ತಲೆನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ತಲೆನೋವು ನಿವಾರಿಸಲು ಈ ಮನೆಮದ್ದನ್ನು ಪ್ರಯತ್ನಿಸಿ

Bengaluru :ಬಹಳಷ್ಟು ಜನರು ಒತ್ತಡದ ಜೀವನದಿಂದಾಗಿ ಪ್ರತಿದಿನ ತಲೆನೋವಿನ ಸಮಸ್ಯೆಯಿಂದ (Head Ache) ಬಳಲುತಿದ್ದು, (Home remedy for Headache) ಇದು ದೈನಂದಿನ ಚಟುವಟಿಕೆಯಲ್ಲಿ

ಸಾಕಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ತಲೆನೋವು ತಕ್ಷಣಕ್ಕೆ ನಿವಾರಣೆಯಾಗಲು ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಅತಿಯಾದ ಮಾತ್ರೆ ಸೇವನೆಯಿಂದ ಆರೋಗ್ಯದ ಮೇಲೆ

ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಆದ್ದರಿಂದ ಮಾತ್ರೆ ತಿನ್ನದೇ ತಲೆನೋವು ನಿವಾರಿಸಲು ಕೆಲವು ಸುಲಭವಾಗಿ ಮನೆಮದ್ದುಗಳನ್ನು ಬಳಸಿ ಉತ್ತಮ ಫಲಿತಾಂಶ ಕಂಡುಕೊಳ್ಳಿ.

ಸುಲಭ ವಿಧಾನಗಳು: Easy Methods

ಬಹಳಷ್ಟು ನೀರು ಕುಡಿಯಿರಿ: (Drink more Water) ನಿರ್ಜಲೀಕರಣವು ಅನೇಕ ಜನರಲ್ಲಿ ತಲೆನೋವು ಉಂಟುಮಾಡುತ್ತದೆ ಆದ್ದರಿಂದ ಸಾಕಷ್ಟು ನೀರು ಕುಡಿಯುವುದು ಅಗತ್ಯ. ಪ್ರತಿದಿನ 8-10

ಲೋಟ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಕೊರತೆಯಿಂದಲೂ ತಲೆನೋವು ಉಂಟಾಗುತ್ತದೆ, ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ ಮತ್ತು ತಲೆನೋವಿನ ಸಂದರ್ಭದಲ್ಲಿಯೂ ನೀರನ್ನು

ಕುಡಿಯುವುದು ನಿಮಗೆ ಪ್ರಯೋಜನಕಾರಿಯಾಗಿದೆ. ನೀರು ತಲೆನೋವಿನಿಂದ (Home remedy for Headache) ತ್ವರಿತ ಪರಿಹಾರವನ್ನು ನೀಡುತ್ತದೆ.

  1. ಐಸ್ ಪ್ಯಾಕ್: (Ice Pack)
    ಐಸ್ ಪ್ಯಾಕ್ ತಲೆನೋವು ನಿವಾರಿಸಲು ಸಹಾಯ ಮಾಡುವುದಲ್ಲದೆ ಇದಕ್ಕಾಗಿ ಹಾಸಿಗೆಯಲ್ಲಿ ಮಲಗಿಕೊಳ್ಳಿ ಮತ್ತು ಕಣ್ಣುಗಳು ಮತ್ತು ಹಣೆಯ ಮೇಲೆ ಕೋಲ್ಡ್ ಕಂಪ್ರೆಸ್ ಅಥವಾ ಒದ್ದೆಯಾದ

    ಬಟ್ಟೆಯನ್ನು ಇರಿಸಿ. ಇದಕ್ಕಾಗಿ ಸಣ್ಣ ಐಸ್ ತುಂಡುಗಳನ್ನು ಸಹ ಬಳಸಬಹುದು. ಈ ಐಸ್ ಕ್ಯೂಬ್‌ಗಳಿಂದ ಹಣೆ ಮತ್ತು ನೆತ್ತಿಯನ್ನು 10 ನಿಮಿಷಗಳ ಕಾಲ ಮಸಾಜ್ ಮಾಡಬಹುದು . ಹೀಗೆ

    ಮಾಡುವುದರಿಂದ ತಲೆನೋವಿನಿಂದ ಬೇಗ ಪರಿಹಾರ ಸಿಗುತ್ತದೆ.
  2. ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಇರಿಸಿ: (Keep Feet in hot water)

    ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ಅದ್ದಿ ಕುಳಿತುಕೊಳ್ಳುವುದು ಕೆಲವೊಮ್ಮೆ ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ. ಬೆಚ್ಚಗಿನ ನೀರು ತಲೆಗೆ ರಕ್ತ ಪೂರೈಕೆಗೆ ಸಹಾಯ ಮಾಡುತ್ತದೆ,

    ಇದು ತಕ್ಷಣದ ತಲೆನೋವು ಪರಿಹಾರವನ್ನು ನೀಡುತ್ತದೆ.
  1. ಕೋಣೆಯ ದೀಪಗಳನ್ನು ಮಂದಗೊಳಿಸಿ: (Lighten the lamp in room)

    ಅನೇಕ ಸಂದರ್ಭಗಳಲ್ಲಿ ಕೋಣೆಯಲ್ಲಿನ ಬೆಳಕು ತಲೆನೋವನ್ನು ಜಾಸ್ತಿಗೊಳಿಸಬಹುಡಗಿದ್ದು, ಈ ಸಮಯದಲ್ಲಿ ಮೊಬೈಲ್ ಅಥವಾ ಕೋಣೆಯ ಪ್ರಖರ ಬೆಳಕು ಕೂಡ ನಿಮ್ಮನ್ನು ತೊಂದರೆಗೊಳಿಸಬಹುದು.

    ಕೋಣೆಯಲ್ಲಿನ ದೀಪಗಳನ್ನು ಆಫ್​ ಮಾಡಿ ಅಥವಾ ಮಂದಗೊಳಿಸುವುದರಿಂದ ಕೆಲವೊಮ್ಮೆ ತಲೆನೋವು ನಿವಾರಣೆಯಾಗುತ್ತದೆ.
  2. ಸಾರಯುಕ್ತ ತೈಲದಿಂದ ಮಸಾಜ್: ( use good oil to hair)
    ಪುದೀನಾ ಮತ್ತು ರೋಸ್ಮರಿಗಳಂತಹ ಸಾರಭೂತ ತೈಲಗಳು ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ತೈಲಗಳ ಬಳಕೆಯು ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುವುದಲ್ಲದೆ ರಕ್ತ

    ಪರಿಚಲನೆ ಹೆಚ್ಚಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ತಲೆನೋವು ನಿವಾರಿಸುತ್ತದೆ.
  3. ಬಹಳಷ್ಟು ನಿದ್ರೆ ಮಾಡಬೇಕು: ( sleep well )

    ಇನ್ನು ತಲೆನೋವಿನ ಸಮಯದಲ್ಲಿ ನಿದ್ದೆ ಬರುವುದೇ ಸ್ವಲ್ಪ ಕಷ್ಟ. ಆದರೆ ನೀವು ಕೋಣೆಯಲ್ಲಿ ದೀಪಗಳನ್ನು ಆಫ್​​ ಮಾಡಿ ಮಲಗಲು ಪ್ರಯತ್ನಿಸಿದರೆ ತಲೆನೋವಿನಿಂದ ಖಂಡಿತವಾಗಿಯೂ ಪರಿಹಾರವನ್ನು

    ಪಡೆಯಬಹುದಾಗಿದೆ.

    ಇದನ್ನು ಓದಿ: ಸಂಸತ್ ಸ್ಮೋಕ್ ಬಾಂಬ್ ಪ್ರಕರಣ: ಆರೋಪಿ ಮನೋರಂಜನ್ ಯಾರು? ಆತನ ಹಿನ್ನೆಲೆ ಏನು ?
Exit mobile version