ವಿವಾದ ಬಳಿಕ ಪುಟಿದೆದ್ದ ಹೆಡ್ ಬುಷ್ ; ‘ವಿ ಸ್ಟ್ಯಾಂಡ್ ವಿತ್ ಧನಂಜಯ’ ಎಂದ ಅಭಿಮಾನಿಗಳು

Bengaluru : ಇತ್ತೀಚೆಗಷ್ಟೇ ಬಿಡುಗಡೆಯಾದ ಕನ್ನಡ ಚಿತ್ರ ಕಾಂತಾರ(Kantara) ಕುರಿತು ಕೆಲ ವಿವಾದಗಳ ಬೆನ್ನಲ್ಲೇ ಡಾಲಿ ಧನಂಜಯ(Dolly Dhananjaya) ಅಭಿನಯಿಸಿದ ಹೆಡ್ ಬುಷ್(Head Bush Trends) ಚಿತ್ರ ಭಾರಿ ವಿವಾದಕ್ಕೆ ಸಿಲುಕಿಕೊಂಡಿತು.

ಈ ಸಿನಿಮಾದಲ್ಲಿ ಜಾನಪದ ಕಲೆಗೆ ಅವಮಾನ ಮಾಡಿದ್ದಾರೆ. ವೀರಘಾಸೆ ಮತ್ತು ಬೆಂಗಳೂರಿನಲ್ಲಿ ನಡೆಯುವ ಕರಗ ಉತ್ಸವದಂತ ಕಲೆಗೆ ಹಾಗೂ ಕಲಾವಿದರಿಗೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಘಟುವಾಗಿ ಆರೋಪಿಸಿದ್ದರು.

ಹೆಡ್ ಬುಷ್(Head Bush Trends) ಚಿತ್ರದಲ್ಲಿ ಕರಗ ಉತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಅರ್ಚಕ ಶಿವಶಂಕರ ಕುರಿತು ಅವಹೇಳನಕಾರಿ ಸಂಭಾಷಣೆಗಳಿವೆ ಎಂದು ಕರ್ನಾಟಕ ರಾಜಧಾನಿ ಕರಗ ಉತ್ಸವ ಸಮಿತಿಯ ಸದಸ್ಯರು ಆರೋಪಿಸಿದ್ದಾರೆ.

ಸಿನಿಮಾದ ಕೆಲವು ದೃಶ್ಯಗಳನ್ನು ಮರು ಚಿತ್ರೀಕರಣ ಮಾಡುವಂತೆ ಒತ್ತಾಯಿಸಿರುವ ಕಲಾವಿದರು,

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸುವುದಾಗಿ ಹೇಳಿದ್ದರು. ಅದರಂತೇ ಸಿನಿಮಾ ತಂಡ ಹಾಗೂ ಧನಂಜಯ ಕೂಡ ಒಪ್ಪಿಕೊಂಡರು.

ಈ ಕುರಿತು ಬೇಸರ ವ್ಯಕ್ತಪಡಿಸಿದ ಡಾಲಿ ಧನಂಜಯ ಅವರ ಪರ ನೆಟಿಜನ್‌ಗಳು(Netizens) ನಿಂತರು.

https://fb.watch/gricY6bzEH/ ಇದು ಗಂಧದ ಗುಡಿ ಅಲ್ಲ ದೇವರ ಗುಡಿ

ಆದ್ರೆ, ಇನ್ನು ಕೆಲವರು ಟ್ವಿಟ್ಟರ್‌ನಲ್ಲಿ(Twitter) ಚಲನಚಿತ್ರವನ್ನು ಬಹಿಷ್ಕರಿಸುವಂತ ಆಗ್ರಹಿಸಿ, ಟ್ವೀಟ್ ಮಾಡಲು ಆರಂಭಿಸಿದರು. ವಿವಾದಕ್ಕೆ ಸಿಲುಕಿದ ಡಾಲಿ ಧನಂಜಯ ಅವರ ಚಿತ್ರ ಹೆಡ್ ಬುಷ್ ಚಿತ್ರಕ್ಕೆ ಪರ-ವಿರೋಧ ವ್ಯಾಪಕವಾಗಿ ವ್ಯಕ್ತವಾಗುತ್ತಿತ್ತು.

ಇನ್ನು ವಿವಾದದ(Controversy) ಬಗ್ಗೆ ಮಾತನಾಡಿದ ನಾಯಕ ನಟ ಧನಂಜಯ, ಸಿನಿಮಾ ಸರಿಯಾಗಿ ನೋಡಿದರೇ ಅರ್ಥವಾಗುತ್ತದೆ.

ನಾವು ಯಾವ ಕಲೆಗೂ ಅವಮಾನಿಸಬೇಕು ಎಂಬ ಉದ್ದೇಶದಿಂದ ಮಾಡಿಲ್ಲ. ಅಲ್ಲಿ ಆ ರೀತಿ ನಡೆದಿಲ್ಲ.

ತಪ್ಪಾಗಿ ಗ್ರಹಿಸಿ ವಿವಾದ ಉಂಟು ಮಾಡಿದರೇ ನಾವು ಮುಂದೆ ಇಂಥ ಸಿನಿಮಾ ಮಾಡುವುದೇ ಬೇಡ ಎನ್ನಿಸುವಷ್ಟು ಬೇಸರವಾಗುತ್ತದೆ.

ದಯಮಾಡಿ ಒಂದು ಸಿನಿಮಾವನ್ನು ಕೂಲಂಕುಷವಾಗಿ ನೋಡಿ, ಅರ್ಥೈಸಿಕೊಳ್ಳಿ ಎಂದು ಹೇಳಿದರು.

ನಟ ಧನಂಜಯ ಅವರ ಪರ ನಿಂತ ನೆಟ್ಟಿಗರು ಹಾಗೂ ಅಭಿಮಾನಿಗಳು ಟ್ವಿಟರ್ ನಲ್ಲಿ ಹ್ಯಾಷ್ ಟ್ಯಾಗ್ #HeadBush ಎಂದು ಪೋಸ್ಟ್ ಮಾಡುವ ಮೂಲಕ ಟ್ರೆಂಡ್ ಮಾಡಿದರು.

ಇದರೊಟ್ಟಿಗೆ ಅಭಿಮಾನಿಗಳು #WeStandWithDhananjaya ಎಂಬ ಟ್ರೆಂಡ್ ಅನ್ನು ಪ್ರಾರಂಭಿಸಿ, ಧನಂಜಯ ಅವರಿಗೆ ವ್ಯಾಪಕ ಬೆಂಬಲ ಸೂಚಿಸಿದರು.

ಇದನ್ನೂ ಓದಿ : https://vijayatimes.com/laws-of-saudi-arabia/

ಸದ್ಯ ರಿಷಬ್ ಶೆಟ್ಟಿ(Rishab Shetty) ಅಭಿನಯದ ಕಾಂತಾರ ತನ್ನ ಆರ್ಭಟವನ್ನು ಎಂದಿನಂತೆ ಮುಂದುವರೆಸಿದರೇ, ಇತ್ತ ಧನಂಜಯ ಅವರ ಹೆಡ್ ಬುಷ್ ಚಿತ್ರವೂ ವಿವಾದದ ಬಳಿಕ ಮುನ್ನುಗ್ಗುತ್ತಿದ.

Exit mobile version