ಬೆಳಗಾವಿಯಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆ ದಾಳಿ: ನೋಟಿಸ್ ಜಾರಿ

Belagavi : ಬೆಳಗಾವಿಯ ಮಾಧವ ನಗರದಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡುತ್ತಿದ್ದ ಯಶ್ ಹಾಸ್ಪಿಟಲ್ ಮೇಲೆ (health department raids hospital) ಬೆಳಗಾವಿ ಉಪವಿಭಾಗಾಧಿಕಾರಿ, ಆರೋಗ್ಯ

ಇಲಾಖೆ ಜಂಟಿ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ವೇಳೆ, ರೋಗಿಗಳ ನೋಂದಣಿ ಪುಸ್ತಕ, ಗರ್ಭಿಣಿಯರ ಸ್ಕ್ಯಾನಿಂಗ್ ಪತ್ತೆಯಾಗಿದ್ದು, ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ.

ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆಹಚ್ಚುವ ಕಾಯ್ದೆ ಉಲ್ಲಂಘನೆಯಡಿ ಬೆಳಗಾವಿ ಉಪವಿಭಾಗಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು

ಜಂಟಿ ಕಾರ್ಯಾಚರಣೆ ಕೈಗೊಂಡು ಕಾನೂನು ಬಾಹಿರವಾಗಿ ಹೆಣ್ಣು ಭ್ರೂಣ ಪತ್ತೆ (health department raids hospital) ಮಾಡುತ್ತಿದ್ದ ಯಶ್ ಹಾಸ್ಪಿಟಲ್ ಮೇಲೆ ದಾಳಿ ನಡೆಸಿದ್ದಾರೆ.

ರೋಗಿಗಳ ನೋಂದಣಿ ಪುಸ್ತಕ, ಗರ್ಭಿಣಿಯರ ಸ್ಕ್ಯಾನಿಂಗ್, ಸರ್ಕಾರದ ಹಲವು ನಿಯಮಾವಳಿಗಳ ಉಲ್ಲಂಘನೆ ನ್ಯೂನತೆಯಡಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದ್ದು, ದಾಳಿ ವೇಳೆ ಹೆಣ್ಣು ಭ್ರೂಣ

ಪತ್ತೆ ಹಚ್ಚುವುದು ಪತ್ತೆ‌ಯಾಗಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಷೀನ್, ಸ್ಕ್ಯಾನಿಂಗ್ ಮಾಡುವ ರೂಮ್ ಜಪ್ತಿ ಮಾಡಿದ್ದಾರೆ.

ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ನಿಯಮ ಉಲ್ಲಂಘನೆ ಹಿನ್ನೆಲೆ ಆಸ್ಪತ್ರೆಗೆ ನೋಟಿಸ್​ನಲ್ಲಿ ತಿಳಿಸಲಾಗಿದ್ದು, ಬೆಳಗಾವಿ ಎಸಿ ಶ್ರವಣಕುಮಾರ, ಪ್ರೊಬ್ರೆಷನರಿ ಐಎಎಸ್‌ ಶುಭಂ ಶುಕ್ಲಾ,

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ‌.ವಿಶ್ವನಾಥ ಎಂ.ಭೋವಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಇದನ್ನು ಓದಿ: ಹೈಕಮಾಂಡ್ ಸೂಚಿಸಿದರೆ ನಾನು ಸಿಎಂ ಆಗುತ್ತೇನೆ: ಪ್ರಿಯಾಂಕ್ ಖರ್ಗೆ

Exit mobile version