ಫೇಸ್‌​ಬುಕ್‌ ಅನ್ನು ಭಾರತದಲ್ಲಿ ಬಂದ್‌ ಮಾಡಿ​ಬಿ​ಡ್ತೇ​ವೆ: ಹೈಕೋರ್ಟ್‌ ಎಚ್ಚ​ರಿ​ಕೆ

Bengaluru: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನೋಂದಣಿ ಕಾಯಿದೆ (ಎನ್‌ಆರ್‌ಸಿ) ಬೆಂಬಲಿಸಿ ಅನಾಮಧೇಯ ವ್ಯಕ್ತಿಗಳು ಮಂಗಳೂರು (Highcourt warning about Facebook)

ಶೈಲೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ (Facebook) ಖಾತೆಗಳನ್ನು ತೆರೆದು ಸೌದಿ ಅರೇಬಿಯಾದ ಆಡಳಿತಗಾರನ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ ಪ್ರಕರಣದ

ತನಿಖೆಗೆ ಸೂಕ್ತ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಭಾರತದಲ್ಲಿ ಫೇಸ್‌ಬುಕ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್ (High Court) ಬುಧವಾರ ಎಚ್ಚರಿಸಿದೆ.

ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅನಾಮಿಕರು ಅವಹೇಳನಕಾರಿ ಪೋಸ್ಟ್‌ ಹಾಕಿದ್ದರಿಂದ ಅರೇಬಿಯಾ(Saudi Arabia) ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಜೈಲು ವಾಸ

ಅನುಭವಿಸಿರುವ ಮಂಗಳೂರಿನ (Mangalore) ಬಿಕರ್ನಕಟ್ಟೆ ನಿವಾಸಿ ಶೈಲೇಶ್ ಕುಮಾರ್ ಎಂಬುವರ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಇದನ್ನೂ ಓದಿ : ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ : ನೋಂದಣಿ ಪ್ರಕ್ರಿಯೆ ಯಾವಾಗದಿಂದ ಪ್ರಾರಂಭ?

ಫೇಸ್ ಬುಕ್ ಸಂಸ್ಥೆ ಒಂದು ವಾರದೊಳಗೆ ಘಟನೆಯ ಬಗ್ಗೆ ಮಾಹಿತಿ ಒಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸುಳ್ಳು ಹೇಳಿ ಅವರನ್ನು ಜೈಲಿಗೆ ಹಾಕಿರುವ ಹಿನ್ನೆಲೆಯಲ್ಲಿ ಬಿಡುಗಡೆಗೆ ಯಾವ ಕ್ರಮ

ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಮಾಹಿತಿ (Highcourt warning about Facebook) ನೀಡಬೇಕು.


ಈ ಪ್ರಕರಣದ ಸಮರ್ಪಕ ತನಿಖೆಯನ್ನು ಮಂಗಳೂರು ಪೊಲೀಸರು ಕೈಗೊಂಡು ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿ ವಿಚಾರಣೆಯನ್ನು ಜೂ.22ಕ್ಕೆ ಮುಂದೂಡಿದೆ.

ಏನಿದು ಪ್ರಕ​ರ​ಣ?:


ಮಂಗಳೂರಿನ ಬಿಕರನಕಟ್ಟೆ ನಿವಾಸಿ ಶೈಲೇಶ್‌ ಕುಮಾರ್‌ (45)(Shailesh Kumar) ಎಂಬುವವರು ಸೌದಿ ಅರೇಬಿಯಾದ ಅಲ್‌ಕುಬರ್‌ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ಉದ್ಯೋಗ ಮಾಡುತ್ತಿದ್ದು,

ಪತ್ನಿ ಮತ್ತು ಮಕ್ಕಳು ಬಿಕರನಕಟ್ಟೆಯಲ್ಲಿ ವಾಸ ಮಾಡುತ್ತಿದ್ದಾರೆ.2019ರಲ್ಲಿ ಸೌದಿ ಅರೇಬಿಯಾದಲ್ಲಿ ಈ ಹಿಂದೆ ಕೇಂದ್ರ ಸರ್ಕಾರ ರೂಪಿಸಿದ ಸಿಎಎ (CAA) ಮತ್ತು ಎನ್‌ಆರ್‌ಸಿ(NRC) ಕಾಯ್ದೆಯನ್ನು ಬೆಂಬಲಿಸಿ ಶೈಲೇಶ್‌

ಫೇಸ್‌ಬುಕ್‌ ಪೋಸ್ಟ್‌ (Facebook post) ಹಾಕಿದ್ದರು.ನಂತರ ತಮ್ಮ ಫೇಸ್‌ಬುಕ್‌ ಖಾತೆಯನ್ನು ಅನಾಮಿಕರಿಂದ ಬೆದರಿಕೆ ಬಂದ ಕಾರಣ ಶೈಲೇಶ್‌ ರದ್ದುಪಡಿಸಿದ್ದರು.

ಇದನ್ನೂ ಓದಿ : 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಲ್ಲ : ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಿಯೋನೆಲ್ ಮೆಸ್ಸಿ..!

ಆದರೆ ಅನಾಮಧೇಯ ವ್ಯಕ್ತಿಗಳು ಶೈಲೇಶ್‌ ಹೆಸರಿನಲ್ಲಿ 2020ರ ಫೆಬ್ರವರಿಯಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಮತ್ತು ಆತನ ಜಾತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು.

ತಮ್ಮ ಸ್ನೇಹಿತರಿಗೆ ಮತ್ತು ಮಂಗಳೂರಿನ ಸಂಬಂಧಿಕರಿಗೆ ಈ ವಿಷಯವನ್ನು ಶೈಲೇಶ್‌ ತಿಳಿಸಿದ್ದರು.ಸೌದಿ ಪೊಲೀಸರು ಇದೇ ವೇಳೆ ಶೈಲೇಶ್‌ನನ್ನು ಬಂಧಿಸಿದ್ದರು.

ಈ ಬಗ್ಗೆ ಶೈಲೇಶ್‌ ಪತ್ನಿ ಕವಿತಾ(Kavitha) ಮಂಗಳೂರಿನಲ್ಲಿ ಘಟನೆ ಕುರಿತು ದೂರು ದಾಖಲಿಸಿದ್ದರು ಈ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು ಶೈಲೇಶ್‌ ಹೆಸರಿನಲ್ಲಿ ನಕಲಿ ಖಾತೆ

(Fake Account) ತೆರೆದವರ ಮಾಹಿತಿ ನೀಡುವಂತೆ ಫೇಸ್‌ಬುಕ್‌ ಸಂಸ್ಥೆಗೆ ಪತ್ರ ಬರೆದು ಕೋರಿದ್ದರು.

ಈ ನಡುವೆ ಪೊಲೀಸ್ ತನಿಖೆಯ ನಿಧಾನಗತಿಯನ್ನು ಆಕ್ಷೇಪಿಸಿ ಅರ್ಜಿದಾರರು 2021 ರಲ್ಲಿ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದರು. ಬುಧವಾರ ನಡೆದ ವಿಚಾರಣೆಗೆ ಮಂಗಳೂರು ಪೊಲೀಸ್ ವರಿಷ್ಠ ಕುಲದೀಪ್

ಜೈನ್ (Kuladeep Jain) ಹಾಗೂ ಪ್ರಕರಣದ ತನಿಖಾಧಿಕಾರಿಗಳು ಹಾಜರಾಗಿ ಫೇಸ್ ಬುಕ್ ನ ಅಸಹಕಾರದಿಂದ ಸೂಕ್ತ ತನಿಖೆ ನಡೆಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು.

ಆಗ ನ್ಯಾಯಾಧೀಶರು, ಈ ಬಗ್ಗೆ ಪ್ರಶ್ನಿಸಿದಾಗ ಫೇಸ್ ಬುಕ್ ನ ಪರ ವಕೀಲರು, ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು ಪ್ರಕರಣದ ತನಿಖೆಗೆ ಸರಿಯಾಗಿ ಸಹಕರಿಸದಿದ್ದರೆ ಭಾರತದಲ್ಲಿ ಫೇಸ್ ಬುಕ್ ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದರಿಂದ ಗಾಬರಿಗೊಂಡ ಫೇಸ್‌ಬುಕ್‌ ಪರ ವಕೀಲರು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡಲು ಒಂದು ವಾರ ಕಾಲಾವಕಾಶ ನೀಡುವಂತೆ ಕೋರಿದ್ದಾರೆ.

ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜೂನ್ 22ರೊಳಗೆ ಮಾಹಿತಿ ಸಲ್ಲಿಸಲು ಗಡುವು ನೀಡಿದೆ.

ರಶ್ಮಿತಾ ಅನೀಶ್

Exit mobile version