Bengaluru: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Highcourt about Veerendra Heggade) ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸೌಜನ್ಯ (Soujanya)
ಕೊಲೆ ಪ್ರಕರಣ ಮುಂದಿಟ್ಟುಕೊಂಡುಹೇಳಿಕೆ ನೀಡದಂತೆ ಪ್ರತಿಬಂಧಕ ಆದೇಶವನ್ನು ಈಗಾಗಲೇ ವಿಚಾರಣಾ ನ್ಯಾಯಾಲಯ ಅದೇಶಿಸಿದೆ. ನ್ಯಾಯಾಲಯ ವಿಧಿಸಿರುವ ಈ ತಡೆಯಾಜ್ಞೆ
ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಗೃಹ ಇಲಾಖೆಗೆ ಹೈಕೋರ್ಟ್ (Highcourt about Veerendra Heggade) ಸೂಚಿಸಿದೆ.
ನ್ಯಾ. ಕೃಷ್ಣ ಎಸ್. ದೀಕ್ಷಿತ್(Krishna S Deekshith) ಅವರಿದ್ದ ಪೀಠವು ವೀರೇಂದ್ರ ಹೆಗ್ಗಡೆಯವರ ಸಂಬಂಧಿ ನಂದೀಶ್ ಕುಮಾರ್ ಜೈನ್ (Nandeesh kumar jain) ಮತ್ತು ಧರ್ಮಸ್ಥಳ
(Dharmasthala) ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ (Sheenappa) ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮರೀಚಿಕೆ ಆಗುತ್ತಿರುವ ಮಳೆ : ಮೋಡ ಬಿತ್ತನೆ ಬೇಡವೆಂದ ಸಿಎಂ ಸಿದ್ದರಾಮಯ್ಯ
ಧರ್ಮಾಧಿಕಾರಿ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಹೇಳಿಕೆ ನೀಡದಂತೆ ಮಹೇಶ್ ಶೆಟ್ಟಿ ತಿಮ್ಮರೋಡಿ (Mahesh Shetty Thimarodi) ಅವರಿಗೆ ಪ್ರಥಮ ದರ್ಜೆ ನ್ಯಾಯಾಲಯ
ವಿಧಿಸಿರುವ ತಡೆಯಾಜ್ಞೆ ಉಲ್ಲಂಘಿಸದಂತೆ ರಾಜ್ಯ ಸರ್ಕಾರ (Government) ಮತ್ತು ಗೃಹ ಸಚಿವಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ.
ಮಹೇಶ್ ಶೆಟ್ಟಿ ತಿಮ್ಮರೋಡಿ ಅವರಿಗೆ ಧರ್ಮಾಧಿಕಾರಿ ಹೆಗ್ಗಡೆ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಹೇಳಿಕೆ ನೀಡದಂತೆ ಪ್ರತಿಬಂಧಕಾದೇಶವನ್ನು ವಿಚಾರಣಾ ನ್ಯಾಯಾಲಯ ವಿಧಿಸಿದೆ.
ಅದರಂತೆ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಗೆ ಈ ಆದೇಶ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಇದನ್ನೂ ಓದಿ : ದಂಡ ಕಟ್ಟಿ: 2019 ಕ್ಕಿಂತ ಮುಂಚಿನ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ, ಇಲ್ಲವೇ ದಂಡ ಕಟ್ಟಿ !
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲ ಎಸ್.ರಾಜಶೇಖರ್ ವಾದ ಮಂಡಿಸಿ, ‘ಸೌಜನ್ಯ ಹತ್ಯೆಯ ಕುರಿತು ಯಾವುದೇ ರೀತಿಯ ತನಿಖೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಬೇಕು’ ಎಂದು ವಾದ ಮಂಡಿಸಿ,
ಉಜಿರೆಯ ಮಹೇಶ್ ತಿಮರೋಡಿ ಅವರು ನ್ಯಾಯಾಂಗ ಮತ್ತು ಧರ್ಮಸ್ಥಳದ ಮಂಜುನಾಥ ದೇವಾಲಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದರು.
ಅರ್ಜಿದಾರರ ಮನವಿ: ಮಹೇಶ್ ತಿಮ್ಮರೋಡಿ ಮತ್ತು ಅವರ ಅನುಯಾಯಿಗಳು 2012ರಲ್ಲಿ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣ ಸಂಬಂಧ ಸಾರ್ವಜನಿಕರಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ
ದೇವಾಲಯ,ಟ್ರಸ್ಟ್(Trust) ವಿರುದ್ಧ ಮತ್ತು ದೇವಸ್ಥಾನಕ್ಕೆ ಸೇರಿದ ಸಂಸ್ಥೆಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಿಂದನಾತ್ಮಕ ಹೇಳಿಕೆಯನ್ನು ನ್ಯಾಯಾಂಗ ಮತ್ತು
ನ್ಯಾಯಾಧೀಶರ ವಿರುದ್ಧ ನೀಡುತ್ತಿದ್ದಾರೆ. ಜತೆಗೆ, ಪ್ರತಿಭಟನೆಯನ್ನು ಸಹ ಮಾಡುತ್ತಿದ್ದಾರೆ. ಅದರಂತೆ ಈ ವಿಚಾರವಾಗಿ ಪೊಲೀಸ ರಿಗೆ ನ್ಯಾಯಾಲಯ ಮಾಡಿರುವ ಆದೇಶ ಉಲ್ಲಂಘಿಸಿದವರ
ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು. ಹಾಗೆಯೇ ಸರ್ಕಾರಕ್ಕೆ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ತನಿಖೆ ನಡೆಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ರಶ್ಮಿತಾ ಅನೀಶ್