ಹಸಿರು ಬಟಾಣಿಯಲ್ಲಿದೆ ಆರೋಗ್ಯದ ರಹಸ್ಯಗಳು

ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲೂ ಕೆಲವು ಪೌಷ್ಠಿಕ ಅಂಶಗಳು ಇರುತ್ತವೆ. ಹಾಗೆಯೇ ನಾವು ತಿನ್ನುವ ಹಸಿರು ಬಟಾಣಿಯಲ್ಲೂ ಹಲವಾರು ಆರೋಗ್ಯ ಗುಣಗಳಿವೆ. ಹಸಿರು ಬಟಾಣಿಯ ಸೂಪ್ ಮಾಡಿ ಕುಡಿದರೆ ದೇಹಕ್ಕೆ ಶಕ್ತಿ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಹಸಿರು ಬಟಾಣಿಯಲ್ಲಿ ಕೊಬ್ಬಿನಂಶ ಕಡಿಮೆಯಿದ್ದು ತೂಕ ಇಳಿಸುವಲ್ಲಿ ಸಹಕಾರಿಯಾಗಿದೆ .

ಇದು ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದೆ. ಇದರಲ್ಲಿನ ಕಬ್ಬಿಣಾಂಶ, ಕ್ಯಾಲ್ಸಿಯಂ ತಾಮ್ರದ ಅಂಶ ರೋಗ ನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.ಚರ್ಮದ ರಕ್ಷಣೆಯಲ್ಲೂ ಹಸಿರು ಬಟಾಣಿ ಸಹಾಯಕವಾಗಿದೆ . ದೃಷ್ಟಿ ದೋಷ ಕಡಿಮೆ ಮಾಡಲು ಸಹಾಯಕವಾಗಿದೆ, ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಮಲಬದ್ದತೆಯನ್ನು ಸರಾಗಗೊಳಿಸಲು  ಸಹಾಯಕವಾಗಿದೆ,.

ಸಂಧಿವಾತದ ರೋಗಿಗಳಿಗೆ ಇದು ಔಷಧಿಯಂತೆ ಕೆಲಸ ಮಾಡುತ್ತದೆ.   ಉರಿಯೂತ ನಿವಾರಣೆ ಯಾಗುತ್ತದೆ ರಕ್ತನಾಳಗಳನ್ನು ಬಲಪಡಿಸಿ ಹೃದಯದ ಮೇಲೆ ಬೀಳುವ  ಭಾರವನ್ನು ಕಡಿಮೆಗೊಳಿಸಿ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

100 ಗ್ರಾಂ ಬಟಾಣಿಯಲ್ಲಿ ಶೇ 16 ರಷ್ಟು ಪೋಲೆಟ್‌ಗಳು ಸಿಗುತ್ತವೆ, ಹಾಗೂ ಶರೀರದೊಳಗೆ ಡಿ ಎನ್ ಎ ಸಂಶ್ಲೇಷಣೆಗೆ ಬೇಕಾಗಿರುವ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ಸಿಗುತ್ತವೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ಕರಗುವ ನಾರಿನಂಶ ಅಡಕವಾಗಿದೆ.

Exit mobile version