download app

FOLLOW US ON >

Wednesday, June 29, 2022
Breaking News
ಬಿಜೆಪಿ ಅಂದ್ರೆ ಬಿಸ್ನೆಸ್ ಕ್ಲಾಸಿನ ಕಾಮಧೇನು : ಹೆಚ್.ಡಿಕೆಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆಮಂಡ್ಯ ಜನರಿಗಾಗಿ ಮಾತ್ರ ನಾನು ರಾಜಕೀಯಕ್ಕೆ ಬಂದಿದ್ದೇನೆ ; ಸುಮಲತಾಕನ್ಹಯ್ಯಾ ಹತ್ಯೆ ; ಹಿಂಸೆ ಪರಿಹಾರ ಅಲ್ಲ, ಉತ್ತರವೂ ಅಲ್ಲ : ಸಿದ್ದರಾಮಯ್ಯನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ನೀಡಿದ ವ್ಯಕ್ತಿಯ ಶಿರಚ್ಛೇದ‘ಅಗ್ನಿವೀರ’ ಹುದ್ದೆಗೆ ನಿರೀಕ್ಷೆಗೂ ಮೀರಿ ಬಂದ ಅರ್ಜಿಗಳು40% ಕಮಿಷನ್ ಆರೋಪ : ಗುತ್ತಿಗೆದಾರರ ಸಂಘದಿಂದ ವರದಿ ಕೇಳಿದ ಗೃಹ ಸಚಿವಾಲಯಏಷ್ಯಾ ಖಂಡದಲ್ಲೇ ಮೊಟ್ಟ ಮೊದಲ ವಿದ್ಯುತ್ ದಾರಿದೀಪ ಅಳವಡಿಸಲ್ಪಟ್ಟ ನಗರ ‘ನಮ್ಮ ಬೆಂಗಳೂರು’‘ಸಿದ್ದರಾಮೋತ್ಸವ’ಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಲು ಸಿದ್ದರಾಮಯ್ಯ ನಿರ್ಧಾರಜುಬೇರ್‍ಗೆ ಬೆಂಬಲ : ಎತ್ತ ಸಾಗುತ್ತಿದೆ ರಾಹುಲ್ ಗಾಂಧಿ ಆಲೋಚನೆ
English English Kannada Kannada

ಫಾರಿನ್‌ ಜಾಬ್‌ ಹೆಸರಲ್ಲಿ ಭಾರೀ ಮೋಸ ! 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಂಜಿನಿಯರ್ ವಿದ್ಯಾರ್ಥಿಗಳಿಗೆ ವಂಚನೆ.

Job Cheating mafia is looting youths ! Hundreds of engineering students were cheated by fraud job consultancies in the name of job in foreign companies in Bangalore, Karnataka.

ಫಾರಿನ್‌ ಜಾಬ್‌ ಹೆಸರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೋಸ. 200ಕ್ಕೂ ಹೆಚ್ಚು ಯುವಕರಿಂದ 10ಸಾವಿರ ರೂ ಸಂಗ್ರಹ. ನ್ಯಾಯ ಕೆಳಲು ಹೋದ ವಿದ್ಯಾರ್ಥಿಗಳ ಮೇಲೆ ಆರ್‌.ಟಿ ಲಾಜಿಕ್‌ ಜಾಬ್‌ ಕನ್ಸಲ್ಟೆನ್ಸಿಯಿಂದ ದೌಜನ್ಯ. ಎಚ್ಚರ ! ಬೆಂಗಳೂರಲ್ಲಿ ತಲೆ ಎತ್ತಿವೆ ಹತ್ತರು ವಂಚಕ ಕಂಪೆನಿಗಳು

ಕೊರೋನಾದ ಬಳಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು ನಕಲಿ ಜಾಬ್‌ ಕನ್ಸಲ್ಟೆನ್ಸಿಗಳನ್ನು ತೆರೆದು ಉದ್ಯೋಗಾಂಕ್ಷಿಗಳಿಗೆ ಭಾರೀ ಮೋಸ ಮಾಡುತ್ತಿದ್ದಾರೆ. ಸಾವಿರಾರು ಯುವಕರು ಈ ವಂಚಕ ಸಂಸ್ಥೆಗಳ ಮೋಸದ ಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇಂತಹುದೇ ಒಂದು ನಕಲಿ ಜಾಬ್‌ ಕನ್ಸಲ್ಟೆನ್ಸಿ ಕಂಪೆನಿಯ ನಿಜ ರೂಪ ಈಗ ಬಯಲಾಗಿದೆ.

            ಆ ನಕಲಿ ಜಾಬ್‌ ಕನ್ಸಲ್ಟೆನ್ಸಿಯ ಹೆಸರು ಆರ್‌.ಟಿ ಲಾಜಿಕ್‌ ಜಾಬ್‌ ಕನ್ಸಲ್ಟೆನ್ಸಿ. ಈ ಕಂಪೆನಿಯ ಮೋಸದಿಂದ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಕೆಲಸದ ಕನಸು ಹೊತ್ತು ಬಂದ ಇಂಜಿನಿಯರಿಂಗ್‌ ಸ್ಟೂಡೆಂಟ್ಸ್‌ ಕನಸೆಲ್ಲಾ ನುಚ್ಚು ನೂರಾಗಿದೆ. ಈಗ ಅವರೆಲ್ಲಾ ನ್ಯಾಯ ಕೇಳುತ್ತಾ ಈಗ ಬೀದಿಗೆ ಇಳಿದಿದ್ದಾರೆ.

ಆ ವಂಚಕ ಕಂಪೆನಿ ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ವೈಷ್ಣವಿ ಸಿಗ್ನೇಚರ್‌ ಕಟ್ಟದಲ್ಲಿತ್ತು.  ಆರ್‌.ಟಿ ಲಾಜಿಕ್ ಹಾಗೂ ಇತರ ಬೇರೆ ಹೆಸರುಗಳಿಂದ ಸಾವಿರಾರು ಯುವಕರಿಗೆ ಮೋಸ ಮಾಡಿದೆ. ವಿದೇಶಿ ಕಂಪೆನಿಯಲ್ಲಿ ಕೆಲಸ ಇದೆ ಅಂತ ಹೇಳಿಕೊಂಡು ಆರ್‌.ಟಿ ಲಾಜಿಕ್ ಅನ್ನೋ ವಂಚಕ ಜಾಬ್ ಕನ್ಸಲ್ಟೆನ್ಸಿ ವಿವಿಧ ಪತ್ರಿಕೆಗಳಲ್ಲಿ  ಜಾಹೀರಾತು ನೀಡಿತ್ತು.  ಈ ಜಾಹೀರಾತನ್ನು ನೋಡಿ, ನಂಬಿ ವಿದೇಶಿ ಕೆಲಸದ ಆಸೆಯಿಂದ ಯುವಕರೆಲ್ಲಾ ಈ ಕಂಪೆನಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಹತ್ತು ಸಾವಿರದ ಐನ್ನೂರು ರೂಪಾಯಿಯನ್ನು ರಿಜಿಸ್ಟ್ರೇಷನ್‌ ಫೀಸ್ ಕೂಡ ಕೊಟ್ಟಿದ್ದಾರೆ.

ವಿದೇಶಿ ಜಾಬ್ ಪಡೀಬೇಕಾದ್ರೆ ಮೂರು ತಿಂಗಳ ವಿಶೇಷ ತರಬೇತ ಪಡೀಬೇಕು ಅನ್ನೋ ಕಂಡೀಷನ್‌ ಹಾಕಿದ್ರಿಂದ, ಈ ಯುವಕರೆಲ್ಲಾ ಮೂರು ತಿಂಗಳ ಕಾಲ ತಮ್ಮ ಕೆಲಸ ಕಾರ್ಯ ಬಿಟ್ಟು ಈ ಕಂಪೆನಿ ಸೇರಿದ್ದಾರೆ.  ದುರಂತ ಅಂದ್ರೆ ಈ ಕಂಪೆನಿ ಇವರಿಗೆ ಯಾವುದೇ ತರಬೇತಿ ನೀಡಿಲ್ಲ. 200 ಕ್ಕೂ ಹೆಚ್ಚು ಮಂದಿ ಉಕ್ರೇನ್‌ ಮೂಲದ ಕಂಪೆನಿಯಲ್ಲಿ ಉದ್ಯೋಗ ಸಿಗುತ್ತೆ ಅಂತ ಈ ಕಂಪೆನಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ರು. ಆದ್ರೆ ಈಗ ಆರ್‌.ಟಿ ಲಾಜಿಕ್‌ ಅನ್ನೋ ಕಂಪೆನಿ ಏಕಾಏಕಿ ಬಾಗಿಲು ಮುಚ್ಚಿಕೊಂಡು ಹೋಗಿದೆ. ಅಲ್ಲಿನ ಸಿಬ್ಬಂದಿ ಮೊಬೈಲ್‌ ನಂಬರ್‌ಗಳೆಲ್ಲಾ ಸ್ವಿಚ್‌ ಆಫ್‌ ಆಗಿವೆಯಂತೆ.

ಅತ್ತ ಕೆಲಸವೂ ಇಲ್ಲ, ಇತ್ತ ಹಣವೂ ಇಲ್ಲದಂತಾದ ಇವರೆಲ್ಲಾ ಈಗ ಅತಂತ್ರರಾಗಿದ್ದಾರೆ. ಆದ್ರೆ ಈ ವಂಚಕ ಕಂಪೆನಿ ಈಗ ಬೇರೆ ಹೆಸರಿನಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದ್ರೆ ಅಲ್ಲಿ ಹೋಗಿ ವಿಚಾರಿಸಿದ್ರೆ ನಮಗೂ ಆರ್‌.ಟಿ ಲಾಜಿಕ್‌ ಸಂಸ್ಥೆಗೆ ಸಂಬಂಧವೇ ಇಲ್ಲ ಅಂತ ಹೇಳಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಅನ್ನೋದು ನೊಂದವರ ದೂರು.

ಕಂಪೆನಿಯ ವಂಚನೆಯ ಬಗ್ಗೆ ಬೆಳ್ಳಂದೂರು ಪೊಲೀಸ್‌ ಠಾಣೆಗೆ ವಂಚನೆಗೊಳಗಾದವರು ದೂರು ನೀಡಿದ್ದಾರೆ. ಕ್ರಮದ ಬಗ್ಗೆ ಪೊಲೀಸರು ಭರವಸೆಯನ್ನಷ್ಟೇ ನೀಡಿದ್ದಾರೆ. ಉದ್ಯೋಗ ಕೊಡ್ತೀವಿ ಅಂತ ಹೇಳಿ ನಿರುದ್ಯೋಗಿಗಳನ್ನ, ಉದ್ಯೋಗಾಕಾಂಕ್ಷಿಗಳಿಗೆ ಭರವಸೆ ನೀಡಿ ವಂಚಿಸೋ ಅನೇಕ ನಕಲಿ ಜಾಬ್‌ ಕನ್ಸಲ್ಟೆನ್ಸಿ ಬೆಂಗಳೂರಲ್ಲಿ ತಲೆ ಎತ್ತಿವೆ. ಮಲ್ಲೇಶ್ವರಂ, ಮೆಜೆಸ್ಟಿಕ್‌, ಜಯ ನಗರದಲ್ಲಿ ನಾನಾ ಹೆಸರುಗಳಲ್ಲಿ ಜನರಿಗೆ ವಂಚಿಸುತ್ತಿವೆ. ಹಾಗಾಗಿ ಯುವಕರೇ ಎಚ್ಚರ ಉದ್ಯೋಗದ ಆಸೆಯಲ್ಲಿ ವಂಚಕರಿಗೆ ಹಣ ಕೊಟ್ಟು ಮೋಸ ಹೋಗದಿರಿ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article