ಹಮಾರೆ ಬಾರಹ್’ ಚಿತ್ರ ಬಿಡುಗಡೆಗೆ ಹೈಕೋರ್ಟ್ ಅನುಮತಿ

Mumbai : ಮುಸ್ಲಿಂ (Muslim) ಸಮುದಾಯದ ತೀವ್ರ ವಿರೋಧದಿಂದಾಗಿ ಕರ್ನಾಟಕದಲ್ಲಿ (Karnataka) ನಿಷೇಧವಾಗಿರುವ ‘ಹಮಾರೆ ಬಾರಹ್ (‘Hamare Barah’) ’ಎಂಬ ಹಿಂದಿ ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

ಅನ್ನು ಕಪೂರ್ (Kapoor acting) ನಟನೆಯ ‘ಹಮಾರೆ ಬಾರಹ್’ ಹಿಂದಿ ಚಿತ್ರದಲ್ಲಿ ಮುಸ್ಲಿಂ ಮಹಿಳೆಯರನ್ನು (Musulim Women) ಕೆಟ್ಟದಾಗಿ ಚಿತ್ರಿಸಲಾಗಿದೆ ಎಂದು ಚಿತ್ರ ಬಿಡುಗಡೆಗೆ (Release) ತಡೆಯಾಜ್ಞೆ ನೀಡಲಾಗಿತ್ತು. ಇದೀಗ ಚಿತ್ರದಲ್ಲಿರುವ ಆಕ್ಷೇಪಾರ್ಹ (Objectionable) ಹಾಗೂ ವಿವಾದಿತ ದೃಶ್ಯಗಳನ್ನು ತೆಗೆದುಹಾಕಲು ಚಿತ್ರತಂಡ ಒಪ್ಪಿದ ಬಳಿಕ ನ್ಯಾ. ಬಿಪಿ ಕೊಲಬಾವಾಲಾ (N. BP Kolabawala) ಮತ್ತು ನ್ಯಾ. ಫಿರ್ದೋಶ್ ಪೂನಿವಾಲಾ (Firdosh Pooniwala) ಅವರ ದ್ವಿಸದಸ್ಯ ಪೀಠ ಚಿತ್ರ ಬಿಡುಗಡೆಗೆ ಅನುಮತಿ ನೀಡಿದೆ. ಜೂನ್ 21ರಂದು ‘ಹಮಾರೆ ಬಾರಹ್’ ಚಿತ್ರ ಬಿಡುಗಡೆಯಾಗಲಿದೆ.

‘ಹಮಾರೆ ಬಾರಹ್ (‘Hamare Barah’) ’ ಚಿತ್ರದಲ್ಲಿ ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿದೆ ತೋರಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಶೀಘ್ರವಾಗಿ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್ಗೆ ಸುಪ್ರೀಂ (Supreme to Bombay High Court) ಸೂಚಿಸಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ರಜಾಕಾಲದ ಪೀಠವು, ಜೂನ್ 14ರಂದು ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ಇದೀಗ ವಿಚಾರಣೆ ನಡೆಸಿ ಚಿತ್ರ ಬಿಡುಗಡೆಗೆ ಹೈಕೋರ್ಟ್ ಅನುಮತಿ ನೀಡಿದೆ. ಪವಿತ್ರ ಕುರಾನ್ (Holy Quran) ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಿತ್ರವನ್ನು ನಿಷೇಧಿಸುವಂತೆ ಕೋರಿ ಈ ತಿಂಗಳ ಆರಂಭದಲ್ಲಿ ಹೈಕೋರ್ಟ್ ನಲ್ಲಿ ಅನೇಕ ಅರ್ಜಿಗಳ ಸಲ್ಲಿಕೆಯಾಗಿದ್ದವು. ಹೀಗಾಗಿಯೇ ‘ಹಮಾರೆ ಬಾರಹ್’ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ (Kannada) ನಿಷೇಧ ಹೇರಿಲಾಗಿದೆ. ರಾಜ್ಯ ಸರ್ಕಾರದ ಕ್ರಮದ ವಿರುದ್ದ ಚಿತ್ರತಂಡವು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳಿವೆ.

Exit mobile version