ಬೇಸಿಗೆಯ ಬಿರು ಬಿಸಿಲಿಗೆ ಬಿಪಿ ಹೆಚ್ಚಾಗದಿರಲಿ!

Tips For Blood Pressure: ಸಾಮಾನ್ಯವಾಗಿ ಚಳಿಗಾಲದಲ್ಲಿ (Winter) ಅಪಧಮನಿಗಳು ಮತ್ತು ರಕ್ತನಾಳಗಳು ಕಿರಿದಾಗುವಂತೆಯೇ ಬೇಸಿಗೆಯಲ್ಲಿ ಅಧಿಕ ರಕ್ತದೊತ್ತಡ ಕೂಡ ಉಂಟಾಗುತ್ತದೆ. ಸಾಮಾನ್ಯವಾಗಿ ಬೇಸಿಗೆಯ ಸುಡು ಬಿಸಿಲು ಹಲವರಿಗೆ ಆರೋಗ್ಯದಲ್ಲಿ ಕಿರಿಕಿರಿಯನ್ನುಂಟು ಮಾಡಿದರೆ ಇನ್ನು ಕೆಲವರಲ್ಲಿ ರಕ್ತದೊತ್ತಡವನ್ನು (Blood Pressure) ಹೆಚ್ಚಿಸುತ್ತದೆ. ಇದರ ಹಿಂದೆ ವಿವಿಧ ಕಾರಣಗಳಿವೆ. ಬೇಸಿಗೆಯಲ್ಲಿ ರಕ್ತದೊತ್ತಡ ಏಕೆ ಹೆಚ್ಚಾಗುತ್ತದೆ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಈ ಸಮಯದಲ್ಲಿ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಂಡು ನಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲೇ ಬೇಕು. ಬೇಸಿಗೆಯಲ್ಲಿ (Summer) ಹೆಚ್ಚಿನ ತಾಪಮಾನ ಮತ್ತು ತೇವಾಂಶದ ಮಟ್ಟವು ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಶಾಖವನ್ನು ತಂಪಾಗಿಸಲು ದೇಹದ ನೈಸರ್ಗಿಕ ಪ್ರತಿಕ್ರಿಯೆಯು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡದಲ್ಲಿ ತಾತ್ಕಾಲಿಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗಾಗಿ ಅಂತಹ ಸಮಯದಲ್ಲಿ ಬಿಪಿ ಏರುಪೇರಾಗಿ ನಮ್ಮನ್ನು ಅಪಾಯದಂಚಿಗೆ ದೂಡುತ್ತದೆ.

ಇನ್ನು ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ರಕ್ತದ ಪ್ರಮಾಣ ಕಡಿಮೆಯಾಗಿ ರಕ್ತವು ಹೆಚ್ಚು ಕೇಂದ್ರೀಕೃತವಾಗುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಅನೇಕ ಮಂದಿ ಬೇಸಿಗೆಯಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ಮತ್ತು ವ್ಯಾಯಾಮದಲ್ಲಿ ತೊಡಗಿಕೊಂಡಾಗ ಅಧಿಕ ರಕ್ತದೊತ್ತಡವನ್ನು ಅನುಭವಿಸುತ್ತಾರೆ . ಹಾಗಾಗಿ ಹೃದಯದ ಆರೋಗ್ಯವನ್ನು (Heart Problem) ಕಾಪಾಡಿಕೊಳ್ಳಲು ವ್ಯಾಯಾಮವು ಅತ್ಯಗತ್ಯವಾದರೂ, ಈ ಬಿಸಿ ವಾತಾವರಣದಲ್ಲಿ ವ್ಯಾಯಾಮವು ಕೂಡ ರಕ್ತದೊತ್ತಡದಲ್ಲಿ ತಾತ್ಕಾಲಿಕ ಏರಿಕೆಗೆ ಕಾರಣವಾಗಬಹುದು.

ಹಾಗಾದ್ರೆ ಬೇಸಿಗೆಯಲ್ಲಿ ಅಧಿಕ ರಕ್ತದೊತ್ತಡ ಕಡಿಮೆ ಮಾಡಿಕೊಳ್ಳಲು ಬೆಸ್ಟ್ ಉಪಾಯ ಅಂದರೆ ಸಾಕಷ್ಟು ನೀರು (Water) ಮತ್ತು ಪಾನೀಯಗಳನ್ನು ಕುಡಿಯುವುದು . ಈ ಮೂಲಕ ದೇಹವು ಸಮರ್ಪಕವಾಗಿ ಹೈಡ್ರೀಕರಿಸಲ್ಪಡುತ್ತದೆ ಮತ್ತೂ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸುತ್ತದೆ

Exit mobile version