ಪಳ ಪಳ ಹೊಳೆಯುವ ಹಲ್ಲುಗಳಿಗಾಗಿ ಮನೆಯಲ್ಲೇ ತಯಾರಿಸಿ ಆರೋಗ್ಯವಾದ ಟೂತ್ ಪೌಡರ್: ಇದರ ಉಪಯೋಗಗಳೇನು?

Healthy Tooth Powder: ನಾವೆಲ್ಲರೂ ಇತ್ತೀಚಿಗೆ ದುಬಾರಿ ಬ್ರ್ಯಾಂಡ್ ಟೂತ್ಪೇಸ್ಟ್ (Healthy Tooth Powder for Teeth) ಬಳಸುವುದಲ್ಲದೆ ರಾಸಾಯನಿಕಗಳನ್ನು ತುಂಬಿದ

ಟೂತ್ಪೇಸ್ಟ್ ಗಳನ್ನು ಖರೀದಿ ಮಾಡಿ ಉಪಯೋಗಿಸುವ ಬದಲು ನಾವೇ ಮನೆಯಲ್ಲಿ ಸುಲಭವಾಗಿ ಒಂದು ನೈಸರ್ಗಿಕ ಸ್ವರೂಪದ ಟೂತ್ ಪೌಡರ್ ಅನ್ನು ತಯಾರಿಸಿಕೊಳ್ಳಬಹುದು. ಹಲ್ಲುಗಳು

ಜೀವನಪೂರ್ತಿ ಗಟ್ಟಿಮುಟ್ಟಾಗಿ ಆರೋಗ್ಯಕರವಾಗಿ ಹುಳುಕು ಬರದಂತೆ ನೋಡಿಕೊಳ್ಳಬೇಕು ಎಂದರೆ ಅದನ್ನು ಕಾಪಾಡಿಕೊಳ್ಳುವ ಚಾಣಾಕ್ಷತನ ನಮ್ಮಲ್ಲೇ ಇದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು

ಅಷ್ಟೇ. ಹಾಗಾದರೆ ಏನು ಮಾಡಬೇಕು (Healthy Tooth Powder for Teeth) ಎಂಬುದನ್ನು ತಿಳಿಯೋಣ ಬನ್ನಿ.

ಮನೆಯಲ್ಲಿರುವ ಸಾಮಗ್ರಿಗಳು
ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಸುಲಭವಾಗಿ ಟೂತ್ ಪೌಡರ್ (Tooth Powder) ತಯಾರು ಮಾಡಿಕೊಳ್ಳಲು ಕೇವಲ ಮೂರು ಉತ್ಪನ್ನಗಳು ಸಾಕಾಗುತ್ತವೆ. ಅವುಗಳೆಂದರೆ ಲವಂಗ,

ಆಲಂ,ಮತ್ತು ಬೇಕಿಂಗ್ ಸೋಡಾ (Baking Soda) ಇವುಗಳಿಂದ ಟೂತ್ ಪೌಡರ್ ತಯಾರಿಸಬಹುದು

ತಯಾರಿಸುವ ವಿಧಾನ :
ಮೊದಲಿಗೆ ಒಂದು ಪ್ಯಾನ್ ನಲ್ಲಿ ಒಂದು ಲೋಟ ನೀರನ್ನು ಒಲೆಯ ಮೇಲಿಟ್ಟು ಬಿಸಿ ಮಾಡಬೇಕು. ಅದಕ್ಕೆ ಒಂದು ಆಲಂ ತುಂಡು ಹಾಕಿ ಬಿಸಿ ಮಾಡಿ. ಅದು ಕರಗಿ ಒಂದು ಗಾತ್ರಕ್ಕೆ ಬಂದ ನಂತರ ಆಲಂ

(Alam) ಅನ್ನು ನೀರಿಂದ ಬೇರ್ಪಡಿಸಿ ಅದನ್ನು ಒಂದು ಮಿಕ್ಸರ್ ಜಾರ್ ನಲ್ಲಿ ಹಾಕಿ ಬೇರೆ ಪ್ಯಾನ್ ನಲ್ಲಿ ಆರರಿಂದ ಎಂಟು ಲವಂಗಗಳನ್ನು ಎರಡು ನಿಮಿಷಗಳವರೆಗೆ ಚೆನ್ನಾಗಿ ಹುರಿಯಿರಿ. ಇದನ್ನು

ಗ್ರೈಂಡರ್ ನಲ್ಲಿ ಸೇರಿಸಿ ಎರಡನ್ನು ಪುಡಿ ಮಾಡಿಕೊಳ್ಳಬೇಕು. ನಂತರ ಪುಡಿ ಮಾಡಿದ ಮಿಶ್ರಣಕ್ಕೆ ಎರಡು ಟೇಬಲ್ ಚಮಚ ಬೇಕಿಂಗ್ ಸೋಡಾ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಮುಂದಿನ ಬಳಕೆಗಾಗಿ

ನೀವು ಒಂದು ಸ್ಪ್ರಿಂಕಲ್ ಜಾರ್ (Sprinkle Jar) ನಲ್ಲಿ ಹಾಕಿ ಒಂದು ಒಮ್ಮೆ ತಯಾರಿಸಿದ ಈ ಪೌಡರ್ ಅನ್ನು ಒಂದು ವರದ ವರೆಗೂ ಇಟ್ಟುಕೊಂಡು ಬಳಸಬವುದಾಗಿದೆ.

ಉಪಯೋಗಗಳು?
ಮನೆಯಲ್ಲಿಯೇ ತಯಾರಿಸಿದ ಈ ಟೂತ್ ಪೌಡರ್ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ (Anti Bacteria) ಗುಣ ಲಕ್ಷಣಗಳನ್ನು ಒಳಗೊಂಡಿದ್ದರಿಂದ ಹಲ್ಲು ಹುಳುಕು ಆಗುವುದನ್ನು ತಡೆಯುತ್ತದೆ.

ಈ ಪೌಡರ್ ಇಂದ ಹಲ್ಲುಜ್ಜುವ ಅಭ್ಯಾಸ ಮಾಡಿಕೊಂಡರೆ ದಂತಕುಳಿ ತಡೆಯುದರ ಜೊತೆಗೆ ಹಲ್ಲುಗಳ ಭಾಗದ ವಸಡುಗಳು ಕೂಡ ಗಟ್ಟಿಯಾಗುತ್ತವೆ.

ವಸಡು ನೋವಿನ ಸಮಸ್ಯೆ ಪರಿಹಾರ
ವಸಡುಗಳ ಭಾಗದಿಂದ ರಕ್ತ ಸೋರಿಕೆ ತೊಂದರೆ ಇದ್ದರೆ ಕಡಿಮೆ ಮಾಡುತ್ತದೆ. ಇದರಲ್ಲಿ ಬಳಸಿರುವ ಆಲಂ, ನೋವು ನಿವಾರಣೆ ಮಾಡುವ ಗುಣಲಕ್ಷಣಗಳನ್ನು ಒಳಗೊಂಡಿರುದರಿಂದ ನೋವು ಮಾಯವಾಗುತ್ತದೆ.

ಇನ್ನೂ ಲವಂಗ ಹಲ್ಲುಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದಲ್ಲದೆ ವಸಡಿನಲ್ಲಿ ರಕ್ತಸ್ರಾವದ ಸಮಸ್ಯೆಗೂ ಇದು ಉತ್ತಮ ಪರಿಹಾರವಾಗಿದೆ.

ಹಲ್ಲಿನ ಸಂದುಗಳನ್ನು ಸ್ವಚ್ಛಪಡಿಸುತ್ತದೆ
ನಾವು ತಿನ್ನುವಂತಹ ಆಹಾರ ಹಲ್ಲುಗಳ ಸಂದುಗಳಲ್ಲಿ ಸೇರಿಕೊಂಡು ಹಲ್ಲುಗಳು ಮತ್ತು ವಸಡುಗಳ ಅನಾರೋಗ್ಯ ಉಂಟು ಮಾಡುತ್ತವೆ ಮತ್ತು ದಿನಕಳೆದಂತೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರಿಂದ

ನೋವು ಉಂಟಾಗುವ ಸಾಧ್ಯತೆ ಇರುದರಿಂದ ನಾವು ಮನೆಯಲ್ಲಿ ತಯಾರಿಸಿದ ಈ ಪೌಡರ್ ನಲ್ಲಿ ಬಳಸಲಾಗಿರುವ ಬೇಕಿಂಗ್ ಸೋಡಾ ಹಲ್ಲುಗಳನ್ನು ಸ್ವಚ್ಛ ಮಾಡುವಲ್ಲಿ ಮತ್ತು ಹಲ್ಲುಗಳ ಬಣ್ಣವನ್ನು ಮತ್ತೆ ಬಿಳಿ

ಬಣ್ಣಕ್ಕೆ ಬದಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.​

ನಾವು ಈ ಟೂತ್ ಪೌಡರ್ ನಲ್ಲಿ ಬಳಸಲಾಗಿರುವ ಬೇಕಿಂಗ್ ಸೋಡಾ ವಿಶೇಷವಾಗಿ ಹೆಚ್ಚು ನೊರೆಯನ್ನು ಉಂಟು ಮಾಡಿ ಹಲ್ಲುಗಳ ಸಂದುಗಳಿಗೆ ತಲುಪಿ ಹಲ್ಲುಗಳನ್ನು ಪೂರ್ಣ ಪ್ರಮಾಣದಲ್ಲಿ

ಸ್ವಚ್ಛಗೊಳಿಸುವುದರಿಂದ ಬಾಯಿಯ ದುರ್ವಾಸನೆ ಮತ್ತು ಸೂಕ್ಷ್ಮಾಣು ಕಣಗಳನ್ನು ಕ್ರಮೇಣವಾಗಿ ನಾಶಗೊಳಿಸುತ್ತದೆ. ಇದರಲ್ಲಿ ಬಳಕೆಯಾಗಿರುವ ಲವಂಗ ಬಹಳಷ್ಟು ಔಷಧಿಯ ಗುಣಗಳನ್ನು ಹೊಂದಿದ್ದು,

ಆಂಟಿ ಸೆಪ್ಟಿಕ್ (Anti Septic) ತರಹ ಕೆಲಸ ಮಾಡಿ ಬ್ಯಾಕ್ಟೀರಿಯಾಗಳು ಉಂಟು ಮಾಡುವ ಸೋಂಕನ್ನು ಇದು ತಡೆಹಿಡಿಯುತ್ತದೆ.

ಮತ್ತು ಬ್ಯಾಕ್ಟೀರಿಯಾಗಳಿಂದ ಹಲ್ಲುಗಳನ್ನು ಸಂರಕ್ಷಿಸುತ್ತದೆ ಮತ್ತು ನೀವು ಯಾವುದೇ ಆಹಾರ ಸೇವನೆ ಮಾಡಿದರು ಕೂಡ ದಿನದಲ್ಲಿ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ಸಂಜೆ ಹಲ್ಲುಜ್ಜುವ ಅಭ್ಯಾಸವನ್ನು

ಮಾಡಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಎಣ್ಣೆ ಜಿಡ್ಡಿನ ಆಹಾರಗಳನ್ನು ಸೇವಿಸಿದ ನಂತರ ಹಲ್ಲುಜ್ಜುವುದು ನಮ್ಮ ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಎಂದು ತಿಳಿದುಕೊಳ್ಳಿ. ಒಂದು ವೇಳೆ ಹಲ್ಲುಜ್ಜದೆ

ಬಿಟ್ಟರೆ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಅಲ್ಲದೆ ಹಲ್ಲಿನ ತೊಂದರೆಯು ಬರಬಹುದು. ಹೀಗಾಗಿ ನೀವು ಈ ಇದರ ಪ್ರಯೋಜನ ಪಡೆದುಕೊಳ್ಳಿ.

ಇದನ್ನು ಓದಿ: ಸಿದ್ದರಾಮಯ್ಯನವರು, ಶಾಮನೂರು ಶಿವಶಂಕರಪ್ಪ ಮಾಡಿರುವ ಪ್ರಶ್ನೆಗಳಿಗೆ ಉತ್ತರಿಸಲಿ: ಬಸವರಾಜ ಬೊಮ್ಮಾಯಿ

Exit mobile version