ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸೋಕೆ ಇವುಗಳನ್ನ ತಪ್ಪದೇ ಸೇವಿಸಿ

ನಿಮ್ಮ ದೇಹಾರೋಗ್ಯಕ್ಕೆ (Body Health) ನೀವೆ ಡಾಕ್ಟರ್ ಆಗಬೇಕು, ಗಾಳಿ, ಬೆಳಕಿಗೆ ಮೈಯೊಡ್ಡಬೇಕು, ವ್ಯಾಯಾಮ ಮಾಡಬೇಕು ಇದರಿಂದ ದೇಹ ವಿಕಸನದ ಜೊತೆಗೆ ಮನಸ್ಸಿಗೆ ಉಲ್ಲಾಸವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ವ್ಯಾಯಾಮ ಮಾಡಿದ್ರೆ, ಒಳ್ಳೆ ಊಟ ಮಾಡಿದ್ರೆ ಸಾಕಾ ಅಂದ್ರೆ ಇಲ್ಲ ನಿಮ್ಮ ದಣಿವಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯೂ ಕಾರಣವಾಗಿರಬಹುದು.

ನಿಮ್ಮ ದೇಹಕ್ಕೆ ಸರಿಯಾದ ನಿದ್ರೆಯ (sleep) ನಂತರವೂ ಮತ್ತೆ ಮತ್ತೆ ದಣಿವಾಗುತ್ತಿರುವುದನ್ನು ಗಮನಿಸಿದ್ದಸೀರಾ, ಇದು ರಕ್ತದಲ್ಲಿ ಹಿಮೋಗ್ಲೋಬಿನ್ (Hemoglobin) ಪ್ರಮಾಣ ಕಡಿಮೆಯಾಗಿರುವುದಕ್ಕೆ ಸೂಚನೆ ನಿಡುತ್ತಿರಬಹುದು. ದೇಹಾದ್ಯಂತ ಕೆಂಪುರಕ್ತ ಕಣಗಳ ಜೊತೆಗೆ ಆಕಿಜನ್ ಸಾಗಿಸುವ ಈ ಹಿಮೋಗ್ಲೋಬಿನ್ ಪ್ರಮಾಣ ಮುಖ್ಯವಾಗಿರುತ್ತದೆ. ಇದು ಕಡೆಮಯಾದರೆ ತಲೇನೋವು, ಉಸಿರಾಟದ ಸಮಸ್ಯೆ ಹೀಗೆ ಹಲವು ದೌರ್ಬಲ್ಯಗಳು ಕಾಣಿಸಿಕೊಳ್ಳುತ್ತದೆ.

ನಿವು ಸೇವಿಸುತ್ತಿರುವ ಆಹಾರ (Food) ರುಚಿಯಾಗಿಯೂ ಶುಚಿಯಾಗಿಯೂ ಇರಬಹುದು ಆದರೆ ದೇಹದ ಅದರಲ್ಲೂ ರಕ್ತಕ್ಕೆ ಇಂಧನ ಪೂರೈಸದಿದ್ದರೆ ಅದು ಸಾಕಾಗುವುದಿಲ್ಲ. ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಕಬ್ಬಿಣಾಂಶ ಇರುವ ಆಹಾರ ಸೇವಿಸುವುದು ಬಹಳ ಮುಖ್ಯವಾಗುತ್ತದೆ. ದಿನನಿತ್ಯವೂ ನಿಗಧಿತ ಪ್ರಮಾಣದಲ್ಲಿ ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಿ ರಕ್ತದ ಸಮತೋಲನ ಕಾಯ್ದುಕೊಳ್ಳಲಿದೆ.

ಡೇಟ್ಸ್ ಅಥವಾ ಒಣ ಖರ್ಜೂರ (Dry dates) ಕಬ್ಬಿಣಾಂಶ (Iron) ಇರುವುದರಿಂದ ಇವುಗಳನ್ನು ಸೇವಿಸುವುದು, ಇವುಗಳ ವಿಟಮಿನ್ ಸಿ, ವಿಟಮಿನ್ ಬಿ (Vitamin C, Vitamin B) ಅಂಶಗಳು ಹಿಮೋಗ್ಲೀಬಿನ್ಗೆ ಸಹಕಾರಿ. ಧಾನ್ಯಗಳು ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲಿದೆ, ರಾಗಿ ಪರಿಣಾಮಕಾರಿ, ನಿತ್ಯವ ಸೇವೆನೆ ದೇಹದ ರಕ್ತಚಲನೆ ವ್ಯವಸ್ಥೆಗೆ ಹುರುಪು ನೀಡಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಬಿಳಿ ಎಳ್ಳು ಕೂಡ ಕೆಂಪುರಕ್ತಕಣಗಳ (red blood cells) ಜೀವ ತುಂಬಲಿವೆ, ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಕಬ್ಬಿಣಾಂಶ ಇರುವ ಆಹಾರ ಪದಾರ್ಥಗಳ ಸೇವನೆ ಅಗತ್ಯವಾಗಿದ್ದು, ಉತ್ತಮ ತಿಳುವಳಿಕೆಯ ಆಹಾರ ಸೇವನೆ ಪದೇ ಪದೇ ಆರೋಗ್ಯ ಕೈಕೊಡುವುದನ್ನು ತಡೆಯುತ್ತದೆ.

Exit mobile version