Mysore: ಒಂದು ವೇಳೆ ಹೈಕಮಾಂಡ್ (High Command) ನನಗೆ ಸಿಎಂ ಆಗು (Ready to be CM – Priyank Kharge) ಎಂದರೆ ನಾನೂ ಸಿದ್ಧನಿದ್ದೇನೆ. ಹೈಕಮಾಂಡ್ ಯಾರನ್ನು
ಸೂಚಿಸುತ್ತದೆ ಅವರು ಸಿಎಂ ಆಗುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮೈಸೂರಲ್ಲಿ (Mysore) ಹೇಳಿದ್ದಾರೆ. ನಾನು ಏನೇ ಹೇಳಿಕೆ ಕೊಟ್ಟಿದ್ದರು ಅದು ನನ್ನ ಸ್ವಂತ ಅಭಿಪ್ರಾಯ ಆಗಿರುತ್ತದೆ ಮತ್ತು
ಸಿಎಂಆಯ್ಕೆ ಬಗ್ಗೆ ಹೈಕಮಾಂಡ್ ತೀರ್ಮಾನವೇ (Ready to be CM – Priyank Kharge) ಅಂತಿಮ ಎಂದರು.
ಕಾಂಗ್ರೆಸ್ನಲ್ಲಿ (Congress) ಸಿಎಂ ಬದಲಾವಣೆ ಚರ್ಚೆ ಆರಂಭವಾಗಿದ್ದು, ಮತ್ತೆ ಅಧಿಕಾರ ಹಂಚಿಕೆ. ಮೈಸೂರು ಜಿಲ್ಲಾ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಪರಿಶೀಲನಾ ಸಭೆ ನಡೆಸಲು
ಬಂದ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ (Priyank Kharge) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನಾನೇ 5 ವರ್ಷ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ಸಿದ್ದರಾಮಯ್ಯ ಸಿಎಂ ಆಗಿ
ಮುಂದುವರೆಯಬೇಕು, ಡಿ.ಕೆ ಶಿವಕುಮಾರ್ (D K Shivakumar) ಸಿಎಂ ಆಗಬೇಕು ಎಂಬುವುದು ಅವರವರ ವೈಯಕ್ತಿಕ ವಿಚಾರ.
ಹೈ ಕಮಾಂಡ್ ಯಾರು ಸಿಎಂ (CM) ಆಗಬೇಕು, ಮುಂದುವರೆಯಬೇಕು ಎಂಬುದನ್ನ ನಿರ್ಧರಿಸುತ್ತದೆ. ಒಂದು ವೇಳೆ ಹೈ ಕಮಾಂಡ್ ನೀನು ಸಿಎಂ ಆಗು ಅಂದರು ನಾನು ಸಿದ್ದನಿದ್ದೇನೆ ಎಂದರು. ಸಿಎಂ
ಯಾರಾಗಬೇಕು, ಅಥವಾ ಅಧಿಕಾರ ಹಂಚಿಕೆ ಹೇಗೆ ಎಂಬ ಬಗ್ಗೆ ದೆಹಲಿಯಲ್ಲಿ (Delhi) ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ.
ಸಿಎಂ ಅವರದ್ದು ವೈಯಕ್ತಿಕ ಅಭಿಪ್ರಾಯ. ಜಿಲ್ಲಾ ಪಂಚಯಾತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲಾರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರವಿದೆ. ಇದರಲ್ಲಿ ತಪ್ಪು ಏನು ಇಲ್ಲ. ಆದ್ರೆ ಅವರ
ಹೇಳಿಕೆ, ಕಲ್ಲಿನಲ್ಲಿ ಕೆತ್ತಿದ ಶಾಸನವಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.
ಇದನ್ನು ಓದಿ: ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ಒಪ್ಪಬಾರದು: ಒಕ್ಕಲಿಗರ ಸಭೆಯಲ್ಲಿ ನಿರ್ಣಯ
- ಭವ್ಯಶ್ರೀ ಆರ್ ಜೆ