ನಿರಂತರವಾಗಿ ಮನೆಯಲ್ಲಿಯೇ ರಕ್ತದೊತ್ತಡ ಮಾನಿಟರ್ ಮಾಡುವುದು ಎಷ್ಟು ಮುಖ್ಯ ಗೊತ್ತಾ?

ಪ್ರಸಕ್ರ ಕಾಲದಲ್ಲಿ ಜನರನ್ನು ಅತಿಯಾಗಿ ಕಾಡುತ್ತಿರುವಂತಹ ಆರೋಗ್ಯ ಸಮಸ್ಯೆ ಎಂದರೆ ಅದು ಅಧಿಕ ರಕ್ತದೊತ್ತಡ. ಆಧುನಿಕ ಜೀವನ ಶೈಲಿ, ಒತ್ತಡದ ಬದುಕು, ಬಿಡುವಿಲ್ಲದ ಕೆಲಸ-ಕಾರ್ಯಗಳು, ದುರಭ್ಯಾಸಗಳು ಇವೆಲ್ಲದರುಗಳ ಫಲವೇ ಈ ಅಧಿಕ ರಕ್ತದೊತ್ತಡ. ಇದರಿಂದ ಕ್ಷಣ ಮಾತ್ರದಲ್ಲಿ ಜೀವ ಕಳೆದುಕೊಂಡಿರುವವರನ್ನು ನಾವು-ನೀವು ಕಂಡಿರುತ್ತೇವೆ. ಆದರೆ ಈ ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಿಸಿದರೆ, ಅಪಾಯದ ಮಟ್ಟ ಕಡಿಮೆಯಾಗುತ್ತದೆ. ಈ ನಿಯಂತ್ರಣ ಸ್ವಯಂ ನಿಮ್ಮಿಂದಲೇ, ನಿಮ್ಮ ಮನೆಯಿಂದಲೇ ಆರಂಭವಾಗಬೇಕು. ಅದಕ್ಕಾಗಿ ನಿಮ್ಮ ರಕ್ತದೊತ್ತಡವನ್ನು ಪದೇ ಪದೇ ಮನೆಯಲ್ಲಿಯೇ ಮೇಲ್ವಿಚಾರಣೆ ಮಾಡುವುದು ತುಂಬಾ ಮುಖ್ಯ. ಈ ಮೇಲ್ವಿಚಾರಣೆಯು ನಿಮಗೆ ಮತ್ತು ನಿಮ್ಮ ವೈದ್ಯರಿಗೆ ಬದಲಾವಣೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟದಲ್ಲಿಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ಅದನ್ನು ಹೇಗೆ ಮಾಡಬೇಕೆಂಬುದು ಎಂಬ ಮಾಹಿತಿ ನಿಮಗಾಗಿ.

ರಕ್ತದೊತ್ತಡ ಮೇಲ್ವಿಚಾರಣೆಯನ್ನು ಮನೆಯಲ್ಲಿ ನಿರ್ವಹಿಸಲು ಸಲಹೆಗಳು ಇಲ್ಲಿವೆ:

ನಿಮ್ಮ ರಕ್ತದೊತ್ತಡವನ್ನು ಮನೆಯಲ್ಲಿಯೇ ಮೇಲ್ವಿಚಾರಣೆ ಮಾಡುವುದು ಹೇಗೆ?
ನಿಮ್ಮ ರಕ್ತದೊತ್ತಡವನ್ನು ಅಳೆಯಲು, ಮೊದಲು ರಕ್ತದೊತ್ತಡ ಮಾನಿಟರ್ ಅನ್ನು ಖರೀದಿಸಬೇಕಾಗುತ್ತದೆ. ಇವುಗಳು ಹೆಚ್ಚಿನ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯ್ವಿರುತ್ತದೆ. ಮಣಿಕಟ್ಟಿನಲ್ಲದೆ ತೋಳಿಗೆ ಹೊಂದಿಕೊಳ್ಳುವ ಮಾನಿಟರ್ ಅನ್ನು ನೀವು ಖರೀದಿಸಬೇಕು. ಈ ಮಾನಿಟರ್ ಅನ್ನು ನಿಮ್ಮ ವೈದ್ಯರ ಬಳಿ ತಂದು ತೋರಿಸಿ, ಅದು ನಿಮಗೆ ಸೂಕ್ತವಾದುದಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಮನೆಯಲ್ಲಿ ನಿಮ್ಮ ರಕ್ತದೊತ್ತಡ ಮಾನಿಟರ್ ಅನ್ನು ಹೊಂದಿದ್ದರೆ, ನಿಮ್ಮ ರಕ್ತದೊತ್ತಡವನ್ನು ಅಳೆಯುವ ಮೊದಲು ಅನುಸರಿಸಬೇಕಾದ ಕೆಲವು ಸರಳ ಮಾರ್ಗಸೂಚಿಗಳಿವೆ:

ಪರೀಕ್ಷೆ ಮಾಡುವ 30 ನಿಮಿಷಗಳ ಮುಂಚೆ ತಂಬಾಕು, ಕೆಫೀನ್ ಮತ್ತು ವ್ಯಾಯಾಮವನ್ನು ಮಾಡಬೇಡಿ.
ನಿಮ್ಮ ಪಾದಗಳು ನೆಲಕ್ಕೆ ತಾಗುವ ಹಾಗೇ ಕುಳಿತು ಕನಿಷ್ಠ 5 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ.
ಮಾನಿಟರಿಂಗ್ ಕಫ್ ಅನ್ನು ಬರೀ ಚರ್ಮದ ಮೇಲೆ ಬಿಗಿಯಾಗಿ ಹಾಕಿ.
ನಿಮ್ಮ ರಕ್ತದೊತ್ತಡವನ್ನು 2 ಅಥವಾ 3 ಬಾರಿ ಅಳೆಯಿರಿ ಮತ್ತು ನಿಮ್ಮ ದಾಖಲೆಗಳಿಗಾಗಿ ಸರಾಸರಿ ಸಂಖ್ಯೆಯನ್ನು ಬಳಸಿ.
ಮೊಣಕೈಗಿಂತ ಮೇಲಿರುವ ನಿಮ್ಮ ತೋಳಿನ ಮೇಲೆ ರಕ್ತದೊತ್ತಡವನ್ನು ನೀವು ಯಾವಾಗಲೂ ಅಳೆಯಬೇಕು.

ನಿಮ್ಮ ರಕ್ತದೊತ್ತಡ ಮಾಪನಗಳು ಎರಡು ಸಂಖ್ಯೆಗಳನ್ನು ಒಳಗೊಂಡಿರುತ್ತವೆ:

ಸಿಸ್ಟೊಲಿಕ್ (ಉನ್ನತ ಸಂಖ್ಯೆ) = ಹೃದಯ ಬಡಿದಾಗ ರಕ್ತನಾಳಗಳಲ್ಲಿನ ಒತ್ತಡ ಡಯಾಸ್ಟೊಲಿಕ್ (ಕೆಳಗಿನ ಸಂಖ್ಯೆ) = ಹೃದಯ ಬಡಿತಗಳ ನಡುವೆ ವಿಶ್ರಾಂತಿ ಪಡೆದಾಗ ರಕ್ತನಾಳಗಳಲ್ಲಿನ ಒತ್ತಡ

ರಕ್ತದೊತ್ತಡದ ಸರಾಸರಿ ಸಂಖ್ಯೆ:
60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ, ಸಿಸ್ಟೊಲಿಕ್ ಸಂಖ್ಯೆ 150 ಕ್ಕಿಂತ ಕಡಿಮೆಯಿರಬೇಕು ಮತ್ತು ಡಯಾಸ್ಟೊಲಿಕ್ ಸಂಖ್ಯೆ 90 ಕ್ಕಿಂತ ಕಡಿಮೆಯಿರಬೇಕು.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಲಹೆಗಳು:
ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ, ಆದರೆ ಅದನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು:

ನಿಮ್ಮ ಔಷಧಿಯನ್ನು ನಿರ್ದೇಶಿಸಿದಂತೆ ತೆಗೆದುಕೊಳ್ಳಬೇಕು
ಸಾಕಷ್ಟು ತಾಜಾ ಹಣ್ಣುಗಳು ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬೇಕು.

ಸ್ಯಾಚುರೇಟೆಡ್ ಕೊಬ್ಬನ್ನು ಮಿತಿಗೊಳಿಸಬೇಕು
ಉಪ್ಪು ಮತ್ತು ಸೋಡಿಯಂ ಅನ್ನು ಕಡಿಮೆಮಾಡಿ
ತಂಬಾಕು ತ್ಯಜಿಸಿ

ಆಲ್ಕೋಹಾಲ್ ಮತ್ತು ಕೆಫೀನ್ ಅನ್ನು ಮಿತಿಗೊಳಿಸಿದರೆ ಉತ್ತಮ
ನಿಮಗೆ ಅಗತ್ಯವಿದ್ದರೆ ತೂಕವನ್ನು ಕಳೆದುಕೊಳ್ಳಿ
ನಿಯಮಿತ ವ್ಯಾಯಾಮ ಮಾಡಬೇಕು
ಒತ್ತಡವನ್ನು ನಿಯಂತ್ರಿಸಿ.

ನಿಮ್ಮ ರಕ್ತದೊತ್ತಡವನ್ನು ಮನೆಯಲ್ಲಿ ಏಕೆ ಟ್ರ್ಯಾಕ್ ಮಾಡಬೇಕು?:
ಸಮಯ ಕಳೆದ ಹಾಗೆ ಅಥವಾ ವಯಸ್ಸು ಕಳೆದಂತೆ ನಿಮ್ಮ ರಕ್ತದೊತ್ತಡ ಬದಲಾಗುವುದು ಸಹಜ. ಆದರೆ ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದು, ಚಿಕಿತ್ಸೆ ನೀಡದೆ ಉಳಿದಿದ್ದರೆ, ಕೆಲವು ಆರೋಗ್ಯ ಸಮಸ್ಯೆಗಳ ಅಪಾಯ ಉಂಟಾಗಬಹುದು. ಅವುಗಳೆಂದರೆ-
ಹೃದಯಾಘಾತ
ಪಾರ್ಶ್ವವಾಯು
ಹೃದಯ ವೈಫಲ್ಯ
ಮೂತ್ರಪಿಂಡ ವೈಫಲ್ಯ

ನಿಮ್ಮ ರಕ್ತದೊತ್ತಡ ಇದ್ದಕ್ಕಿದ್ದಂತೆ ಅಧಿಕವಾಗಿದ್ದರೆ ಅಥವಾ ಸ್ವಲ್ಪ ಸಮಯದವರೆಗೆ ಸ್ಥಿರವಾಗಿರದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ. ರಕ್ತದೊತ್ತಡವು ದೀರ್ಘಕಾಲದ ಸಮಸ್ಯೆಯಾಗಿದ್ದು, ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವಂತೆ ಮಾಡುತ್ತದೆ. ಮನೆಯಲ್ಲಿ ಪ್ರತಿದಿನ ನಿಮ್ಮ ರಕ್ತದೊತ್ತಡವನ್ನು ಅಳೆಯುವ ಮೂಲಕ, ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಬಹುದು.

Latest News

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.