Bengaluru: ಕೇರಳದಲ್ಲಿ (HDK Against Congress Govt) ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಕರ್ನಾಟಕ ಸರ್ಕಾರ 15 ಲಕ್ಷ ರೂಪಾಯಿ ಪರಿಹಾರ ನೀಡುವ ವಿಚಾರ ಭಾರೀ
ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಕಾಂಗ್ರೆಸ್ (HDK Against Congress Govt) ಸರ್ಕಾರ ಈ ನಿರ್ಧಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತೀವ್ರ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಅವರು, ಕೇರಳದ ಮೃತ ವ್ಯಕ್ತಿಗೆ 15 ಲಕ್ಷ ರೂಪಾಯಿ
ಪರಿಹಾರ ಕೊಟ್ಟಿದ್ದಾರೆ. ಅದೇ ಇಲ್ಲಿ ಏನಾದರೂ ಆನೆ ತುಳಿದು ವ್ಯಕ್ತಿ ಮೃತಪಟ್ಟರೆ ಕೇವಲ 5 ಲಕ್ಷ ಕೊಡ್ತೀರಿ. ಅದಕ್ಕೂ ಕಚೇರಿಗೆ ಅಲೆಯಬೇಕು ಎಂದು ಕಿಡಿಕಾರಿದ್ದಾರೆ.
ಇನ್ನೊಂದೆಡೆ ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ (BJP), ರಾಜ್ಯದಲ್ಲಿ ಕಾಂಗ್ರಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು ಕನ್ನಡಿಗರೇ ಆದರೂ, ಆಡಳಿತ ನಡೆಸುತ್ತಿರುವವರು
ಮಾತ್ರ ಕೇರಳದ ಕಾಂಗ್ರೆಸ್ಸಿಗರು, ನಕಲಿ ಗಾಂಧಿಗಳು. ಮಾಜಿ ಅನರ್ಹ ಸಂಸದ ರಾಹುಲ್ ಗಾಂಧಿ ಸಾಹೇಬರನ್ನು ಮೆಚ್ಚಿಸಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಈಗ ಕನ್ನಡಿಗರ ತೆರಿಗೆ
ಹಣವನ್ನು ಕೇರಳದ ವಯನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಕೊಡಲು ಮಜಾವಾದಿ ಸಿದ್ದರಾಮಯ್ಯ (Siddaramaiah) ಖರ್ಚು ಮಾಡುತ್ತಿದ್ದಾರೆ.
ಕೇರಳ ಸರ್ಕಾರ ನಂದಿನಿ ಹಾಲು ಮಾರಾಟಕ್ಕೆ ಅವಕಾಶ ಕೊಟ್ಟಿಲ್ಲ, ಕೆಎಸ್ಆರ್ಟಿಸಿ (KSRTC) ಹೆಸರನ್ನೂ ಕಿತ್ತುಕೊಳ್ಳಲು ಪ್ರಯತ್ನಿಸಿತ್ತು. ಹೀಗಿದ್ದರೂ ಕನ್ನಡಿಗರ ತೆರಿಗೆ ಹಣ
ಕೇರಳಕ್ಕೆ ಕೊಡಲು ಹೊರಟಿದೆ ಈ ನಾಡ ವಿರೋಧಿ ಕಾಂಗ್ರೆಸ್ ಸರ್ಕಾರ. ರಾಹುಲ್ ಗಾಂಧಿಯವರ ಕ್ಷೇತ್ರ ವಯನಾಡಿನ ಮೇಲೆ ಕರ್ನಾಟಕ ಸರ್ಕಾರಕ್ಕೆ ಅಷ್ಟೊಂದು ಕಾಳಜಿ ಇದ್ದರೆ,
ಕೆಪಿಸಿಸಿ (KPCC) ಕಚೇರಿಯಿಂದ ಬೌನ್ಸ್ ಆಗದ ಚೆಕ್ ಕೊಡಬಹುದಿತ್ತು. ಇಲ್ಲ ಡಿ. ಕೆ. ಶಿವಕುಮಾರ್ ಅವರ ಅಕ್ರಮ ಹಣವನ್ನಾದರೂ ಕೊಡಬಹುದಿತ್ತು.
ವರ್ಗಾವಣೆ ದಂಧೆಯ ಕಮಾಯಿಯಲ್ಲಿ ಸ್ವತಃ ಸಿದ್ದರಾಮಯ್ಯನವರೇ ದಾನ ಮಾಡಬಹುದಿತ್ತು. ಕರ್ನಾಟಕದಲ್ಲಿ (Karnataka) ಬರಗಾಲ ಬಂದು ನೂರಾರು ರೈತರು ಆತ್ಮಹತ್ಯೆ
ಮಾಡಿಕೊಂಡರೂ ನಯಾ ಪೈಸೆ ಹಣವನ್ನು ಸಹ ಕೊಡಲು ಯೋಗ್ಯತೆ ಇಲ್ಲದ ಈ ನಾಚಿಕೆಗೇಡಿ ಸರ್ಕಾರ ಈಗ ರಾಹುಲ್ ಗಾಂಧಿ (Rahul Gandhi) ಅವರನ್ನು ಖುಷಿ ಪಡಿಸಲು
ಕರ್ನಾಟಕದ ತೆರಿಗೆದಾರರ ಹಣ ಲೂಟಿ ಹೊಡೆಯುತ್ತಿದೆ ಎಂದು ಟೀಕಿಸಿದೆ.
ಇದನ್ನು ಓದಿ: ನಾಲ್ಕನೇ ಮಾತುಕತೆಯೂ ವಿಫಲ: ಪ್ರತಿಭಟನೆ ಮುಂದುವರೆಸಿದ ರೈತರು