ಈ ದೇಶದಲ್ಲಿ ಹೆಂಡತಿಯ ಹುಟ್ಟುಹಬ್ಬ ಮರೆತರೆ ಜೈಲೂಟ ಗ್ಯಾರಂಟಿ!

Birthday

Samoan : ಪ್ರತಿಯೊಂದು ದೇಶದಲ್ಲಿಯೂ ಒಂದೊಂದು ರೀತಿಯ ಕಾನೂನುಗಳಿರುವುದು (Husband goes to jail) ಸಹಜ. ಆದರೆ, ಕೆಲವೊಂದು ಕಾನೂನು (Law) ಅಥವಾ ನಿಯಮಗಳು ಬಹಳ ವಿಚಿತ್ರ ಎನಿಸುತ್ತವೆ.

ಇಂತದ್ದೇ ವಿಚಿತ್ರ ಕಾನೂನೊಂದು ಸಮೋವಾ ದ್ವೀಪದಲ್ಲಿದೆ, ಹೌದು, ಅದೇನು ಎನ್ನುವ ವಿವರ ಇಲ್ಲಿದೆ ನೋಡಿ.


ದಾಂಪತ್ಯ ಎನ್ನುವುದು ಸುಮಧುರ ಸಂಬಂಧ. ಹೀಗಾಗಿ ಗಂಡ-ಹೆಂಡತಿ ಪರಸ್ಪರ ಬರ್ತ್‌ಡೇಗೆ ವಿಶ್ ಮಾಡಿಕೊಳ್ಳುವುದು, ಆನಿವರ್ಸರಿ ಸೆಲಬ್ರೇಟ್ ಮಾಡಿಕೊಳ್ಳುವುದು ಮಾಡಿಕೊಳ್ಳುತ್ತಿರುತ್ತಾರೆ.

ಸಾಮಾನ್ಯವಾಗಿ, ಇಂತಹ ವಿಚಾರಗಳನ್ನು ಹೆಣ್ಣುಮಕ್ಕಳು ಮರೆಯದೆ ನೆನಪಿಟ್ಟುಕೊಂಡರೂ ಗಂಡಸರು ಪ್ರತಿ ಬಾರಿ ಹೆಂಡತಿಯ ಬರ್ತ್‌ಡೇ, ಆನಿವರ್ಸರಿ ಡೇಟ್‌ಗಳನ್ನು ಮರೆಯೋದು ಸರ್ವೇ ಸಾಮಾನ್ಯ.

ಇಂತಹ ಗಂಡಸರಿಗೆ ಸಾಕ್ಷಾತ್ ನರಕದಂತಿರುವುದು ಈ ಸ್ಥಳ. ಹೌದು, ಪೆಸಿಫಿಕ್ ಮಹಾಸಾಗರದ ಪಾಲಿನೇಷನ್ ಪ್ರದೇಶದ ಸಮೋವಾ ದ್ವೀಪದಲ್ಲಿ ಇಂತದ್ದೊಂದು ವಿಚಿತ್ರ (Weird) ಕಾನೂನು ಜಾರಿಯಲ್ಲಿದೆ.

ಪತ್ನಿಯ ಹುಟ್ಟುಹಬ್ಬವನ್ನು ಪತಿ ಆಚರಿಸಲೇಬೇಕು ಎಂಬ (husband goes to jail) ನಿಯಮ ಇಲ್ಲಿ ಕಡ್ಡಾಯವಾಗಿದೆ.

https://youtu.be/tQ1qMsn2YoE ಪ್ರಚಾರಕ್ಕೆ ಮಾತ್ರ ಸೀಮಿತವಾದ ಸರ್ಕಾರ ಕೇಂದ್ರ

ಒಂದು ವೇಳೆ ಪತಿ ಏನಾದರೂ ಅಸಡ್ಡೆ ತೋರಿಸಿದರೆ ಆತನಿಗೆ ಜೈಲು ಗ್ಯಾರಂಟಿ. ಹೌದು, ಸಮೋವಾ ಎಂಬ ದೇಶದಲ್ಲಿ ಹೆಂಡತಿಯ ಹುಟ್ಟುಹಬ್ಬವನ್ನು ಮರೆಯುವುದು ಅಪರಾಧ. ಅತ್ಯಂತ ನಿರುಪದ್ರವವೆಂದು ತೋರುವ ಕನಿಷ್ಠ ಪ್ರಮಾಣದ ಈ ಚಟುವಟಿಕೆಯು ನಿಮ್ಮನ್ನು ಜೈಲಿಗೆ ಕಳುಹಿಸುವಂತೆ ಮಾಡಬಹುದು.


ಸಮೋವಾ ಹೆಸರಿನ ಸುಂದರ ದ್ವೀಪವು (Island) ಸ್ವರ್ಗದಷ್ಟು ಸುಂದರವಾಗಿದೆ. ಆದರೆ ಹೆಂಡತಿಯನ್ನು ಅಸಡ್ಡೆ ಮಾಡುವ ಗಂಡಂದಿರಿಗೆ ಇದು ನರಕವೇ ಸರಿ. ಜನ್ಮದಿನ ಎನ್ನುವುದು ವಿಶೇಷವಾದದ್ದು ಎನ್ನುವುದು ಸರಿ, ಆ ದಿನ ವ್ಯಕ್ತಿಯನ್ನು ವಿಶೇಷವಾಗಿ ಪರಿಗಣಿಸಬೇಕು.

ಈ ದಿನ, ಪತ್ನಿಯನ್ನು ನಿರ್ಲಕ್ಷಿಸುವುದು ಆಕೆಗೆ ಮಾನಸಿಕವಾಗಿ ಹಿಂಸಿಸಿದಂತೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಸಮೋವಾದಲ್ಲಿ ನಿಮ್ಮ ಹೆಂಡತಿಯ ಜನ್ಮದಿನವನ್ನು ಮರೆತು ಬಿಡುವುದು ಕಾನೂನು ಅಪರಾಧವಾಗಿದೆ.

ಹಾಗಾದರೆ ಗಂಡನ ಹುಟ್ಟುಹಬ್ಬವನ್ನು ಹೆಂಡತಿ ಅಷ್ಟೇ ಗಮನ ಕೊಟ್ಟು ಮಾಡಬೇಕಾ? ಇದಕ್ಕೆ ಉತ್ತರ ಇಲ್ಲ.

ಇದನ್ನೂ ಓದಿ : https://vijayatimes.com/3-priests-arrested-for-child-marriage/

ಏಕೆಂದರೆ ಇಲ್ಲಿ ಗಂಡ ಮಾತ್ರ ಹೆಂಡತಿಯ ಹುಟ್ಟುಹಬ್ಬಕ್ಕೆ ಹೆಚ್ಚು ಗಮನಕೊಟ್ಟು ಮಾಡಬೇಕು. ಇನ್ನು, ಪತಿಯೇನಾದರೂ ಮೊದಲ ಬಾರಿ ಈ ರೀತಿ ತಪ್ಪು ಮಾಡಿದರೆ ಆತನನ್ನು ಕ್ಷಮಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ.

ಮತ್ತೊಮ್ಮೆ ಇದೇ ತಪ್ಪು ಪುನಾರವರ್ತನೆಯಾದರೆ, ಆ ಪತಿರಾಯ ಹೆಂಡತಿಯ ಕೆಂಗಣ್ಣಿಗೆ ಗುರಿಯಾಗಿ ಜೈಲು ಸೇರಬೇಕಾಗುತ್ತದೆ. ಹೀಗಾಗಿ ಸಮೋವಾ ದೇಶದ ಗಂಡದಿರು ತಮ್ಮ ಬರ್ತ್‌ಡೇ ಮರೆತರೂ, ಹೆಂಡತಿಯ ಹುಟ್ಟುಹಬ್ಬ ಮಾತ್ರ ಮರೆಯೋ ಹಾಗಿಲ್ಲ.

Exit mobile version