ಹುಬ್ಬಳ್ಳಿ, ಧಾರವಾಡದಲ್ಲಿ ಮಿತಿ ಮೀರಿದ ಪುಂಡರ ಹಾವಳಿ: ಕವಿವಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ.

Dharwad: ಕೆಲ ದಿನಗಳ ಹಿಂದಷ್ಟೇ ನೇಹಾ, ಅಂಜಲಿ (Neha, Anjali)ಯ ಕೊಲೆಗಳಾಗಿದೆ ಆದರೂ ಅವಳಿನಗರದಲ್ಲಿ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಪ್ರಕರಣಗಳು. ಇತ್ತೀಚಿಗಂತೂ ಹುಬ್ಬಳ್ಳಿಯಲ್ಲಿ ಮೀತಿ ಮೀರಿದ ಪುಂಡರ ಹಾವಳಿ ವಿದ್ಯಾರ್ಥಿನಿಯರಿಗೆ ಹಾಗೂ ಪಾಲಕರಿಗೂ ಭಯ ಮೂಡಿಸುತ್ತಿದೆ. ಕಿಡಿಗೇಡಿಗಳು ಪೊಲೀಸರಿಗೂ ಹೆದರುತ್ತಿಲ್ಲ, ಕಾನೂನಿಗೂ ಬಗ್ಗುತ್ತಿಲ್ಲ.  ದಿನನಿತ್ಯ  ಒಂದಲ್ಲ ಒಂದು ಹಲ್ಲೆ ದರೋಡೆ ಕೊಲೆ ನಡೆಯುತ್ತಲೇ ಇವೆ. ಇದೆಲ್ಲ ನೋಡ್ತಾ ಇದ್ರೆ ಹುಬ್ಬಳ್ಳಿ-ಧಾರವಾಡ (Hubli-Dharwad) ಸಿಟಿ ರೌಡಿಗಳ ಸಿಟಿ ಆಗ್ತಾ ಇದೆಯಾ ಎಂಬ ಅನುಮಾನ ಮೂಡುತ್ತಿದೆ.

ಇವೆಲ್ಲವುಗಳ ನಡುವೆ ಮೇ 14 ರಂದು ಕವಿವಿಯಲ್ಲಿ ರಾಣಿ ಚನ್ನಮ್ಮ‌ (Rani Channamma) ವಸತಿ ನಿಲಯದಿಂದ ಗ್ರಂಥಾಲಯಕ್ಕೆ ಹೋಗುವಾಗ  ಹೇಮಾವತಿ ಚಲವಾದಿ ಎಂಬ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿ. ಕ್ಯಾಂಪಸ್‌ನಲ್ಲೇ ಯುವತಿಯನ್ನ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಜೀವಭಯದಿಂದ ಎಬಿವಿಪಿ ಸಂಘಟನೆಗೆ ಕರೆ ಮಾಡಿದ ವಿದ್ಯಾರ್ಥಿನಿ ತನಗಾದ ನೋವನ್ನು ತೋಡಿಕೊಂಡಿದ್ದಾಳೆ.ಎಬಿವಿಪಿ (ABVP)ಸಂಘಟನೆಗಳ ಸಹಾಯದಿಂದ ವಿದ್ಯಾರ್ಥಿನಿ ಪೊಲೀಸ್  ಠಾಣೆಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಆದರೆ ಹುಬ್ಬಳ್ಳಿಯ (Hubbli) ನೇಹಾ ಹಿರೇಮಠ ಕೊಲೆ ಬಳಿಕವೂ ಎಚ್ಚೆತ್ತುಕೊಳ್ಳದ ಕವಿವಿ. ಕ್ಯಾಂಪಸ್‌ನೊಳಗೆ ಆಯಾಕಟ್ಟಿನ ಸ್ಥಳದಲ್ಲಿ ಸಿಸಿಟಿವಿ ಅಳವಡಿಸದೆ ನಿರ್ಲಕ್ಷ್ಯ ತೋರಿದೆ. ಸಿಸಿಟಿವಿ ಇಲ್ಲದ್ದು ಗಮನಿಸಿಯೇ ಯುವತಿಯನ್ನ ಅಡ್ಡಗಟ್ಟಿ ಯುವಕ ಹಲ್ಲೆ ಮಾಡಿದ್ದಾನೆ. ಇದೀಗ ಆರೋಪಿಯ ಪತ್ತೆಗೆ ಕ್ಯಾಂಪಸ್‌ನೊಳಗೆ ಸಿಸಿಟಿವಿ (CCTV) ಇಲ್ಲದಿರುವುದು ಅಡ್ಡಿಯಾಗಿದೆ. ಹಾಡಹಗಲೇ ಕ್ಯಾಂಪಸ್‌ನಲ್ಲಿ (Campus) ಓಡಾಡ್ತಿದ್ದ ವಿದ್ಯಾರ್ಥಿನಿಯರನ್ನ ಟಾರ್ಗೆಟ್ ಮಾಡಿ ಹಲ್ಲೆ ನಡೆಸುವುದು ಚುಡಾಯಿಸುವುದು ಮಾಡಿದ್ದಾನೆ. ಇಷ್ಟಾದರೂ ಕವಿವಿ ಆಡಳಿತ ಮಂಡಳಿ ಯಾವುದೇ ದೂರು ದಾಖಲಿಸಿಲ್ಲ, ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿದ್ಯಾರ್ಥಿನಿಯರೇ ಎಬಿವಿಪಿ ಕಾರ್ಯಕರ್ತರ ಸಹಾಯದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Exit mobile version