ಬಿಜೆಪಿ ತೊರೆದು ʻಕೈʼ ಸೇರಿದ ಹೆಚ್.ಡಿ ತಮ್ಮಯ್ಯ! ಪಕ್ಷಕ್ಕೆ ಸ್ವಾಗತಿಸಿದ ಡಿಕೆಶಿ

Bengaluru : ಕರ್ನಾಟಕದ ಲಿಂಗಾಯತ ನಾಯಕ ಹೆಚ್‌.ಡಿ ತಮ್ಮಯ್ಯ (HD Thammaiah joined congress) ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಹೆಚ್.ಡಿ ತಮ್ಮಯ್ಯ (H.D.Thammaiah)ಅವರ ಈ ನಡೆ ಇದೀಗ ರಾಜಕೀಯದಲ್ಲಿ ಹೊಸದೊಂದು ಗೊಂದಲವನ್ನು ಸೃಷ್ಟಿಸಿದೆ!

ಚಿಕ್ಕಮಗಳೂರಿನ ಲಿಂಗಾಯತ ಮುಖಂಡರಾದ ಹೆಚ್.ಡಿ ತಮ್ಮಯ್ಯ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಅವರ ಆಪ್ತರು ಎಂಬುದು ಇಲ್ಲಿ ಗಮನಾರ್ಹ ಸಂಗತಿ!

ಸದ್ಯ ಇಷ್ಟು ಆಪ್ತತೆಯಲ್ಲಿದ್ದ ತಮ್ಮಯ್ಯ ಅವರು ಬಿಜೆಪಿ ತೊರೆದು ʻಕೈʼ ಪಡೆ ಸೇರಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಹೆಚ್‌.ಡಿ ತಮ್ಮಯ್ಯ(H.D.Thammaiah) ಅವರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ಸಲ್ಲಿಸಿ ಭಾನುವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಇನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರುವ ಮುನ್ನ ಮಾತನಾಡಿದ ತಮ್ಮಯ್ಯ ಅವರು, ಆಡಳಿತಾರೂಢ ಬಿಜೆಪಿಯಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ನನಗೆ ನಿರಾಸೆ ತಂದಿತು ಮತ್ತು ಪಕ್ಷದಿಂದ ಹೊರಬರಲು ನಿರ್ಧರಿಸಿದೆ.

ನಾನು 2007 ರಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ವಿವಿಧ ಹುದ್ದೆಗಳಲ್ಲಿ ನನ್ನ ಜವಾಬ್ದಾರಿಯನ್ನು (HD Thammaiah joined congress) ಪೂರೈಸಿದ್ದೇನೆ.

ಇದನ್ನೂ ಓದಿ: ಎಸ್‌.ಎಸ್ ರಾಜಮೌಳಿ : ಧರ್ಮವು ಮೂಲಭೂತವಾಗಿ ಒಂದು ರೀತಿಯ ಶೋಷಣೆಯಾಗಿದೆ ; ರಾಜಮೌಳಿ ಹೇಳಿಕೆಯನ್ನು ಬೆಂಬಲಿಸಿದ ನಟಿ ಕಂಗನಾ!

ಆದರೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ನನಗೆ ನಿರಾಸೆಯನ್ನು ಉಂಟುಮಾಡಿದೆ. ಇದರ ಪರಿಣಾಮವಾಗಿ ನಾನು ನನ್ನ ಜಿಲ್ಲಾ ಘಟಕದ ಸಂಚಾಲಕ ಸ್ಥಾನ ಮತ್ತು ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.

17 ವರ್ಷಗಳ ಕಾಲ ನನ್ನ ಕೆಲಸದಲ್ಲಿ ನನಗೆ ಸಹಾಯ ಮಾಡಿದ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು, ಮುಖ್ಯಸ್ಥರು ಮತ್ತು ಬಿಜೆಪಿಯ ಎಲ್ಲಾ ಮಂಡಳಿಗಳು, ವೇದಿಕೆಗಳು ಮತ್ತು ಘಟಕಗಳ ಸದಸ್ಯರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(kpcc) ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K.Shivakumar) ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಆಡಳಿತಾರೂಢ ಬಿಜೆಪಿಯ ಹಲವು ನಾಯಕರು

ತಮ್ಮ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ನಾಯಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ಡಿ.ಕೆ ಶಿವಕುಮಾರ್‌ ಈ ಹಿಂದೆಯೇ ಹೇಳಿದ್ದರು! ಸುದ್ದಿ ಸಂಸ್ಥೆ ಎಎನ್‌ಐ (ANI) ಜೊತೆ ಮಾತನಾಡಿದ ಡಿ.ಕೆ

ಶಿವಕುಮಾರ್ (D.K.Shivakumar), ಬಿಜೆಪಿಯ ಹಲವು ನಾಯಕರು ಸ್ವಯಂಪ್ರೇರಣೆಯಿಂದ ನನ್ನನ್ನು ಭೇಟಿ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಬದಲಾವಣೆ ಬಯಸಿದ್ದರು. ಸುಮಾರು 13 ಸದಸ್ಯರು ಟಿಕೆಟ್‌ಗಾಗಿ ಅರ್ಜಿ

ಸಲ್ಲಿಸಿದ್ದರು. ನಾವು ಎಲ್ಲಾ ನಾಯಕರನ್ನು ಒಪ್ಪಿಕೊಳ್ಳುತ್ತಿದ್ದೇವೆ. ಇದು ಈಗ ಟ್ರೆಂಡ್ ಆಗಿದೆ, ಅವರು ದೊಡ್ಡ ನಾಯಕರನ್ನು ನೋಡುತ್ತಾರೆ, ನಾವು ಬೂತ್ ಮಟ್ಟದಲ್ಲಿ ಕೆಲಸ ಮಾಡುವ ನಾಯಕರನ್ನು ನೋಡುತ್ತೇವೆ ಎಂದು ಹೇಳಿದ್ದಾರೆ.
Exit mobile version