ಅಗಸೆ ಬೀಜದ ಸೇವನೆಯಿಂದ ಮಹಿಳೆಯರಿಗೆ ಎಷ್ಟು ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ!

flax

ಅಗಸೆ ಬೀಜಗಳ ಉಪಯೋಗದ ಬಗ್ಗೆ ಯಾರಿಗೂ ತಿಳಿದಿರದ ಮಾಹಿತಿ ಇಲ್ಲಿದೆ. ಭಾರತದ ಮನೆಗಳಲ್ಲಿ ಬಹುತೇಕವಾಗಿ ಅಗಸೆ ಬೀಜವನ್ನು ಬಳಸಲಾಗುತ್ತದೆ. ಕಾರಣ ಅಗಸೆ ಬೀಜವು ಅನೇಕ ಪೋಷಕಾಂಶಗಳಿಂದ ತುಂಬಿದೆ. ಅಲ್ಲದೆ ಅಗಸೆ ಬೀಜವು ಮಹಿಳೆಯರ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಉತ್ತಮ ಆರೋಗ್ಯ ವೃದ್ಧಿಸಲು ಬಹಳ ಸಹಕಾರಿಯಾಗಿದೆ. ಇದರ ಉಪಯೋಗಗಳೇನು ಎಂಬ ಮಾಹಿತಿ ತಿಳಿಸಲಾಗಿದೆ ಮುಂದೆ ಓದಿ. ಅಗಸೆ ಬೀಜವು ತಲೆ ಹೊಟ್ಟು ನಿವಾರಿಸುವಲ್ಲಿ ಹಾಗೂ ತಲೆಯ ಕೂದಲ ಬೆಳವಣಿಗೆಗೆ ಉಪಯುಕ್ತವಾಗಿದೆ.

ಮುಟ್ಟಿನ ಸಮಸ್ಯೆಗೆ ಇದು ರಾಮಬಾಣ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮುಟ್ಟಿನ ಸಮಸ್ಯೆಗಳನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಅಗಸೆ ಬೀಜವು ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಹಾರ್ಮೋನ್ ಸಮತೋಲನಕ್ಕೆ ಅಗಸೆ ಬೀಜವು ಹೆಚ್ಚು ಉಪಕಾರಿ. ಇದನ್ನು ಕ್ರಮೇಣವಾಗಿ ಸೇವಿಸುವುದರಿಂದ ಪಿಸಿಓಡಿ ಸಮಸ್ಯೆಯು ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೇ ಅಗಸೆ ಬೀಜವು ಹಲವು ಆರೋಗ್ಯದ ಸಮಸ್ಯೆಗಳನ್ನು ಕೂಡ ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಯಾಕೆಂದರೆ ಇದು ಕಬ್ಬಿಣ, ಕಾಲ್ಸಿಯಂ, ಪೊಟಾಷ್ಯಿಯಂ ಹಾಗೂ ಕೆಲವು ಕಬ್ಬಿಣಾಮ್ಲಗಳ ಜೊತೆಗೆ ಉತ್ತಮ ನಿರೋಧಕಗಳನ್ನೂ ಕೂಡ ಒಳಗೊಂಡಿದೆ.

ದೇಹದ ತೂಕ ಇಳಿಸಲು ಸಹಕಾರಿ :


ಅಗಸೆ ಬೀಜವನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿನ ಬೇಡವಾದ ಕೊಬ್ಬು ಕರಗಿ ದೇಹದ ತೂಕ ಇಳಿಸಲು ಸಹಕಾರಿಯಾಗಿದೆ. ಅಲ್ಲದೆ ಗ್ಯಾಸ್ಟ್ರಿಕ್, ಅಸಿಡಿಟಿ, ಜೀರ್ಣಕ್ರಿಯೆಯಂತಹ ಸಮಸ್ಯೆಗಳನ್ನು ಬಗೆಹರಿಸಲು ಉಪಯುಕ್ತವಾಗಿದೆ.

ಅಗಸೆ ಬೀಜವನ್ನು ಸೇವಿಸುವ ಬಗೆ :

೧. ಅಗಸೆ ಬೀಜವನ್ನು ಪುಡಿ ಮಾಡಿ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಬೇಕು.
೨. ಅಗಸೆ ಬೀಜವನ್ನು ನೀರಿನೊಂದಿಗೆ ಬೆರೆಸಿ ಕುದಿಸಬೇಕು. ಅದು ಜೆಲ್ ರೂಪಕ್ಕೆ ಬಂದ ನಂತರ, ಬೆಚ್ಚಗಿರುವ ಸಮಯದಲ್ಲಿ ಕೂದಲಿಗೆ ಹಚ್ಚಿ.
೩. ತಿನ್ನುವ ಆಹಾರದೂಂದಿಗೆ ಅಗಸೆ ಬೀಜವನ್ನು ಬಳಕೆ ಮಾಡಿ ಸೇವಿಸುವುದು ಉತ್ತಮ.

Exit mobile version