Bengaluru : ಸರಕಾರಿ ನೌಕರ ಮೃತಪಟ್ಟಲ್ಲಿ ಆತನ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ (Hc order for govt employees) ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ,
ಮೃತ ಸರ್ಕಾರಿ ಉದ್ಯೋಗಿ ಕುಟುಂಬಕ್ಕೆ ನೀಡುವ ಅನುಕಂಪದ ಉದ್ಯೋಗವನ್ನು ಸಹೋದರಿಗೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ (High Court) ಆದೇಶಿಸಿದೆ.

ಬೆಸ್ಕಾಂನಲ್ಲಿ ಲೈನ್‌ಮ್ಯಾನ್ (Lineman) ಆಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಹೋದರಿ ತನಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿ
ಅರ್ಜಿಸಲ್ಲಿಸಿದ್ದು,ಸರಕಾರಿ ನೌಕರ ಮೃತಪಟ್ಟಲ್ಲಿ ಆತನ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಕ್ಕೆ ಅವಕಾಶ ಇಲ್ಲ ಆದರೆ ನೌಕರ ಅನಾರೋಗ್ಯದಿಂದ ಸೇವಾವಧಿಯಲ್ಲಿ ಮೃತಪಟ್ಟಲ್ಲಿ
ಅವರನ್ನು ಅಲಂಬಿಸಿರುವ ವಿಧವಾ ಪತ್ನಿ,ಅಥವಾ ಮಗ,ಮಗಳು ಅನುಕಂಪದ (Hc order for govt employees) ನೌಕರಿ ಪಡೆಯಬಹುದು ಎಂದ ಕೋರ್ಟ್.
ಬೆಸ್ಕಾಂನಲ್ಲಿ ಲೈನ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿವಾಹಿತ ಸಹೋದರ ಮೃತಪಟ್ಟ ಹಿನ್ನೆಲೆಯಲ್ಲಿ ತನಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿ ತುಮಕೂರು ಜಿಲ್ಲೆ ಗೆದ್ಲಹಳ್ಳಿಯ
ಜಿ.ಎಂ.ಪಲ್ಲವಿ ಅವರು ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ (Krishna.S.Dixit) ಅವರಿಂದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಮೇಲ್ಮನವಿ ವಜಾಗೊಳಿಸಿದ ನ್ಯಾಯಪೀಠ,”ಮೃತ ನೌಕರ (ಸಹೋದರ) ಸಾವನ್ನಪ್ಪಿದ ವೇಳೆ ಅವರ ಆದಾಯದ ಮೇಲೆ ತಾನು ಅವಲಂಬಿಸಿದ್ದೆಂಬುದನ್ನು ದೃಢಪಡಿಸುವ ಸಾಕ್ಷಿಯನ್ನು ಮೇಲ್ಮನವಿದಾರರು ಸಲ್ಲಿಸಿಲ್ಲ.
ಹಾಗೆಯೇ ಅನುಕಂಪದ ಉದ್ಯೋಗವನ್ನು ಪಡೆಯಲು ಸಮರ್ಥಿಸಿಕೊಳ್ಳುವುದಕ್ಕಾಗಿ ಮೃತ ನೌಕರನ ಕುಟುಂಬವು ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದೆ ಎಂಬುದನ್ನು ದೃಢಪಡಿಸಲು ದಾಖಲೆಗಳಿಲ್ಲ. ಆದ್ದರಿಂದ ಏಕ
ಸದಸ್ಯಪೀಠದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ,” ಎಂದು ತಿಳಿಸಿದೆ.
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
ಅನುಕಂಪದ ಆಧಾರದ ಮೇಲೆ ನೇಮಕಾತಿಯು ಸಂವಿಧಾನದ 14 ಮತ್ತು 16 ನೇ ವಿಧಿಗಳಲ್ಲಿ ಜಾರಿಗೆ ತಂದಿರುವ ಸಾರ್ವಜನಿಕ ಉದ್ಯೋಗದಲ್ಲಿ ಸಮಾನತೆಯ ಸಾಮಾನ್ಯ ನಿಯಮಕ್ಕೆ ಒಂದು ಅಪವಾದವಾಗಿದೆ.
ಹಾಗಾಗಿ ಅನುಕಂಪದ ಉದ್ಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಮನವಿ ಪರಿಗಣಿಸಲು ಸಾಧ್ಯವಿಲ್ಲ
ನ್ಯಾಯಾಲಯಗಳು ವ್ಯಾಖ್ಯಾನದ ಪ್ರಕ್ರಿಯೆಯ ಮೂಲಕ ಶಾಸನಬದ್ಧ ವ್ಯಾಖ್ಯಾನದ ಬಾಹ್ಯರೇಖೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ. ನೌಕರರ ಕುಟುಂಬ ಸದಸ್ಯ ವ್ಯಕ್ತಿ ಎಂಬುದಕ್ಕೆ ಕಾನೂನು ರೂಪಕರು ಹಲವು
ಪದಗಳನ್ನು ನಿರ್ದಿಷ್ಟ ಪಡಿಸಿರುವ ವೇಳೆ ಕುಟುಂಬದ ವ್ಯಾಖ್ಯಾನಕ್ಕೆ ನ್ಯಾಯಾಲಯ ಒಂದು ಪದವನ್ನು ಸೇರಿಸಲು ಮತ್ತು ರದ್ದುಪಡಿಸಲು ಸಾಧ್ಯವಿಲ್ಲ. ಹಾಗಾಗಿ ಮೇಲ್ಮನವಿದಾರರ ಮನವಿ ಪರಿಗಣಿಸಲು
ಸಾಧ್ಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಯಾರೆಲ್ಲಾ ಅನುಕಂಪದ ಹುದ್ದೆಗೆ ಅರ್ಹರು?
”ಕರ್ನಾಟಕ ನಾಗರೀಕ ಸೇವೆಗಳ ಅನುಕಂಪದ ಆಧಾರದ ನೇಮಕಾತಿ ನಿಯಮಗಳು 1996ರ 2(1)(ಬಿ) ಪ್ರಕಾರ ಒಂದು ವೇಳೆ ವಿವಾಹಿತ ಪುರುಷ ಸರಕಾರಿ ನೌಕರ ಅನಾರೋಗ್ಯದಿಂದ ಸೇವಾವಧಿಯಲ್ಲಿ
ಮೃತಪಟ್ಟಲ್ಲಿ ಅವರನ್ನು ಅಲಂಬಿಸಿರುವ ವಿಧವಾ ಪತ್ನಿ, ಮಗ ಅಥವಾ ಮಗಳು (ಅವಿವಾಹಿತೆ, ವಿವಾಹಿತೆ, ವಿಚ್ಛೇದಿತೆ ಹಾಗೂ ವಿಧವೆ) ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಬಹುದಾಗಿದೆ
ಎಂಬುದನ್ನು ಸ್ಪಷ್ಟಪಡಿಸಿದೆ ಅಲ್ಲದೆ ಅದರಂತೆ ಈ ವ್ಯಾಖ್ಯಾನದಲ್ಲಿ ಸಹೋದರಿಯನ್ನು ಸೇರಿಸಿಲ್ಲ,”ಎಂದು ತಿಳಿಸಿದ ವಿಭಾಗೀಯ ಪೀಠ, ಏಕ ಸದಸ್ಯ ಪೀಠವು 2023ರ ಮಾ.30ರಂದು ಹೊರಡಿಸಿದ್ದ
ಆದೇಶವನ್ನು ಪುರಸ್ಕರಿಸಿದೆ.
ಇದನ್ನು ಓದಿ: ಚೈತ್ರಾ ಆತ್ಮಹತ್ಯೆ ಯತ್ನ: ಹಿಂದೂಪರ ಹೋರಾಟಗಾರ್ತಿ ಚೈತ್ರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು
- ಮೇಘಾ ಮನೋಹರ ಕಂಪು