Job News : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು(Department of Health and Family Welfare) ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದ ಕಾರ್ಯಕ್ರಮಗಳಡಿ ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಗುತ್ತಿಗೆ(Lease) ಆಧಾರದ ಮೇಲೆ ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ನೇಮಕಾತಿ ಪ್ರಾಧಿಕಾರ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ನೇಮಕಾತಿ ಯೋಜನೆಗಳು: ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಕಾರ್ಯಕ್ರಮ.
ಉದ್ಯೋಗ ಸ್ಥಳ : ಬೆಂಗಳೂರು ಗ್ರಾಮಾಂತರ ಜಿಲ್ಲೆ
ನೇಮಕಾತಿ ವಿಧಾನ : ನೇರ ಸಂದರ್ಶನ
ಒಟ್ಟು ಹುದ್ದೆಗಳ ಸಂಖ್ಯೆ : 53
ಸಂಭಾವ್ಯ ವೇತನ
ರೂ.40,000 ದಿಂದ 1,10,000 ವರೆಗೆ ತಜ್ಞರು, ವೈದ್ಯಾಧಿಕಾರಿ ಹುದ್ದೆಗಳಿಗೆ ನೀಡಲಾಗುತ್ತದೆ
ರೂ.12,000 – 30,000 ವರೆಗೆ ಇತರೆ ಎಲ್ಲಾ ಹುದ್ದೆಗಳಿಗೆ ನೀಡಲಾಗುವುದು

ವಿದ್ಯಾರ್ಹತೆ : ಡಿಪ್ಲೊಮ / ಬಿಎಸ್ಸಿ / ಎಂಬಿಬಿಎಸ್ / ಎಂಡಿ / ಲ್ಯಾಬ್ ಟೆಕ್ನೀಷಿಯನ್ ಕೋರ್ಸ್ಗಳು / ಇತರೆ.
ಹುದ್ದೆಗಳ ಪದನಾಮಗಳು
ತಾಲ್ಲೂಕು ಆಶಾ ಮೇಲ್ವಿಚಾರಕರು: 1
ಶುಶ್ರೂಷಕರು : 17
ಸೈಕಿಯಾಟ್ರಿಕ್ ಶುಶ್ರೂಷಕರು : 1
ಆಯುಷ್ ವೈದ್ಯಾಧಿಕಾರಿ : 1
ಶ್ರವಣದೋಷವುಳ್ಳ ಮಕ್ಕಳ ಬೋಧಕರು : 1
ಕಮ್ಯೂನಿಟಿ ಶುಶ್ರೂಷಕರು: 1
ಜಿಲ್ಲಾ ಎಪಿಡೆಮಾಲಾಜಿಸ್ಟ್ : 1
ಆಡಳಿತಾತ್ಮಕ ಕಮ್ ಕಾರ್ಯಕ್ರಮ ಸಹಾಯಕರು : 1
ಚರ್ಮರೋಗ ತಜ್ಞರು: 3
ವೈದ್ಯಾಧಿಕಾರಿ : 08
ಸಮಾಜ ಕಾರ್ಯಕರ್ತ : 1
ಪ್ರಯೋಗಶಾಲಾ ತಂತ್ರಜ್ಞರು : 08
ಕ್ಷಯರೋಗ ಆರೋಗ್ಯ ಸಂದರ್ಶಕ : 1
ಫಿಜಿಷಿಯನ್ : 2
ಆರವಳಿಕೆ ತಜ್ಞರು: 1
ಅರವಳಿಕೆ ತಜ್ಞರು: 1
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು : 1

ಅರ್ಜಿ ಹಾಕುವ ವಿಧಾನ :
ಅರ್ಜಿಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ (ಎನ್ಹೆಚ್ಎಂ ವಿಭಾಗ), ಈ ಕಚೇರಿಯಲ್ಲಿ ದಿನಾಂಕ 09-08-2023 ರಿಂದ 21-08-2023 ರ ವರೆಗೂ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 02-00 ಗಂಟೆವರೆಗೆ ವಿತರಿಸಲಾಗುವುದು.
ಆಸಕ್ತರು ಅರ್ಜಿಗಳನ್ನು ಪಡೆದು ದಿನಾಂಕ 22-08-2023 ರೊಳಗೆ ಸಂಬಂಧಪಟ್ಟ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಿ ಈ ಕಚೇರಿಗೆ ಸಲ್ಲಿಸುವುದು.
ಅರ್ಜಿ ವಿತರಿಸುವ ಮತ್ತು ಪಡೆಯುವ ವಿಳಾಸ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾಡಳಿತ ಕೊಠಡಿ ಸಂಖ್ಯೆ 207, 2ನೇ ಮಹಡಿ, ಬೀರಸಂದ್ರ ಗ್ರಾಮ, ವಿಶ್ವನಾಥಪುರ ಅಂಚೆ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ – 562110.
ರಶ್ಮಿತಾ ಅನೀಶ್