ಆರೋಗ್ಯಕ್ಕೆ ಬೇವು ಎಷ್ಟು ಪ್ರಯೋಜನಕಾರಿ ಗೊತ್ತಿದೀಯಾ? ಹಾಗಾದ್ರೆ ತಿಳಿಯೋಣ ಬನ್ನಿ

 ಬೇವು ಗುಣದಲ್ಲಿ ಕಹಿ ಎನಿಸಿಕೊಂಡರು ಇದರ ಆರೋಗ್ಯಕರ (Health benefits of neem leaves) ಪ್ರಯೋಜನ ಅದ್ಬುತವಾಗಿದೆ. ಸಂಸ್ಕೃತದಲ್ಲಿ ಬೇವನ್ನು ‘ಅರಿಸ್ಟಾ’ (Arista)ಎಂದು ಕರೆಯುತ್ತಾರೆ.

ಹಿಂದಿನ ಕಾಲದಿಂದ ಭಾರತದಲ್ಲಿ ಸಾಮಾನ್ಯವಾಗಿ ಬೇವಿನ ಮರವನ್ನು ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ನೋಡಿರಬಹುದು. ಆದರೆ ಬೇವಿನ ಎಲೆಗಳಿಂದ (Neem Leaves) ಆರೋಗ್ಯಕ್ಕೆ ಬಹಳಷ್ಟು

ಪ್ರಯೋಜನಕಾರಿಯಾಗಿದ್ದು, ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ(Health benefits of neem leaves) ಬೀರುತ್ತೆ ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೇವಿನ ಪ್ರಯೋಜನಗಳು: (Benefits of Neem)
ಆಂಟಿ ಬ್ಯಾಕ್ಟೀರಿಯಲ್ (Anti bacterial) ಸಾಮರ್ಥ್ಯ


ಬೇವಿನ ಮರದ ಎಲೆಗಳು ಆಯುರ್ವೇದ ಹೋಮಿಯೋಪತಿ ಔಷಧಗಳಲ್ಲಿ ಚಹಾ ಮತ್ತು ಇತರ ಸೌಂದರ್ಯ ಸಾಧನೆಗಳ(Beauty Products) ಉತ್ಪನ್ನಗಳಲಿ ವ್ಯಾಪಕವಾಗಿ ಗುರುತಿಸಲ್ಪಟ್ಟ

ವಸ್ತು ಗಳಲ್ಲಿ ಒಂದಾಗಿದ್ದು, ಇದರಲ್ಲಿ ಜೀವವಿರೋಧಿ ಮತ್ತು ಆಂಟಿ ಮೈಕ್ರೊಬಿಯಲ್ ಗುಣಗಳು ಹೆಚ್ಚಾಗಿದ್ದು, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ರಕ್ತದಲ್ಲಿನ ಸಕ್ಕರೆ (blood sugar) ಮಟ್ಟವನ್ನು ನಿಯಂತ್ರಿಸುವುದಕ್ಕೆ ಬಹಳ ಸಹಾಯಕಾರಿಯಾಗಿದ್ದು, ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸಲು, ಬ್ಯಾಕ್ಟೀರಿಯಾವನ್ನು ಕೊಲ್ಲುವುದಷ್ಟೇ

ಅಲ್ಲದೆ, ಬಾಯಿಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುವ ರಾಸಾಯನಿಕಗಳನ್ನು ಒಳಗೊಂಡಿದೆ.

ತಲೆಹೊಟ್ಟು: (Dandruff)
ಈಗಿನ ಕಾಲದ ಯುವಕರಲ್ಲಿ (Youth) ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ಬಿಳಿ ಕೂದಲಿನ (White Hair) ತೊಂದರೆ ಕೂಡ ಕಂಡುಬರುತ್ತಿದೆ. ಇನ್ನು ಇದರಲ್ಲಿರುವ ಆಂಟಿ ಬ್ಯಾಕ್ಟೀರಿಯಲ್

ಮತ್ತು ಆಂಟಿಫಂಗಲ್ (Antifungal) ಗುಣಲಕ್ಷಣಗಳು ಸಹಾಯಕಾರಿಯಾಗಿದ್ದು, ಚರ್ಮವನ್ನು ಹೈಡ್ರೀಕರಿಸಿದ ಮತ್ತು ತಲೆಹೊಟ್ಟು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಕೂದಲನ್ನು ಬಲಪಡಿಸುತ್ತದೆ

ವಾಸ್ತವವಾಗಿ, ಕೂದಲಿನ ಬೆಳವಣಿಗೆಯನ್ನು(Hair Growth) ಉತ್ತೇಜಿಸಲು ಮತ್ತು ಪುರುಷ ಮಾದರಿಯ ಬೊಕ್ಕು ತಲೆಯನ್ನು ಸಮಸ್ಯೆಯಿಂದ ಬಳಲುವವರಿಗೆ ಔಷಧವಾಗಿ ಕೆಲಸ ಮಾಡುತ್ತದೆ.

ಕ್ಯಾನ್ಸರ್ ಗೆ ರಾಮಬಾಣ: (Panacea for Cancer)
ಬೇವಿನಲ್ಲಿರುವ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕಗಳು (Antioxidants) ಕೆಲವು ರೀತಿಯ ಕ್ಯಾನ್ಸರ್(Cancer) ಅನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತವೆ ಮತ್ತು

ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್ಗಳನ್ನು(free radicals) ತಟಸ್ಥಗೊಳಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ.

ಇದನ್ನು ಓದಿ: ಅಮಿತ್ ಶಾ ಜೊತೆ ಮಾತುಕತೆ ನಡೆಸಿದ ಜಗದೀಶ್ ಶೆಟ್ಟರ್: ಬಿಜೆಪಿ ಸೇರ್ಪಡೆ ಗ್ಯಾರಂಟಿ

Exit mobile version