ರಾಜ್ಯದಲ್ಲಿ ಕ್ರೀಡೆ ಸತ್ತೇ ಹೋಗಿದ್ಯಾ? ಬೆಂಗಳೂರಿನ ಕ್ರೀಡಾಂಗಣಗಳ ದುಸ್ಥಿತಿ ನೋಡಿ. ಕ್ರೀಡಾಸಚಿವರೇ ಜಿಮ್ನಾಸ್ಟಿಕ್ ಪಟುಗಳ ಕಷ್ಟ ಕೇಳಿ

How to win Olympic medal in this worst condition? In Karnataka lost its track !

ವೀಕ್ಷಕರೇ ನಾನಿಂದು ಹೇಳಲು ಹೊರಟಿರುವುದು ಏನೆಂದರೆ..

ಕಂಠೀರವ ಸ್ಟೇಡಿಯಂನ ಅವ್ಯವಸ್ಥೆ ಮತ್ತು ಇಲ್ಲಿ ಕ್ರೀಡಾಪಟುಗಳು ಅನುಭವಿಸುತ್ತಿರುವ ಕಷ್ಟಗಳು… ಸಾಮಾನ್ಯವಾಗಿ ಕಂಠೀರವ ಸ್ಟೇಡಿಯಂ ಎಂದರೆ ಎಲ್ಲರಿಗೂ ನೆನಪಾಗುವುದು ಎಲ್ಲಾ ತರಹ  ಕ್ರೀಡೆಗಳು ನಡೆಯುವಂತಹ ಜಾಗ.. ಕ್ರೀಡಾಪಟುಗಳು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ..

ನಾನು ನಿಮಗೆ ಸ್ಟೇಡಿಯಂನ ವ್ಯಾಯಾಮ ಶಾಲೆಯಲ್ಲಿರುವ(Gymnastic) ವ್ಯಾಯಾಮ ವಸ್ತುಗಳು ಎರಡು ವರ್ಷಗಳಿಂದ ಹಾಳಾಗಿರುವುದಲ್ಲದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ಸಹ ಮಾಡಿಲ್ಲ.. ಇಲ್ಲಿ ಕ್ರೀಡಾಪಟುಗಳಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ .. ಇದರ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು ಸ್ಪಂದಿಸಿಲ್ಲ..

ಇಲ್ಲಿ ನೋಡ್ತಿರ್ಬೋಹುದು ನೀವು 400m ಟ್ರಾಕ್ ಕಾಣುತ್ತಿದೆ,ಇದು ದುರಸ್ತಿತಿಗೆ ಬಂದು 2 ವರ್ಷಗಳಾದರೂ ಸರಿಪಡಿಸಿಲ್ಲ… ಈ ಜಿಮ್ ಪ್ರಾರಂಭವಾಗಿ 3ರಿಂದ 4 ವರ್ಷವಾಗಿದೆ ಇಲ್ಲಿವರೆಗೂ ಯಾವ ಕ್ರೀಡಾಪಟುಗಳಿಗೆ ಜಿಮ್ ಮಾಡಲು ವ್ಯವಸ್ಥೆ ಮಾಡಿಕೊಟ್ಟಿಲ್ಲ..ಆದ್ರೆ ಅವರಿಗೆ ಬೇಕಾದಂತಹ ವ್ಯಕ್ತಿಗಳಿಗೆ or ಅಧಿಕಾರಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ..

ಈ ಟ್ರಾಕ್ ನಲ್ಲಿ 400m ಅಭ್ಯಾಸ ಮಾಡುವ ಕ್ರೀಡಾಪಟುಗಳು 200m ಟ್ರಾಕ್ ನಲ್ಲೇ ಅಭ್ಯಾಸ ಮಾಡುತ್ತಿದ್ದಾರೆ. Non-athlets ಕೂಡಾ ಬಂದು ಇದೇ ಟ್ರಾಕ್ ನಲ್ಲಿ ಅಭ್ಯಾಸ ಮಾಡುತ್ತಿರುತ್ತಾರೆ.. ಆದ್ದರಿಂದ ಕ್ರೀಡಾಪಟುಗಳಿಗೆ ಅಭ್ಯಾಸಕ್ಕೆ ತೊಂದರೆ ಉಂಟಾಗಿದೆ…

ಇದೇ ಟ್ರಾಕ್ ಮದ್ಯೇದಲ್ಲಿ shortput ಮತ್ತು ಜವಲಿನ್ ತ್ರೋ ಇನ್ನೂ ಸಾಕಷ್ಟು ಕ್ರೀಡೆಗಳನ್ನು ಅಭ್ಯಾಸ ಮಾಡುತ್ತಾರೆ ಇದರಿಂದ ಆಕಸ್ಮಿಕವಾಗಿ ಈ ಕ್ರೀಡಾ ವಸ್ತುಗಳಿಂದ ಇನ್ನುಳಿದ ಕ್ರೀಡಾಪಟುಗಳಿಗೆ ತೊಂದರೆ ಉಂಟಾಗುವ ಸಾದ್ಯತೆ ಇರುತ್ತದೆ…

ಈ ಸಮಸ್ಯೆಗಳ ಬಗ್ಗೆ ಕ್ರೀಡಾಪಟುಗಳು ಮತ್ತು ತರಬೇತಿದಾರರು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಇಲ್ಲಿವರೆಗೂ ಯಾವ ವಿಚಾರಕ್ಕೂ ಕ್ಯಾರೇ ಅಂದಿಲ್ಲ.. ಕ್ರೀಡಾಪಟುಗಳು ಅಭ್ಯಾಸ ಮಾಡುವ ಸಂದರ್ಭದಲ್ಲಿ ಹೊರಗಿನಿಂದ ಸಾರ್ವಜನಿಕರು ಸಹ ಅಭ್ಯಾಸಕ್ಕೆ ಬರುತ್ತಾರೆ ಇಂತಹ ಸಂದರ್ಭದಲ್ಲಿ ಯಾರು ಕ್ರೀಡಾಪಟುಗಳು ಯಾರು ಸಾರ್ವಜನಿಕರು ಎಂದು ಗುರುತಿಸಲು ಕಷ್ಟವಾಗುತ್ತದೆ

ಅದರ ಜೊತೆಗೆ ಕ್ರೀಡಪಟುಗಳಿಗೆ ಅಭ್ಯಾಸ ಮಾಡಲು ತುಂಬಾ ಕಷ್ಟಕರವಾಗುತ್ತಿದೆ…ಇಲ್ಲಿ ಇರುವಂತ ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ತರಬೇತುದಾರರಿಗ ಎಲ್ಲಾ ವಿಷಯ ಗೊತ್ತಿದ್ದರೂ ಸಂಬಂಧಪಟ್ಟ ಅಧಿಕಾರಗಳ ಮತ್ತು ಸಮಸ್ಯೆಗಳ ವಿರುದ್ದ ದ್ವನಿಎತ್ತಲು ಬಯಪಡುತ್ತಿದ್ದರೆ..

ನಮ್ಮ ವಿಜಯ ಟೈಮ್ಸ್ ನ reality checkup ಸಂದರ್ಭದಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆ ನಡೆದಾಗ ನಿಜವಾದ ಬಣ್ಣ ಬಯಲಿಗೆ ಬಂದಿದೆ… ಇಲ್ಲಿ ಇರುವಂತಹ ಅಧಿಕಾರಿಗಳಿಗೆ ಆದಷ್ಟು ಬೇಗ ಇಲ್ಲಿರುವ ಸಮಸ್ಯೆಗಳನ್ನ ಸರಿ ಪಡಿಸಬೇಕು ಮತ್ತು ಇನ್ನು ಮುಂದೆ ಯಾವ ಸಮಸ್ಯೆಯೂ ಬರದೆ ಇರುವಹಾಗೆ ಹೆಚ್ಚೆತ್ತುಕೊಳ್ಳಬೇಕು .. ಇದು ವಿಜಯ ಟೈಮ್ಸ್ ನ ಕಳಕಳಿಯ ಮನವಿ

ಬದಲಾವಣೆಯ ಹಾದಿ ವಿಜಯ ಟೈಮ್ಸ್

Exit mobile version