Visit Channel

ಎಫ್ಐಆರ್ ದಾಖಲಾಗುತ್ತಿದ್ದಂತೆ ಹಿತೇಶಾ ಚಂದ್ರಾನಿ ನಾಪತ್ತೆ!

Screenshot_2021-03-15-21-49-28-173_com.roidapp.photogrid

ಬೆಂಗಳೂರು, ಮಾ. 17: ಭಾರೀ ಸುದ್ಧಿಯಾಗಿದ್ದ  ಜೊಮಾಟೋ ಡೆಲಿವರಿ ಬಾಯ್‌  ಮತ್ತು ಹಿತೇಶಾ ಪ್ರಕರಣದಲ್ಲಿ ಇದೀಗ ಹಿತೇಶಾ ಬೆಂಗಳೂರು ಬಿಟ್ಟು ಬೇರೆಡೆ ತೆರಳಿದ್ದಾಗಿ ತಿಳಿದು ಬಂದಿದೆ.  ಜೊಮೆಟೋ ಡೆಲಿವರಿ ಬಾಯ್ ಮೇಲೆ ಹಲ್ಲೆ ಆರೋಪ ಮಾಡಿದ್ದ ಹೊರ ರಾಜ್ಯದಿಂದ ಬಂದ  ಹಿತೇಶಾ ಚಂದ್ರಾನಿ ವಿರುದ್ದ ಎಫ್‌ಐಆರ್ ದಾಖಲು ಆಗುತ್ತಿದ್ದ ಹಾಗೆಯೇ ಬೆಂಗಳೂರು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಜೋಮೋಟೋ ಡೆಲಿವರಿ ಬಾಯ್ ಕಾಮರಾಜ್ ಸೋಮವಾರ ಆಕೆಯ ವಿರುದ್ಧ ಪ್ರತಿ-ದೂರು ದಾಖಲಿಸಿದ ನಂತರ ಪೊಲೀಸರು ಆಪಾದಿತ ಸಂತ್ರಸ್ತೆ ಹಿತೇಶಾ ಚಂದ್ರಾನಿಯನ್ನು ವಿಚಾರಣೆಗಾಗಿ ಸಂಪರ್ಕಿಸಿದಾಗ ಈ ವಿಚಾರ  ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಡೆಲಿವರಿ ಬಾಯ್ ಕಾಮರಾಜ್ ಅವರ ವಿರುದ್ದ ಹಿತೇಶಾ ಚಂದ್ರಾನಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಂತ ದೂರು ನೀಡಿದ್ದರು, ಇದು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ದೂರಿನ ಸಂಬಂಧ ಡೆಲಿವರಿ ಬಾಯ್ ಕಾಮರಾಜ್ ಅವರು ಪೊಲೀಸರ ಮುಂದೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ಇದಲ್ಲದೇ ಅನೇಕ ಮಂದಿ ಡೆಲಿವರಿ ಬಾಯ್ ಕಾಮರಾಜ್ ಅವರ ಪರವಾಗಿ ಮಾತನಾಡಿ, ಅವರಿಗೆ ನ್ಯಾಯಾ ಒದಗಿಸಬೇಕು, ಜೊತೆಗೆ ಪ್ರಕರಣ ತನಿಖೆ ಸರಿಯಾಗಿ ಆಗಬೇಕು ಅಂತ ಒತ್ತಾಯಿಸಿದ್ದರು. ಕಾಮರಾಜ್‌ ಅವರ ಪರವಾಗಿ ನಿಂತ ಕನ್ನಡ ಪರ ಸಂಘಟನೆಗಳೂ ಘಟನೆಯ ಸತ್ಯಾಸ್ತತ್ಯಯತೆ ಹೊರ ಬರಬೇಕು ಅಂತ ಹಿತೇಶಾ ಚಂದ್ರಾನಿ ವಿರುದ್ದ ದೂರು ನೀಡಿದ್ದರು.

ಈ ವೇಳೆ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು, ‘ಕಾಮರಾಜ್ ತನ್ನ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ ನಂತರ, ನಾವು ವಿಚಾರಣೆಗೆ ಸಂಬಂಧಿಸಿದಂತೆ ಹಿತೇಶಾಳನ್ನು ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಕರೆದಾಗ . ಅವರು ಬೆಂಗಳೂರು ನಗರವನ್ನು ಬಿಟ್ಟು ಮಹಾರಾಷ್ಟ್ರದ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದಾರೆ ಎಂಬ ವಿಚಾರವನ್ನು  ಆಕೆ ಹೇಳಿದ್ದಾರೆ ಅಂತ ತಿಳಿಸಿದ್ದಾರೆ.

Latest News

atm
ಮಾಹಿತಿ

ATM ಬಳಕೆದಾರರು ಓದಲೇಬೇಕಾದ ಸುದ್ದಿ ; RBI ನಿಯಮಗಳ ಬಗ್ಗೆ ಸರಳವಾಗಿ ತಿಳಿಯಿರಿ

ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ, ಬೇರೆ ಬ್ಯಾಂಕ್ ನ ಎಟಿಎಂಗಳಲ್ಲಿ ಮೆಟ್ರೋ ಸಿಟಿಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು.

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).