Bengaluru: ಪ್ರಜ್ವಲ್ ರೇವಣ್ಣ (HC issued summons to HDR) ಅವರ ಸಂಸದ ಸ್ಥಾನ ಅನರ್ಹ ಬೆನ್ನಲ್ಲೇ ಇದೀಗ ಅವರ ತಂದೆ ಹೆಚ್.ಡಿ.ರೇವಣ್ಣ ಶಾಸಕ ಸ್ಥಾನಕ್ಕೂ ಕುತ್ತು ಬಂದಿದ್ದು, ಶಾಸಕರಾಗಿ
ಹೆಚ್.ಡಿ.ರೇವಣ್ಣ (HD Revanna) ಆಯ್ಕೆ ಕೋರಿ ಅರ್ಜಿ ವಿಚಾರಣೆಗೆ ಬಂದಿದೆ. ಪ್ರಜ್ವಲ್ ರೇವಣ್ಣ ಅನರ್ಹ ಬೆನ್ನಲ್ಲೇ ಇದೀಗ ಪರಾಜಿತ ಅಭ್ಯರ್ಥಿ ಸಲ್ಲಿಸಿದ್ದ ಶಾಸಕತ್ವ ಅಸಿಂಧು ಕೋರಿ ಅರ್ಜಿ
ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (HC issued summons to HDR) ರೇವಣ್ಣ ಸೇರಿದಂತೆ ಹಲವರಿಗೆ ವಿಧಾನಸಭೆ ಕಾರ್ಯದರ್ಶಿ ಮೂಲಕ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ.

ಇದೇ ಚುನಾವಣಾ ತಕರಾರು ಅರ್ಜಿ ಸಂಬಂಧ ಶಾಸಕ ಹೆಚ್. ಡಿ.ರೇವಣ್ಣ (H D Revanna) ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಹೈಕೋರ್ಟ್
ಏಕಸದಸ್ಯ ಪೀಠದಿಂದ ನೋಟಿಸ್ ಜಾರಿ ಮಾಡಿತ್ತು.ಇದೀಗ ಸಮನ್ಸ್ ಜಾರಿಗೆ ಆದೇಶಿಸಿದ್ದು, ಚುನಾವಣೆಯಲ್ಲಿ ಅಕ್ರಮ ಜಯಗಳಿಸಿದ್ದಾರೆಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಮತದಾರರಿಗೆ
ಗ್ಯಾರಂಟಿ ಕಾರ್ಡ್ (Guarantee Card) ವಿತರಿಸಿ ಆಮಿಷ ಒಡ್ಡಿರುವ ಹಿನ್ನೆಲೆ ಶಾಸಕತ್ವ ಅಸಿಂಧು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಜ್ವರ ಭೀತಿ: ರಾಮನಗರದಲ್ಲಿ ಒಂದೇ ವಾರಕ್ಕೆ ನೂರಾರು ಜನರಿಗೆ ಜ್ವರ, ಜನರಲ್ಲಿ ಹೆಚ್ಚಿದೆ ಆತಂಕ !
ಮಾಜಿ ಸಚಿವ ಹೆಚ್ಡಿ ರೇವಣ್ಣಗೆ ಹೈಕೋರ್ಟ್ ನೋಟಿಸ್
ಚುನಾವಣಾ ತಕರಾರು ಅರ್ಜಿ ಸಂಬಂಧ ಮಾಜಿ ಸಚಿವ ಹೆಚ್. ಡಿ.ರೇವಣ್ಣ ವಿರುದ್ಧ ಪರಾಜಿತ ಬಿಜೆಪಿ (BJP) ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಹೈಕೋರ್ಟ್ ಏಕಸದಸ್ಯ
ಪೀಠದಿಂದ ನೋಟಿಸ್ (Notice) ಜಾರಿ ಮಾಡಲಾಗಿತ್ತು.
ಚುನಾವಣಾ ಅಕ್ರಮಗಳಿಂದ ಹೆಚ್.ಡಿ. ರೇವಣ್ಣ ಜಯಗಳಿಸಿದ್ದಾರೆ. ಮತ್ತು 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ (Shreyas Patel) ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ ಇವರಿಬ್ಬರ ಮತಗಳಿಕೆಯನ್ನು
ಅಸಿಂಧುಗೊಳಿಸುವಂತೆ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ (Devaraje gowda) ಮನವಿ ಮಾಡಿದ್ದರು ಆದರೆ ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ರೇವಣ್ಣ ಸೇರಿದಂತೆ ಇನ್ನು
ಕೆಲವರಿಗೆ ಸಮನ್ಸ್ ಜಾರಿಗೊಳಿಸಿದೆ.
ಭವ್ಯಶ್ರೀ ಆರ್.ಜೆ