ಈ ಕ್ಷಣ ಸುದ್ದಿ : ನ್ಯಾಯಮೂರ್ತಿಗಳ ಭಿನ್ನ ಅಭಿಪ್ರಾಯ ; ತ್ರಿಸದಸ್ಯ ಪೀಠಕ್ಕೆ ಹಿಜಾಬ್‌ ಅರ್ಜಿ ವಿಚಾರಣೆ!

Supremecourt

New Delhi : ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್‌ ತೀರ್ಪು (Hijab Verdict From SC) ಪ್ರಕಟವಾಗಿದ್ದು, ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಾಧೀಶರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿ ಹೇಮಂತ್ ಗುಪ್ತ ಹೈಕೋರ್ಟ್‌ಆದೇಶವನ್ನು ಎತ್ತಿ ಹಿಡಿದಿದ್ದು, ಮೇಲ್ಮನವಿ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ ಆದರೆ ನ್ಯಾಯಮೂರ್ತಿ ಸುಧಾಂಶು ದುಲಿಯಾ, ಹೈಕೋರ್ಟ್‌ಆದೇಶವನ್ನು ರದ್ದು ಪಡಿಸಿದ್ದಾರೆ.

ಹೀಗಾಗಿ ಹಿಜಾಬ್‌ ಅರ್ಜಿಯ (Hijab Verdict From SC)ವಿಚಾರಣೆಯನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಕಳೆದ ವರ್ಷ ಕರಾವಳಿ ಭಾಗದಲ್ಲಿ ಆರಂಭಗೊಂಡಿದ್ದ ಈ ಹಿಜಾಬ್‌ವಿವಾದ ನಂತರ ಇಡೀ ರಾಜ್ಯವನ್ನು ವ್ಯಾಪಿಸಿತ್ತು.

ಹಿಜಾಬ್‌ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಧಾರ್ಮಿಕ ಗುರುತು ಸೂಚಿಸುವ ಬಟ್ಟೆಗಳನ್ನು ಧರಿಸಿಕೊಂಡು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತು.

https://youtu.be/28Ffk640lTU ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸರಿಂದ ಭರ್ಜರಿ ಲೂಟಿ.

ಸರ್ಕಾರದ ಈ ಆದೇಶದ ವಿರುದ್ದ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಮುಸ್ಲಿಂ ಸಂಘಟನೆಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದವು.

ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್‌ನ ತ್ರಿಸದಸ್ಯ ಪೀಠ, “ಹಿಜಾಬ್‌ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆಯಲ್ಲ, ಹೀಗಾಗಿ ಸಮವಸ್ತ್ರ ನಿಯಮ ಪಾಲಿನೆಗಾಗಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಧರಿಸುವಂತಿಲ್ಲ” ಎಂದು ತೀರ್ಪು ನೀಡಿತು.

ಇದಾದ ನಂತರ ಹೈಕೋರ್ಟ್‌ ತೀರ್ಪಿನ್ನು ಪ್ರಶ್ನಿಸಿ, ಕೆಲ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.

ಸುದೀರ್ಘ ವಾದ-ವಿವಾದ ಆಲಿಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ದುಲಿಯಾ ನೇತೃತ್ವದ ನ್ಯಾಯಪೀಠ ಇಂದು ತನ್ನ ಅಂತಿಮ ತೀರ್ಪನ್ನು ನೀಡಿದೆ.

ಇದನ್ನೂ ಓದಿ : https://vijayatimes.com/i-renamed-tippu-express-says-prathap-simha/

ಇನ್ನು ಕರ್ನಾಟಕ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್‌ಮೆಹ್ತಾ ಮತ್ತು ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಾಡಗಿ ಅವರು ವಾದ ಮಂಡಿಸಿದ್ದರು.

ಅರ್ಜಿದಾರರನ್ನು ಹಿರಿಯ ವಕೀಲರಾದ ದುಶ್ಯಂತ್ ದವೆ, ರಾಜೀವ್ ಧವನ್, ಕಪಿಲ್ ಸಿಬಲ್, ಕಾಲಿನ್ ಗೊನ್ಸಾಲ್ವೆಸ್, ದೇವದತ್ತ್ ಕಾಮತ್, ಸಂಜಯ್ ಹೆಗ್ಡೆ, ಸಲ್ಮಾನ್ ಖುರ್ಷಿದ್ ಪ್ರತಿನಿಧಿಸಿದರು. ಸುಪ್ರೀಂಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠ ಸತತ ಹತ್ತು ದಿನಗಳ ಕಾಲ ವಿಚಾರಣೆ ನಡೆಸಿ, ಇಂದು ತನ್ನ ಅಂತಿಮ ತೀರ್ಪು ನೀಡಿದೆ.
Exit mobile version