ಬಸ್‌ ಡ್ರೈವರ್‌ ಮಗ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರೋಚಕ ಕತೆ

ಹಿಮಾಚಲಪ್ರದೇಶ CM ಸುಖವಿಂದರ್‌ ಸಿಂಗ್ ಅವರ ರಾಜಕೀಯ ಪಯಣದ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

Himachal Pradesh : ಹಿಮಾಚಲಪ್ರದೇಶ(MP) ಮುಖ್ಯಮಂತ್ರಿಯಾಗಿ ಸುಖವಿಂದರ್‌ ಸಿಂಗ್ ಸುಖು(HimachalPradesh CM Sukhwinder Singh) ಭಾನುವಾರ ಅಧಿಕಾರ ಸ್ವೀಕರಿಸಿದರು. ಕಾನೂನು ಪದವೀಧರನಾಗಿರುವ ಸುಖವಿಂದರ್ ಅವರ ಒಬ್ಬ ಬಸ್‌ ಡ್ರೈವರ್ ರವರ ಮಗ.

ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಕತೆ ನಿಜವಾಗಲೂ ಕುತೂಹಲ ಮೂಡಿಸುತ್ತೆ. ಅವರ ರಾಜಕೀಯ ಪಯಣದ ರೋಚಕ ಕತೆ ಇಲ್ಲಿದೆ.

ಸುಖವಿಂದರ್ ಸಿಂಗ್ ಸುಖು ಕಾಂಗ್ರೆಸ್‌ನ(Congress) ಹಿಮಾಚಲ ಪ್ರದೇಶ ಘಟಕದ ಮಾಜಿ ಮುಖ್ಯಸ್ಥರಾಗಿದ್ದರು.

ಆದ್ರೆ ಕಾಂಗ್ರೆಸ್‌ ಹಾಲಿ ಅಧ್ಯಕ್ಷ ಮುಖೇಶ್ ಅಗ್ನಿಹೋತ್ರಿಯವರನ್ನು(HimachalPradesh CM Sukhwinder Singh) ಬಿಟ್ಟು ಮಾಜಿ ಅಧ್ಯಕ್ಷರಾದ ಸುಖವಿಂದರ್ ಸಿಂಗ್ ಸುಖು ಅವರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಅವಕಾಶ ನೀಡಿದೆ.

ಮುಖೇಶ್ ಅಗ್ನಿಹೋತ್ರಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದೆ. ಹಿಮಾಚಲದಲ್ಲಿ ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇದೇ ಭಾನುವಾರ ನಡೆಯಿತು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನೂತನ ಮುಖ್ಯಮಂತ್ರಿ ಸುಖು, ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರ ನನ್ನಲ್ಲಿ ಅಚ್ಚರಿ ಮೂಡಿಸಿತ್ತು.

ಇದನ್ನೂ ಓದಿ : https://vijayatimes.com/gujarat-election-narendra-modi/

ನನಗೆ ಈ ಬಗ್ಗೆ ತಿಳಿದೇ ಇರಲಿಲ್ಲ, ಸಂಜೆ 5 ಗಂಟೆಗೆ ಶಿಮ್ಲಾದಲ್ಲಿ ಹೊಸದಾಗಿ ಚುನಾಯಿತ ಶಾಸಕರೊಂದಿಗಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ಸಭೆಯ ಬಳಿಕವಷ್ಟೇ ನನಗೆ ಈ ಸಿಹಿ ಸುದ್ದಿ ಸಿಕ್ಕಿತು ಎಂದು ಹೇಳಿದರು.

ಈ ಹಿಂದೆ ಸುಖುವಿಂದರ್ ರಾಜ್ಯದ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದರು.

ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿದ್ದರು ಮತ್ತು ಹಿಮಾಚಲದಲ್ಲಿ ದಾಖಲೆಯ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಇತ್ತೀಚಿನ ಸಮೀಕ್ಷೆಯಲ್ಲಿ ಸುಖು ಸಿಂಗ್ ಅವರು ಬಿಜೆಪಿಯ ವಿಜಯ್ ಅಗ್ನಿಹೋತ್ರಿ ಅವರನ್ನು 3,363 ಮತಗಳ ಅಂತರದಿಂದ ಮಣಿಸಿದ್ದಾರೆ.

ಕಾಂಗ್ರೆಸ್‌ನ ಮಾಜಿ ರಾಜ್ಯ ಮುಖ್ಯಸ್ಥ ಸುಖವೀಂದರ್ ಸಿಂಗ್ ಸುಖು ಅವರು 11 ಡಿಸೆಂಬರ್ 2022 ರಂದು ಭಾನುವಾರ ಮಧ್ಯಾಹ್ನ 1:30ಕ್ಕೆ ಶಿಮ್ಲಾದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

68 ಅಸೆಂಬ್ಲಿ ಸ್ಥಾನಗಳಲ್ಲಿ 40 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ನಂತರ ಕಾಂಗ್ರೆಸ್ ಬಿಜೆಪಿಯ(bjp) ಜೈರಾಮ್ ಠಾಕೂರ್(Jai Ram Thakur) ಅವರಿಂದ ಅಧಿಕಾರವನ್ನು ಕಿತ್ತುಕೊಂಡಿದೆ.

ಹಿಮಾಚಲದಲ್ಲಿ ಸರ್ಕಾರ ರಚಿಸಲು ಒಂದು ಪಕ್ಷಕ್ಕೆ 35 ಸ್ಥಾನಗಳು ಬೇಕಾಗಿದ್ದವು ಮತ್ತು ಬಿಜೆಪಿಯಲ್ಲಿ 25 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಇದನ್ನೂ ನೋಡಿ : https://fb.watch/hkdrFJokDj/ COVER STORY | ಬದುಕಲು ಬಿಡಿ !ಅಂತ ಬೇಡಿ ಬೇಡಿ ಕೇಳುತ್ತಿದ್ದಾರೆ ಕರುನಾಡಿನ ಆದಿವಾಸಿಗಳು.

ಸುಖವಿಂದರ್ ಸಿಂಗ್ ಸುಖು 27 ಮಾರ್ಚ್ 1964 ರಂದು ಹಮೀರ್‌ಪುರ ಜಿಲ್ಲೆಯ ನಾದೌನ್ ತೆಹಸಿಲ್‌ನ ಸೆರಾ ಗ್ರಾಮದಲ್ಲಿ ಜನಿಸಿದವರು.

ಇವರ ತಂದೆ ರಶಿಲ್ ಸಿಂಗ್(Rashil Singh) ಶಿಮ್ಲಾದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿದ್ದರು, ಅವರ ತಾಯಿ ಸಂಸಾರ್ ದೇಯಿ ಗೃಹಿಣಿಯಾಗಿದ್ದಾರೆ. ಸುಖವಿಂದರ್‌ ರವರು ರಾಜಕೀಯ ಕಡೆಗೆ ಕಾಲಿಟ್ಟು ಇದೀಗ ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿದ್ದಾರೆ.

Exit mobile version