ಹೆದ್ದಾರಿ ಹಗರಣ ಭಯಾನಕ ! ರಾಷ್ಟ್ರೀಯ ಹೆದ್ದಾರಿ -169 ಕಾಮಗಾರಿಯ ಭೂ ಸ್ವಾಧೀನದಲ್ಲಿ ಭಾರೀ ಗೋಲ್‌ಮಾಲ್‌. ಕೃಷಿಕರಿಗೆ ಅನ್ಯಾಯ, ಜನಪ್ರತಿನಿಧಿಗಳ ದಿವ್ಯ ಮೌನ

Highway land acquisition scam in Mangalore – Karkala in Dakshina Kannada district.

Highway land acquisition scam in Mangalore – Karkala in Dakshina Kannada district. Big corruption in giving relief fund.

ಮಂಗಳೂರು-ಮೂಡಬಿದರೆ- ಕಾರ್ಕಳ ಚತುಷ್ಪಥ ಹೆದ್ದಾರಿ 169ರ ಭೂ ಸ್ವಾಧೀನದಲ್ಲಿ ಭಾರೀ ಹಗರಣ. ಭೂ ಮಾಲೀಕರಿಗೆ ಸೂಕ್ತ ಪರಿಹಾರ ನೀಡದೆ ವಂಚನೆ. ಅಧಿಕಾರಿಗಳ ವಂಚನೆಗೆ ಬೇಸತ್ತು ಹೋಗಿದ್ದಾರೆ ರೈತರು. ರೈತರಿಗೆ ಅನ್ಯಾಯ ಆದ್ರೂ ಜನಪ್ರತಿನಿಧಿಗಳಿಂದ ದಿವ್ಯಮೌನ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರು ರಸ್ತೆ ಯೋಜನೆಯೊಂದರಿಂದ ಕಣ್ಣೀರು ಹಾಕುವ ಹಾಗಾಗಿದೆ. ಇವರ ಈ ನೋವಿನ ಕೂಗಿಗೆ ಕಾರಣ ಏನು ಗೊತ್ತಾ? ಮಂಗಳೂರು-ಮೂಡಬಿದರೆ- ಕಾರ್ಕಳ ಚತುಷ್ಪಥ ಹೆದ್ದಾರಿ ಯೋಜನೆಯಲ್ಲಾಗುತ್ತಿರುವ ಭಾರೀ ಹಗರಣ. ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರೀ ವಂಚನೆ ನಡೆಯುತ್ತಿದೆ. ಇಲ್ಲಿನ ನಿವಾಸಿಗಳಿಗೆ ಅದ್ರಲ್ಲೂ ಮುಖ್ಯವಾಗಿ ಕೃಷಿಕರಿಗೆ ಭಾರೀ ಅನ್ಯಾಯ ಮಾಡಲಾಗುತ್ತಿದೆ.

45 ಕಿಲೋ ಮೀಟರ್‌ ಉದ್ದದ ಮಂಗಳೂರು-ಮೂಡಬಿದರೆ- ಕಾರ್ಕಳ ಚತುಷ್ಪಥ ಹೆದ್ದಾರಿ 169 851.88 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ. ಈ ರಸ್ತೆಯ ನಿರ್ಮಾಣ ಕಾರ್ಯದ ಟೆಂಡರನ್ನು ಭೂಪಾಲ್‌ ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ ಪಡೆದುಕೊಂಡಿದೆ. ಆದ್ರೆ ಈ ಟೆಂಡರನ್ನು ಭೂಸ್ವಾಧೀನ ಪ್ರಕ್ರಿಯೆಯ ಮುನ್ನವೇ ತರಾತುರಿಯಲ್ಲಿ ನೀಡಲಾಗಿದೆ. ಅಲ್ಲದೆ ರೈತರ ಸರಿಯಾದ ಪರಿಹಾರವನ್ನೂ ನಿಗದಿಪಡಿಸದೆ ತರಾತುರಿಯಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಮಾಡುತ್ತಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ರೈತರ ಸಿಟ್ಟಿಗೆ ಮತ್ತೊಂದು ಪ್ರಮುಖ ಕಾರಣ ಏನು ಗೊತ್ತಾ? ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗಳು ರೈತರಿಗೆ ಮಾಡುತ್ತಿರೋ ವಂಚನೆ. ಯಸ್, ನಮ್ಮ ಸರ್ಕಾರ ಕೃಷಿ ಭೂಮಿಗೆ ಸೆನ್ಸ್‌ಗೆ ಬರೀ 27000 ಕೊಡುತ್ತಿದೆ. ಅದೇ ಕನ್ವರ್ಷನ್‌ ಅಂದ್ರೆ ಭೂಪರಿವರ್ತನೆಯಾದ ಭೂಮಿಗೆ 2.68 ರೂಪಾಯಿ ಕೊಡುತ್ತಿದೆ ಗೊತ್ತಾ? ಇದರಿಂದ ರೈತರು ಸಿಟ್ಟಿಗೆದ್ದಿದ್ದಾರೆ. ರೈತರಿಗೆ ನ್ಯಾಯಯುತ ಪರಿಹಾರ ಸಿಗುತ್ತಿಲ್ಲ ಅನ್ನೋ ಕೂಗು ಹೆಚ್ಚಾಗಿದೆ. ತಮಗೆ ನ್ಯಾಯಯುತ ಪರಿಹಾರ ಕೊಡಬೇಕು ಅಂತ ಕೋರಿ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ. ಕೆಲ ರೈತರು ಕೋರ್ಟ್‌ ಮೆಟ್ಟಿಲೇರಿ ಭೂಸ್ವಾಧೀನಕ್ಕೆ ತಡೆಯಾಜ್ಞೆಯನ್ನೂ ತಂದಿದ್ದಾರೆ. ಆದ್ರೂ ಟೆಂಡರ್‌ ಪಡೆದ ಗುತ್ತಿಗೆದಾರರು ಕೆಲ ಭಾಗಗಳಲ್ಲಿ ಬಲವಂತವಾಗಿ ಕಾಮಗಾರಿ ಪ್ರಾರಂಭಿಸಲು ಮುಂದಾಗಿದ್ದಾರೆ. ಇದು ಅನ್ನದಾತನ ಆತಂಕ ಹೆಚ್ಚಿಸಿದೆ.

ಈ ಭೂಸ್ವಾಧೀನ ಪ್ರಕ್ರಿಯೆ ಮತ್ತೊಂದು ಭಾರೀ ಹಗರಣ ನಡೀತಿದೆ. ಅದುವೇ ತರಾತುರಿಯಲ್ಲಿ ಭೂಮಿಯನ್ನು ಕನ್ವರ್ಟ್‌ ಮಾಡಿ ಹಣ ಲೂಟಿ ಮಾಡೋ ಹಗರಣ. ತಮಗೆ ಬೇಕಾದವರಿಗೆ, ಲಂಚ ಕೊಟ್ಟವರಿಗೆ ಕಂದಾಯ ಅಧಿಕಾರಿಗಳು ಭೂ ಪರಿವರ್ತನೆ ಮಾಡಿಕೊಟ್ಟು ಸರ್ಕಾರಕ್ಕೆ ಭಾರೀ ಮೋಸ ಮಾಡುತ್ತಿದ್ದಾರೆ. ಇದರಿಂದ ಬಡ, ಅಸಹಾಯಕ ರೈತರಿಗೆ ಭಾರೀ ಅನ್ಯಾಯ ಆಗ್ತಿದೆ.

ಆದ್ರೆ ಭೂಸ್ವಾಧೀನ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಗೂ ಕಂಪೆನಿಯವರು ಸೇರಿ ರಸ್ತೆ ನಿರ್ಮಾಣ ಹೆಸರಲ್ಲಿ ಭಾರೀ ಹಣ ಲೂಟಿ ಮಾಡಲು ಹೊರಟಿದ್ದಾರೆ. ಹಾಗಾಗಿ ಈ ಭಾಗದ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಶೋಭಾ ಕರಂದ್ಲಾಜೆಯವರು, ಶಾಸಕರು ಸಚಿವರಾದ ಸುನಿಲ್‌ ಕುಮಾರ್‌ ಅವರು ತಕ್ಷಣ ಎಚ್ಚೆತ್ತು ರೈತರಿಗೆ ಆಗುತ್ತಿರೋ ಅನ್ಯಾಯ ಹಾಗೂ ಈ ಯೋಜನೆಯಲ್ಲಾಗುತ್ತಿರೋ ಹಗರಣವನ್ನು ತಡೆಯಲಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಅನ್ನೋದು ವಿಜಯಟೈಮ್ಸ್‌ ಆಗ್ರಹ.

Exit mobile version