ಎರಡು ತಿಂಗಳಲ್ಲಿ ವರ್ಗಾವಣೆ ಅಡಿ 500 ಕೋಟಿ ರೂ.ಲಂಚ, ಕೃಷಿ ಇಲಾಖೆಯಲ್ಲೇ 130 ಕೋಟಿ, ಎಚ್.ಡಿ.ಕೆ ಬಾಂಬ್

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು (HDK allegation on congress govt) ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕಳೆದೆರಡು ತಿಂಗಳಲ್ಲಿ

ಅಂದಾಜು 500 ಕೋಟಿ ರೂ.ಗಳಷ್ಟು ವರ್ಗಾವಣೆ ಭ್ರಷ್ಟಾಚಾರ (Corruption) ನಡೆದಿದೆ ಎಂದು ಆರೋಪಿಸಿದ್ದಾರೆ. ಸೋಮವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕಾರಿಯೊಬ್ಬರು

ವರ್ಗಾವಣೆ ದಂಧೆಯಲ್ಲಿ ಆಗಿರುವ ವ್ಯವಹಾರದ ಮೊತ್ತದ ಬಗ್ಗೆ ಮಾಹಿತಿ ನೀಡಿದ್ದಾರೆ (HDK allegation on congress govt) ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ, ಕಳೆದ ಎರಡು ತಿಂಗಳಲ್ಲಿ ಸರ್ಕಾರದ ನಾನಾ ಇಲಾಖೆಗಳಲ್ಲಿ ಅಂದಾಜು 500 ಕೋಟಿ ರೂ. ವರ್ಗಾವಣೆ ದಂಧೆ ನಡೆದಿದೆ ಎಂದು ಮಾಜಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ (Bengaluru) ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಹೊಸ ಸರ್ಕಾರದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ನಾನು ಒಬ್ಬ ಅಧಿಕಾರಿಯನ್ನು ಮಾತನಾಡಿಸಿದೆ. ಅವರು ಕಳೆದೆರಡು ತಿಂಗಳಲ್ಲಿ ಏನಿಲ್ಲವೆಂದರೂ 500 ಕೋಟಿ ರೂ.ಗಳಷ್ಟು ವರ್ಗಾವಣೆ

ಅವ್ಯವಹಾರ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಇಂಥ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದರೆ ಜನಜೀವನವನ್ನು ಬೀದಿಗೆ ತರಬೇಕು ಎಂದು ಈ ಸರ್ಕಾರದವರು ತಿಳಿದಿದ್ದಾರಾ

ಎಂದು ಕುಮಾರಸ್ವಾಮಿ ಕಿಡಿಕಾರಿದರು.

ರಾಜಕೀಯ ನಿವೃತ್ತಿ:
ನಾನು ಏನಾದರೂ ಆರೋಪ ಮಾಡಿದರೆ ಸಾಕ್ಷಿ ಕೊಡಿ ಅಂತ ಸರ್ಕಾರದವರು ಕೇಳ್ತಾರೆ. ನಾನು ಆ ಅಧಿಕಾರಿಯು ಹೇಳಿದ ಮಾತನ್ನು ಹೇಳುತ್ತಿದ್ದೇನೆ. ಪಾಪ.. ಅವರಾದರೂ ಪ್ರತಿಯೊಂದಕ್ಕೆ

ಹೇಗೆ ಸಾಕ್ಷಿ ಇಡಲು ಸಾಧ್ಯ ಎಂದು ಕೇಳಿದರು . ಎಚ್.ಡಿ.ಕೆ ನನ್ನ ಸರ್ಕಾರದ ಅವಧಿಯಲ್ಲಿ ಇಂಥ ಹಗರಣಗಳು ನಡೆದಿಲ್ಲ. ಹಾಗೇನಾದರೂ ನಡೆದಿರುವುದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ

ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.

ಕೃಷಿ ಇಲಾಖೆಯ ಮೇಲೆ ಆರೋಪ:
ಕಳೆದೆರಡು ತಿಂಗಳಲ್ಲಿ ರಾಜ್ಯ ಸರ್ಕಾರದಲ್ಲಿ ಕೃಷಿ ಇಲಾಖೆ ಏನು ಸಾಧನೆ ಮಾಡಿದೆ ಹೇಳಲಿ ಎಂದು ಸವಾಲು ಹಾಕಿದ ಅವರು, ಕೃಷಿ ಇಲಾಖೆಯಲ್ಲಿ (Department of Agriculture) ಕೇವಲ ವರ್ಗಾವಣೆ

ದಂಧೆಯೇ ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆಗಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಕೀಳಲಾಗುತ್ತಿದೆ. ಇದೇ ಕೃಷಿ ಇಲಾಖೆಯ ಸಾಧನೆ ಎಂದು ಅವರು ಆರೋಪಿಸಿದ್ದಾರೆ. ತಾವು ಇತ್ತೀಚೆಗೆ

ಬಿಡುಗಡೆ ಮಾಡಿದ್ದ ಕೃಷಿ ಇಲಾಖೆಯ ವರ್ಗಾವಣೆ ದರ ಪಟ್ಟಿಯು 130 ಕೋಟಿ ರೂ.ಗಳದ್ದು ಎಂದು ತಿಳಿಸಿದ್ದಾರೆ.

ನಾನು ಅವರ ಗುಲಾಮನಲ್ಲ:
ಇದೇ ವೇಳೆ, ತಮ್ಮ ಜೆಡಿಎಸ್ ಪಕ್ಷ ಹಾಗೂ ಬಿಜೆಪಿ ಮೈತ್ರಿಯ ಬಗ್ಗೆ ಯಾಕಷ್ಟು ಚರ್ಚೆಗಳಾಗುತ್ತಿವೆ ಎಂಬುದು ಗೊತ್ತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಬಿಜೆಪಿಯೊಂದಿಗೆ ತಮ್ಮ ಪಕ್ಷವನ್ನು ಮೈತ್ರಿ

ಮಾಡಿಕೊಳ್ಳಿ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಕುಮಾರಸ್ವಾಮಿ, ನನ್ನ ಪಕ್ಷದ ಬಗ್ಗೆ ನಾನು ನಿರ್ಧಾರ ಕೈಗೊಳ್ಳುತ್ತೇನೆ. ಬೇರೆಯವರ ಸಲಹೆ ನನಗೆ

ಬೇಕಾಗಿಲ್ಲ. ಅವರ ಸಲಹೆಗಳನ್ನು ಕೇಳಲು ನಾನೇನೂ ಅವರ ಗುಲಾಮನಲ್ಲ ಎಂದು ಹರಿಹಾಯ್ದರು.

ಇದನ್ನು ಓದಿ: ಗುಚ್ಚಿ ಮಶ್ರೂಮ್ ತಿಂದವನೇ ಬಲ್ಲ ಇದರ ರುಚಿ: ಇದರ ಬೆಲೆ ಚಿನ್ನವನ್ನೇ ಮೀರಿಸುತ್ತೆ ಗೊತ್ತಾ?

‘ನಿತೀಶ್ ಕುಮಾರ್ (Nitish Kumar) ಅವಕಾಶವಾದಿಯಲ್ಲವೇ?’
ತಮ್ಮನ್ನು ಅವಕಾಶವಾದಿ ಎಂದು ಜರಿದಿರುವ ಕಾಂಗ್ರೆಸ್ ಸಚಿವರಾದ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಮತ್ತಿತರರ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಮಹಾಘಟಬಂಧನದ ಹೆಸರಿನಲ್ಲಿ ಇವರು

(ಕಾಂಗ್ರೆಸ್) ಬಿಹಾರದ ಸಿಎಂ ನಿತೀಶ್ ಕುಮಾರ್ ಜೊತೆಗೆ ಕೈ ಜೋಡಿಸಲು ಮುಂದಾಗಿದ್ದಾರಲ್ಲವೇ, ಆ ನಿತೀಶ್ ಕುಮಾರ್ ಹಿಂದೆ ಅಧಿಕಾರಕ್ಕಾಗಿ ಆರ್ ಜೆಡಿ (RJD) ಹಾಗೂ ಬಿಜೆಪಿ (BJP) ಜೊತೆಗೆ ಪದೇ ಪದೇ

ಮೈತ್ರಿಗಳನ್ನು ಮಾಡಿಕೊಂಡಿದ್ದವರು. ಅಂಥವರ ಜೊತೆಗೆ ಕೈ ಜೋಡಿಸುವ ನೀವು ನನ್ನನ್ನೇಕೆ ಅಕವಾಶವಾದಿಯೆಂದು ಕರೆಯುತ್ತೀರಿ ಎಂದು ಕಿಡಿಕಾರಿದರು. ಈ ಹಿಂದಿನ ಘಟಬಂಧನಗಳಲ್ಲಿ ಏನನ್ನೂ

ಸಾಧಿಸಿಲ್ಲ ಈಗೇನು ಸಾಧಿಸುವಿರಿ ಎಂದು ಟೀಕೆ ಮಾಡಿದರು.

Exit mobile version