ನೇರಳೆ ಹಣ್ಣಿನಲ್ಲಿವೆ ನೂರೆಂಟು ಔಷಧೀಯ ಗುಣ!

Jamun Fruits Benefits: ಇನ್ನೇನು ಮುಂಗಾರು ಆರಂಭವಾಗುತ್ತದೆ ಎನ್ನುವಾಗ ಮಾರುಕಟ್ಟೆಗೆ ಲಗ್ಗೆ ಇಡುವ ನೇರಳೆ ಹಣ್ಣು (Jamun Fruit) ಸಣ್ಣಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುವ ಹಣ್ಣು. ಸ್ವಲ್ಪ ಒಗರು, ಸಿಹಿಯಾಗಿರುವ ಈ ನೇರಳೆ ಹಣ್ಣು ತಿಂದರೆ ಅದರ ರಸ ಬಾಯಿ ತುಂಬಾ ಹರಡುತ್ತದೆ. ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತೆ. ಈ ಹಣ್ಣು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲ, ಇದರಿಂದ ದೇಹಾರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದರ ಸೇವನೆಯು ಹಲವು ರೀತಿಯ ಆರೋಗ್ಯ (Health) ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾದರೆ ನೇರಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ. 

Jamun Fruit

ನೇರಳೆ ಹಣ್ಣನ್ನು ಇಂಗ್ಲಿಷ್‌ನಲ್ಲಿ ಜಾವಾ ಪ್ಲಮ್ (Java Plum) ಅಥವಾ ಇಂಡಿಯನ್ ಬ್ಲ್ಯಾಕ್‌ಬೆರಿ ಎಂದೂ ಇದನ್ನು ಕರೆಯಲಾಗುತ್ತದೆ. ಹಿಂದಿಯಲ್ಲಿ ಜಾಮೂನ್ ಅಥವಾ ಜಂಬುಲ್, ಸಂಸ್ಕೃತದಲ್ಲಿ ಜಂಬುಫಲಂ ಅಥವಾ ಮಹಾಫಲ, ತಮಿಳಿನಲ್ಲಿ ನಾವರ್ ಪಜಮ್ ಮತ್ತು ತೆಲುಗಿನಲ್ಲಿ ನೆರೆಡು ಎಂದು ಕರೆಯವ ಈ ಹಣ್ಣಿನ ಸಸ್ಯಶಾಸ್ತ್ರೀಯ ಹೆಸರು ಸಿಝಿಜಿಯಂ ಕ್ಯುಮಿನಿ ಎಂದಾಗಿದೆ.

ಇನ್ನು ಈ ಹಣ್ಣಿನಲ್ಲಿ ಈ ಹಣ್ಣಿನಲ್ಲಿ ವಿಟಮಿನ್ ಸಿ (Vitamin C) ಅಂಶ ಅಧಿಕವಾಗಿದೆ. ಇದನ್ನು ಸೇವಿಸುವುದರಿಂದ ನಮ್ಮ ದೇಹ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ನೇರಳೆ ಮರದ ಬಹುತೇಕ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿವೆ. ಬೀಜ ಮತ್ತು ಹಣ್ಣುಗಳೆರಡೂ ಮಧುಮೇಹ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಮಧುಮೇಹ ರೋಗಿಗಳಿಗೆ ಉತ್ತಮ ಔಷಧಿಯಾಗಿದೆ.

ಇನ್ನು ನೇರಳೆಹಣ್ಣು ಕ್ಯಾನ್ಸರ್ (Cancer) ವಿರೋಧಿ ಮತ್ತು ಕೀಮೋ-ತಡೆಗಟ್ಟುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಕ್ಯಾನ್ಸರ್, ಹೃದಯ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಚಿಕಿತ್ಸೆಗೂ ಈ ಹಣ್ಣಿನ ಸೇವನೆ ಪ್ರಯೋಜನಕಾರಿ. ಅಲ್ಲದೇ ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ (Sodium, Potassium, Magnesium) ಮತ್ತು ಕ್ಯಾಲ್ಸಿಯಂನಂತಹ ಹೆಚ್ಚಿನ ಪ್ರಮಾಣದ ಆರೋಗ್ಯಕರ ಅಂಶಗಳು ಪಾರ್ಶ್ವವಾಯುವನ್ನು ತಡೆಗಟ್ಟುತ್ತದೆ. ಇದನ್ನು ಜ್ಯೂಸ್ ಮಾಡಿ ಕುಡಿದರೆ ದಾಹ ತಣಿಸಲು ಸಾಧ್ಯವಾಗುತ್ತದೆ.

ನಿದ್ದೆಕೊರತೆ, ಅತಿಯಾದ ಟೀ (Tea) ಸೇವನೆಯಿಂದ ಉಂಟಾಗುವ ಪಿತ್ತದ ತೊಂದರೆಯನ್ನು ನೇರಳೆ ಹಣ್ಣನ್ನು ಸೇವಿಸುವುದರಿಂದ ಶಮನ ಮಾಡಬಹುದಾಗಿದೆ. ಆದರೆ ಇದನ್ನು ಅತಿಯಾಗಿ ತಿನ್ನಬಾರದು ಹಾಗೂ ತಿಂದ ನಂತರದಲ್ಲಿ ಕನಿಷ್ಠ ಒಂದು ಗಂಟೆಯವರೆಗೆ ಹಾಲನ್ನು ಕುಡಿಯಬಾರದು. 

Exit mobile version