವರಿಗೆ ಬಾರಿ ನೋವು ಮಾಡುತ್ತದೆ ಹಾಗು ತಮ್ಮ ತಂದೆ ಇದ್ದಾಗ ಯಾರೆಲ್ಲ ಗೌರವಿಸುತ್ತಿದ್ದರೊ, ಅವರೆಲ್ಲ ಇಂದು ಅವಮಾನಿಸುತ್ತಿದ್ದ ಪರಿ ಬಹಳ ನೋವುಂಟು ಮಾಡುತ್ತದೆ. ಇದರಿಂದ ನಾನು ಇಲ್ಲೆ, ಇದೇ ಜಾಗದಲ್ಲೆ ನನ್ನದೆ ಆದ ಗೌರವವನ್ನು ಸಂಪಾದಿಸಿ ಇವರಿಗೆಲ್ಲ ತೋರಿಸುತ್ತೇನೆ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇಲ್ಲಿಂದ ದರ್ಶನ್ ಜೀವನ ಹೊಸ ನಿರ್ಧಾರದೊಂದಿಗೆ ಬಹಳಷ್ಟು ಚಾಲೆಂಜ್ ಗಳ ನಂತರ ಹೊಸ ತಿರುವನ್ನ ಕಾಣುತ್ತೆ.

ಮೊದಲ ಬಾರಿಗೆ ದರ್ಶನ್ ನಾಯಕನಾಗಿ ಪಾರ್ದಪಣೆ :

ಮೊದಲಿಗೆ ಲೈಟ್ ಬಾಯ್ ಆಗಿ, ನಂತರ ಅವಕಾಶಗಳು ಸಿಕ್ಕಂತೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದ ದರ್ಶನ್ ತೂಗುದೀಪ ಅವರು, 2001ರಲ್ಲಿ ನಿರ್ದೇಶಕ ಪಿ.ಎನ್. ಸತ್ಯ ಅವರು ನಿರ್ದೇಶಿಸಿದ ಮೆಜೆಸ್ಟಿಕ್ ಚಿತ್ರದ ಮೂಲಕ ಪ್ರಥಮ ಬಾರಿಗೆ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ದರ್ಶನ್ಗೆ ದೊಡ್ಡ ಬ್ರೇಕ್ ತಂದುಕೊಡುತ್ತದೆ. ಈ ಚಿತ್ರದಲ್ಲಿ ದರ್ಶನ್, ದಾಸ ಎಂಬ ಮುಗ್ಧ ಯುವಕ, ಅಂಡರ್‌ವರ್ಲ್ಡ್ ಡಾನ್ ಆಗಿ ಬದಲಾಗುವ ಪಾತ್ರವನ್ನು ನಿರ್ವಹಿಸಿರುತ್ತಾರೆ.

ನಂತರ ಕಿಟ್ಟಿ, ನಿನಗೋಸ್ಕರ, ನೀನಂದ್ರೆ ಇಷ್ಟ, ದಾಸ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ 2003 ರಲ್ಲಿ ಪ್ರೇಮ್ ಅವರ ಚೊಚ್ಚಲ ನಿರ್ದೇಶನದ ಕರಿಯ ಸಿನಿಮಾದಲ್ಲಿ ನಟಿಸುತ್ತಾರೆ. ಇದು ದರ್ಶನ್ ಅವರಿಗೆ ಬಹು ದೊಡ್ಡ ಮಟ್ಟದಲ್ಲಿ ಅಬಿಮಾನಿಗಳನ್ನು ತನ್ನತ್ತ ಸೆಳೆಯುತ್ತದೆ. ಲಾಲಿ ಹಾಡು ಚಿತ್ರದಲ್ಲಿ ಉದಯೋನ್ಮುಖ ಸಂಗೀತಗಾರನಾಗಿ, ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಪತ್ರಕರ್ತನಾಗಿ ಮತ್ತು ನಮ್ಮ ಪ್ರೀತಿಯ ರಾಮು ಚಿತ್ರದಲ್ಲಿ ಅಂಧ ಬಡವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ದರ್ಶನ್ ತೂಗುದೀಪ್.


ಇಷ್ಟೇ ಅಲ್ಲದೆ ಮುಂದೆ ಕಲಾಸಿಪಾಳ್ಯ, ಅಣ್ಣಾವ್ರು, ಶಾಸ್ತ್ರಿ, ಅಯ್ಯ, ಸ್ವಾಮಿ, ಸುಂಟರಗಾಳಿ, ದತ್ತ, ಭೂಪತಿ, ಸ್ನೇಹನಾ ಪ್ರೀತಿನಾ, ಅನಾಥರು,ಇಂದ್ರ, ಅರ್ಜುನ್, ನವಗ್ರಹ, ಯೋಧ,ಅಭಯ್, ಪೊರ್ಕಿ, ಶೌರ್ಯ, ಬಾಸ್, ಪ್ರಿನ್ಸ್, ಸಾರಥಿ, ಚಿಂಗಾರಿ ಚಿತ್ರಗಳಲ್ಲಿ ವಿಶೇಷ ಚಾಪು ಮೂಡಿಸಿ ಕೋಟ್ಯಾಂತರ ಕನ್ನಡಿಗರ ಹೃದಯ ಗೆಲ್ಲುತ್ತಾರೆ ಹಾಗು ಐತಿಹಾಸಿಕ ಚಲನಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಸಂಗೊಳ್ಳಿ ರಾಯಣ್ಣನ ಪಾತ್ರ ನಿರ್ವಹಿಸಿತ್ತಾರೆ. ಇದಕ್ಕೆ ಮೊದಲ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗು ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಮುಂದೆ ಬುಲ್ಬುಲ್, ಬೃಂದಾವನ,ಜಗ್ಗುದಾದಾ, ಚಕ್ರವರ್ತಿ, ತಾರಕ್,ಯಜಮಾನ ಕುರುಕ್ಷೇತ್ರ, ಒಡೆಯ, ಹಾಗು 2021ರ ಕೊನೆಯ ಚಿತ್ರ ರಾಬರ್ಟ್‌ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡಾಭಿಮಾನಿಗಳ ಹೃದಯಗಳ ಗೆದ್ದು, ಅವರು ಅಂದುಕೊಂಡಂತೆಯೆ ಇಂದು ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಇವರು ಒಬ್ಬರಾಗಿ ಬೆಳೆದು ತಮ್ಮ ಸಾರ್ಥಕತೆಯನ್ನು ಮೆರೆದಿದ್ದಾರೆ. ಸಾಮಾನ್ಯನಾಗಿ ಬಂದು ಅಸಮಾನ್ಯಾನಾಗಿ ಬೆಳೆದು ನಿಂತ, ಕೋಟಿ ಕನ್ನಡಿಗರ ಮನಸ್ಸನ್ನು ಗೆದ್ದ ಡಿ.ಬಾಸ್, ಬಾಕ್ಸ್ ಆಫಿಸ್ ಸುಲ್ತಾನ, ದರ್ಶನ್ ತೂಗುದೀಪ ಅವರಿಗೆ ವಿಜಯ ಟೈಮ್ಸ್ ವತಿಯಿಂದ ಜನ್ಮದಿನದ ಹಾರ್ದಿಕ ಶುಭಾಷಯಗಳು!
ಚಿತ್ರರಂಗದಲ್ಲಿ ನಿಮ್ಮ ಮುಂದಿನ ಪ್ರಯತ್ನಗಳು ಹೀಗೆ ವಿಜೃಂಭಣೆಯಿಂದ ಸಾಗಲಿ ಎಂದು ಆಶಿಸುತ್ತೇವೆ. ನಿಮ್ಮ ಮುಂದಿನ ಚಿತ್ರ ‘ಕ್ರಾಂತಿ’ಯ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇವೆ.

Exit mobile version