ಬ್ಯೂಟಿ ಟಿಪ್ಸ್: ಸುಂದರವಾಗಿ ಕಾಣಬೇಕೇ? ಹಾಗಾದ್ರೆ ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

Healthy fruits for skin : ಕೆಲವೊಬ್ಬರಿಗೆ ಹುಟ್ಟಿನಿಂದಲೇ ಅಂದ ಮತ್ತು ಆರೋಗ್ಯ ಇರುತ್ತದೆ ಆದರೆ ಕೆಲವೊಬ್ಬರು ಆರೋಗ್ಯ ಮತ್ತು ಅಂದವನ್ನು ಹೆಚ್ಚಿಸಿಕೊಳ್ಳಲು ಬೇಕಾದಷ್ಟು ಪ್ರಯೋಗಗಳನ್ನು

ಮಾಡುತ್ತಿದ್ದಾರೆ. ಚಳಿಗಾಲದಲ್ಲಿ ಈ ಆರೋಗ್ಯ ಸಮಸ್ಯೆಗಳು ಇನ್ನೂ ಹೆಚ್ಚಾಗುತ್ತೆ ಚಳಿಯಿಂದ ಮತ್ತೆ ಅತಿಯಾದ ವಾತಾವರಣ ಬದಲಾವಣೆಯಿಂದ ನಮ್ಮ ಚರ್ಮದಲ್ಲಿ(Skin) ಇರುವಂತಹ ತೇವಾಂಶವನ್ನು

(Healthy fruits for skin) ಡ್ರೈ ಮಾಡತ್ತೆ.

ಬಹಳಷ್ಟು ರಾಸಾಯನಿಕ ವಸ್ತುಗಳು ಅಥವಾ ಸ್ಕಿನ್ ಕೇರ್ ಪ್ರಾಡಕ್ಟ್ ನ ಹಚ್ಚಿಕೊಂಡು ನಮ್ಮ ದೇಹದ ಮತ್ತು ಚರ್ಮ ಆರೋಗ್ಯಕ್ಕೆ ಕಾಪಾಡಿಕೊಳ್ಳಬಹುದು ಆದ್ರೆ ಇದು ಬರೀ ತಾತ್ಕಾಲಿಕವಾದ ಅಂತಹ

ಪರಿಹಾರ ಮತ್ತು ಇದರಿಂದ ದೇಹದ ಮೇಲೆ ಅನೇಕ ಪರಿಣಾಮಗಳು ಕೂಡ ಬೀರಬಹುದು. ಹಾಗಾಗಿ ಬರೀ ಸ್ಕಿನ್ ಪ್ರಾಡಕ್ಟ್ಸ್ ಹಚ್ಚುವುದರಿಂದ ಅಥವಾ ಬೇರೆ ರೀತಿಯ ಪ್ರಯೋಗಗಳ ಜೊತೆಗೆ ಈ 5

ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ಮತ್ತು ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

1) ಕ್ಯಾರೆಟ್- (Carrot)


ಕ್ಯಾರೆಟ್ ಚಳಿಗಾಲಕ್ಕೆ ಅತ್ಯುತ್ತಮ ಆಹಾರ ಇದರಲ್ಲಿ ಹೆಚ್ಚಿನ ವಿಟಮಿನ್ ಸಿ (Vitamin C) ಇರುವುದರಿಂದ ಇದು ನಮ್ಮ ದೇಹದ ಕೊಲಾಜಿನನ್ನು ಹೆಚ್ಚು ಮಾಡುತ್ತೆ ಇದಲ್ಲದೆ ಇದರಲ್ಲಿ ಹೆಚ್ಚಿನ ವಿಟಮಿನ್ A

ಇರೋದ್ರಿಂದ ದೇಹದಲ್ಲಿ ಇರುವಂತಹ ಫ್ರೀ ರಾಡಿಕಲ್ಸ್ ಗಳಿಂದ ಉಂಟಾಗುವಂತಹ ಹಾನಿಯನ್ನು ಕಡಿಮೆ ಮಾಡುತ್ತದೆ. ಇದನ್ನು ಜ್ಯೂಸ್ ಸಲಾಡ್ ಅಥವಾ ಉಪ್ಪಿನಕಾಯಿ ರೀತಿಯಲ್ಲಿ ನಿಮ್ಮ ಆಹಾರದಲ್ಲಿ ಬಳಸಿಕೊಳ್ಳಿ

2) ಬೀಟ್ರೂಟ್- (Beetroot)


ಬೀಟ್ರೂಟ್ ಕೂಡ ಇನ್ನೊಂದು ಅತ್ಯುತ್ತಮವಾದ ಚಳಿಗಾಲಕ್ಕೆ ಸೀಮಿತವಾದ ಆಹಾರ. ಇದರಲ್ಲಿ ಅತೀ ಅಗತ್ಯವಾದ ಪೌಷ್ಟಿಕಾಂಶಗಳು (Nutrients) ಮತ್ತು ಉತ್ಕರ್ಷಣ ನಿರೋಧಕಗಳು ಇರೋದ್ರಿಂದ ಇದು

ಚರ್ಮದ ಕಾಂತಿಯನ್ನು ವೃದ್ಧಿ ಮಾಡುತ್ತೆ. ಹಾಗೆ ಸೇವನೆ ಮಾಡಬಹುದು ಅಥವಾ ಅದರ ಮಿಶ್ರಣವನ್ನು ಚರ್ಮಕ್ಕೆ ಹೆಚ್ಚಿಕೊಳ್ಳುವುದು. ಇದು ಎಲ್ಲಾ ರೀತಿಯಲ್ಲಿ ಆರೋಗ್ಯವನ್ನು ಸುಧಾರಿಸಲು ಇದು ಅಪಾರ

ಪ್ರಯೋಜನಕಾರಿಯಾಗಿದೆ.

3) ಹಸಿರು ತರಕಾರಿ (Green vegetables)


ದಿನನಿತ್ಯ ಸೇವಿಸುವಂತಹ ಆಹಾರದಲ್ಲಿ ಹೆಚ್ಚಿನ ಹಸಿರು ತರಕಾರಿಗಳನ್ನು ಸೇವಿಸೋದ್ರಿಂದ ದೇಹದಲ್ಲಿ ಇರುವಂತಹ ಆಂಟಿ ಇನ್ಫರ್ಮೇಷನ್ (Anti information) ಹೊಂದಿದೆ. ಅದರಿಂದ ಇದು ಹೆಚ್ಚಿನ

ಶಕ್ತಿಯನ್ನು ನೀಡುತ್ತದೆ ಉದಾಹರಣೆಗೆ ಪಾಲಕ್ ಸೊಪ್ಪು ಹಾಸಿಗೆ ಅಥವಾ ಯಾವುದೇ ಹಸಿರು ತರಕಾರಿಗಳು. ಅಷ್ಟೇ ಅಲ್ಲದೆ ಇದರಲ್ಲಿ ವಿಟಮಿನ್ ಕೆ ಇರೋದ್ರಿಂದ ಮುಖದ ಕಾಂತಿಯನ್ನು ಶೀಘ್ರವಾಗಿ ಹೆಚ್ಚಿಸುತ್ತೆ

4) ಬ್ರೊಕೋಲಿ- (Broccoli)

ಬ್ರೊಕೋಲಿ ಕೂಡ ಚಳಿಗಾಲಕ್ಕೆ ಉತ್ತಮವಾದ ಆಹಾರ ಮತ್ತು ಚರ್ಮವನ್ನು ಕೂಡ ಕಾಂತಿಯುತಗೊಳಿಸುತ್ತದೆ. ಇದರಲ್ಲಿ ಹೆಚ್ಚಿನ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ಕೊಲಾಜಿನ್ (Collagen)

ಅಂಶವನ್ನು ಹೆಚ್ಚು ಮಾಡುತ್ತದೆ. ಇನ್ನು ಅಧ್ಯಯನದ ಪ್ರಕಾರ, ಬ್ರೊಕೋಲಿಯಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮತ್ತು ಸೂರ್ಯನ ಕಿರಣಗಳಿಂದ ಆಗುವಂಥ

ಚರ್ಮದ ರೋಗವನ್ನು ಕೂಡ ನಿವಾರಣೆ ಮಾಡುತ್ತೆ. ಆದ್ದರಿಂದ ಬ್ರೊಕೋಲಿಯನ್ನು ಕೂಡ ದಿನನಿತ್ಯದ ಆಹಾರದಲ್ಲಿ ಹೆಚ್ಚು ಸೇವನೆ ಮಾಡಿ

5) ಬೆರಿ ಹಣ್ಣುಗಳು (Berries)


ಬೆರಿ ಹಣ್ಣುಗಳು ಅಂದರೆ ಬ್ಲೂಬೆರಿ, ಸ್ಟ್ರಾಬೆರಿ ಮತ್ತು ರಾಸ್ಪ್ಬೇರಿ ಈ ಎಲ್ಲಾ ಹಣ್ಣುಗಳು ಚರ್ಮದ ಆರೋಗ್ಯಕ್ಕೆ ಬಹಳಷ್ಟು ಉತ್ತಮವಾಗಿದ್ದು, ಇದರಲ್ಲಿ ಹೆಚ್ಚಿನ ವಿಟಮಿನ್ ಸಿ (Vitamin C) ಇರುವುದರಿಂದ

ಮುಖದ ಕಾಂತಿಯನ್ನು ಹೆಚ್ಚು ಮಾಡಿಕೊಳ್ಳಲು ಸಹಾಯ ಮಾಡುತ್ತೆ. ಇದರಲ್ಲಿ ಹೆಚ್ಚಿನ ವಿಟಮಿನ್ ಇರೋದ್ರಿಂದ ಚರ್ಮದಲ್ಲಿ ಇರುವಂತಹ ಮೊಡವೆಗಳ ಕಲೆ, ಹೈಪಿಗ್ಮಿಂಟೆಷನ್, ಮತ್ತು ಕಪ್ಪುಕಲೆಗಳನ್ನು

ತೆಗೆದುಹಾಕುತ್ತದೆ.

ಇದನ್ನು ಓದಿ: ಆರೋಗ್ಯ ಮಾಹಿತಿ: ಶಸ್ತ್ರಚಿಕಿತ್ಸೆ ನಂತರ ಬೇಗ ಚೇತರಿಸಿಕೊಳ್ಳಲು ಇಲ್ಲಿದೆ ವೈದ್ಯರ ಉಪಯುಕ್ತ ಮಾಹಿತಿ

Exit mobile version