How to Make Sabudana Idli: ಬೆಳಿಗ್ಗೆ ಏನು ತಿಂಡಿ ಮಾಡೋದು ಎಂದು ಯೋಚನೆ ಮಾಡ್ತಾ ಇದ್ದೀರಾ? ಯಾವಾಗಲೂ (How To Make Sabudana Idli) ಅಕ್ಕಿ ಇಡ್ಲಿ, ರವೆ ಇಡ್ಲಿ ತಿಂದು
ಬೇಜಾರಾಗಿ ನಾಲಿಗೆಗೆ ಹೊಸ ಇಡ್ಲಿ ರುಚಿ ನೋಡಬೇಕು ಅಂತಿದ್ದರೆ ಈ ಮೃದುವಾದ, ರುಚಿಕರವಾದ ಸಬ್ಬಕ್ಕಿ ಇಡ್ಲಿ ಮಾಡಿ.ಇದನ್ನು ಮಾಡಲು ತುಂಬಾ ಸಮಯ ಸಹ ಬೇಕಾಗಿಲ್ಲ. ಅಕ್ಕಿ ನೆನೆಸಿಡಬೇಕು,
ರುಬ್ಬಬೇಕು ಎನ್ನುವ ಟೆನ್ಶನ್ (Tension) ಇಲ್ಲದೆ ಫಟಾಪಟ್ ಅಂತಾ ಕೇವಲ 20 ನಿಮಿಷಗಳಲ್ಲಿ (How To Make Sabudana Idli) ರುಚಿಯಾದ ಸಬ್ಬಕ್ಕಿ ಇಡ್ಲಿ ಮಾಡಬಹುದು.
ಇಡ್ಲಿ (Idli) ಜೊತೆಗೆ ಖಾರ ಗೊಜ್ಜು ಸಹ ತುಂಬಾ ಚೆನ್ನಾಗಿರುತ್ತದೆ. ಚಟ್ನಿ (Chutney), ಸಾಂಬಾರ್ ಮಾಡುವ ಟೈಂ ಇಲ್ಲದಿದ್ದಾಗ 4 ಪದಾರ್ಥಗಳಲ್ಲಿ 1 ನಿಮಿಷದಲ್ಲಿ ಸಬ್ಬಕ್ಕಿ ಇಡ್ಲಿಗೆ ಮತ್ತಷ್ಟು ರುಚಿ
ಕೊಡುವಂತಹ ಖಾರ ಗೊಜ್ಜು ಮಾಡಬಹುದು. ಸಬ್ಬಕ್ಕಿ ಇಡ್ಲಿ-ಖಾರ ಗೊಜ್ಜು ಹೇಗೆ ಮಾಡುವುದು ಅಂತ ನೋಡೋಣ..
ಸಬ್ಬಕ್ಕಿ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು ಸಬ್ಬಕ್ಕಿ – 1ಕಪ್, ಮೊಸರು – 1ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿಸೊಪ್ಪು – ಸ್ವಲ್ಪ, ತುಪ್ಪ – ಅಗತ್ಯವಿರುವಷ್ಟು, ಅರ್ಧ ಕಪ್ ಸಣ್ಣದಾಗಿ ಹಚ್ಚಿರುವ
ಕೊತ್ತಂಬರಿಸೊಪ್ಪು ಹಾಕಿ ಮಿಕ್ಸ್ ಮಾಡಿ ಇಡ್ಲಿ ಹಿಟ್ಟನ್ನು ರೆಡಿ ಮಾಡಿಕೊಳ್ಳಬೇಕು. ಇಡ್ಲಿ- ಪಾತ್ರೆ ಬಿಸಿಯಾಗುವಷ್ಟರಲ್ಲಿ ಇಡ್ಲಿ ತಟ್ಟೆಗಳಿಗೆ ತುಪ್ಪ ಸವರಿಕೊಂಡು ಸಬ್ಬಕ್ಕಿ (Sabudana) ಇಡ್ಲಿ ಹಿಟ್ಟನ್ನು ಹಾಕಿಕೊಂಡು
ಇಡ್ಲಿ ಪಾತ್ರೆಯಲ್ಲಿಟ್ಟು 8-10 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು.
ನಂತರ ಇಡ್ಲಿಗಳನ್ನು ತೆಗೆದಿಟ್ಟುಕೊಂಡರೆ ಸಾಫ್ಟ್ ಆದ ಸಬ್ಬಕ್ಕಿ ಇಡ್ಲಿ ತಿನ್ನಲು ರೆಡಿಯಾಗುತ್ತದೆ. ಇದು ಸಾಮಾನ್ಯವಾದ ಅಕ್ಕಿ ಇಡ್ಲಿಗಿಂತ ತುಂಬಾ ಟೇಸ್ಟಿಯಾಗಿರುತ್ತದೆ. ಖಾರ ಗೊಜ್ಜುಗೆ ಬೇಕಾಗುವ ಸಾಮಾಗ್ರಿಗಳು
ಹಾಗು ಸಬ್ಬಕ್ಕಿ ಇಡ್ಲಿಗಳು ಎಷ್ಟು ತಿಂದರೂ ರುಚಿಗೆ ಮತ್ತಷ್ಟು ತಿನ್ನಬೇಕು ಎನಿಸುತ್ತದೆ. ಸಬ್ಬಕ್ಕಿ ಇಡ್ಲಿ ಜೊತೆ ಕಾಂಬಿನೇಷನ್ (Combination) ಆಗಿ ಕಾಯಿ ಚಟ್ನಿ, ಟೊಮೆಟೋ ಚಟ್ನಿ, ಸಾಂಬಾರು ಯಾವುದೇ
ಪದಾರ್ಥವಾದರೂ ತುಂಬಾ ರುಚಿಯಾಗಿರುತ್ತದೆ.
ನೀವು ನಾಳೆ ಬೆಳಿಗ್ಗೆ ಏನು ತಿಂಡಿ ಮಾಡೋದು ಎಂದು ಯೋಚನೆ ಮಾಡ್ತಾ ಇದ್ದೀರಾ? ಹಾಗಾದ್ರೆ ನಾವು ಇಲ್ಲಿ ನೀಡಿರುವ ರೆಸಿಪಿಯನ್ನು ಮಾಡಿ ನಿಜಕ್ಕೂ ತುಂಬಾ ಚೆನ್ನಾಗಿರುತ್ತದೆ. ಒಂದು ಹೊಸ ರುಚಿ ತಿಂದ
ಖುಷಿಯೂ ನಿಮ್ಮದಾಗುತ್ತದೆ.
ಇದನ್ನು ಓದಿ: ಚುನಾವಣಾ ಬಾಂಡ್ ಮೂಲಕ ಹಣ ಸಂದಾಯ ಮಾಡಿದವರಿಗೆ ಸರ್ಕಾರಿ ಟೆಂಡರ್:ಡಾ ಪರಕಾಲ ಪ್ರಭಾಕರ್